More

    ಮಳೆಯಿಂದ ನೀರು ತುಂಬಿದ್ದ ಕೆಳಸೇತುವೆಯಲ್ಲಿ ತೇಲಿದ ಶವ

    ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಮುಂಗಾರು ಮಳೆಯ ಅಬ್ಬರ ಭಾರಿ ಜೋರಾಗಿದೆ. ಭಾನುವಾರ ಬೆಳಗ್ಗೆಯಿಂದಲೇ ಭರ್ಜರಿ ಮಳೆಯಾಗುತ್ತಿದ್ದು, ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. ಹಲವು ಕೆಳಸೇತುವೆಗಳಲ್ಲಿ ನೀರು ನಿಂತಿದ್ದು, ವಾಹನ ಸಂಚಾರಕ್ಕೆ ಭಾರಿ ಅಡಚಣೆ ಉಂಟಾಗಿದೆ.

    ಇಂಥ ಪರಿಸ್ಥಿತಿಯಲ್ಲಿ ಸೆಂಟ್ರಲ್​ ದೆಹಲಿಯ ಮಿಂಟೋ ಕೆಳಸೇತುವೆಯಲ್ಲಿ ವ್ಯಕ್ತಿಯೊಬ್ಬರ ಶವ ತೇಲಿದೆ. ಸರಕು ಸಾಗಣೆ ಆಟೋರಿಕ್ಷಾ ಚಾಲಕ ಕುಂದನ್​ (60) ಮೃತ. ಈ ಬಗ್ಗೆ ಮಾಹಿತಿ ನೀಡಿರುವ ಬಾರಾಕಂಬಾ ರಸ್ತೆಯ ಎಸಿಪಿ ರಾಜೇಂದ್ರ ದುಬೆ, ಭಾನುವಾರ ಬೆಳಗ್ಗೆ 10 ಗಂಟೆಯಲ್ಲಿ ಶವ ಪತ್ತೆಯಾಯಿತು. ನವದೆಹಲಿ ರೈಲು ನಿಲ್ದಾಣದಿಂದ ಕನಾಟ್​ಪ್ಲೇಸ್​ಗೆ ಕುಂದನ್​ ಸರಕು ಸಾಗಿಸುವಾಗ ಕೆಳಸೇತುವೆಯಲ್ಲಿ ನಿಂತಿರುವ ನೀರನ್ನು ಅಂದಾಜಿಸದೆ ವಾಹನವನ್ನು ಮುನ್ನಡೆಸಿದ್ದಾರೆ. ಈ ಸಂದರ್ಭದಲ್ಲಿ ಅವರು ನೀರಿನಲ್ಲಿ ಮುಳುಗಿರಬಹುದು ಎಂದು ಶಂಕೆ ವ್ಯಕ್ತಪಡಿಸಿದ್ದಾರೆ.

    ನವದೆಹಲಿ ರೈಲುನಿಲ್ದಾಣದ ಸರಕು ಇಳಿಕೆ ವಿಭಾಗದಲ್ಲಿ ಹಳಿಗಳ ನಿರ್ವಹಣೆ ಕಾರ್ಯದಲ್ಲಿ ತೊಡಗಿದ್ದ ಟ್ರ್ಯಾಕ್​ಮನ್​ ಶವವನ್ನು ಗಮನಿಸಿದ್ದರು. ತಕ್ಷಣವೇ ಅವರು ನೀರಿಗೆ ಧುಮುಕಿ ಈಜುತ್ತಾ ಹೋಗಿ ಶವವನ್ನು ಹೊರತೆಗೆದು ಪೊಲೀಸರಿಗೆ ಮಾಹಿತಿ ನೀಡಿದ್ದರು ಎನ್ನಲಾಗಿದೆ. ಇದೇ ಕೆಳಸೇತುವೆಯಲ್ಲಿ ದೆಹಲಿ ಸಾರಿಗೆ ನಿಗಮದ ಬಸ್​ ನೀರಿನಲ್ಲಿ ಮುಳುಗಿದ್ದು, ಇದರ ಸಮೀಪದಲ್ಲೇ ಕುಂದನ್​ ಶವ ಕೂಡ ಪತ್ತೆಯಾಗಿದ್ದಾಗಿ ಪೊಲೀಸರು ಹೇಳಿದ್ದಾರೆ.

    ಇದನ್ನೂ ಓದಿ: ಸೊಳ್ಳೆಗಳಿಂದ ಹರಡುವುದಿಲ್ಲ ಕರೊನಾ, ಇದು ನಿಜಾನಾ?

    3 ಜನರ ರಕ್ಷಣೆ: ಮಿಂಟೋ ಕೆಳಸೇತುವೆಯಲ್ಲಿ ಬೆಳಗ್ಗೆಯಿಂದಲೇ ನೀರು ತುಂಬಿಕೊಂಡಿತ್ತು. ಇದರಲ್ಲಿ ಸಿಲುಕಿದ್ದ ದೆಹಲಿ ಸಾರಿಗೆ ನಿಗಮದ ಬಸ್​ನಲ್ಲಿದ್ದ ಚಾಲಕ, ನಿರ್ವಾಹಕ ಮತ್ತು ನೀರಿನಲ್ಲಿ ಸಿಲುಕಿಕೊಂಡಿದ್ದ ಆಟೋರಿಕ್ಷಾದ ಚಾಲಕ ಸೇರಿ ಮೂರು ಜನರನ್ನು ಹೊರಕರೆತರುವಲ್ಲಿ ಅಗ್ನಿಶಾಮಕದಳದ ಸಿಬ್ಬಂದಿ ಯಶಸ್ವಿಯಾಗಿದ್ದರು ಎನ್ನಲಾಗಿದೆ.

    ಈ ಬಗ್ಗೆ ಮಾಹಿತಿ ನೀಡಿರುವ ದೆಹಲಿ ಅಗ್ನಿಶಾಮಕದಳ ಸೇವೆಗಳ ನಿರ್ದೇಶಕ ಅತುಲ್​ ಗರ್ಗ್​, ಭಾನುವಾರ ಬೆಳಗ್ಗೆ 7.45ರಲ್ಲಿ ಡಿಟಿಸಿ ಬಸ್​ ಸಿಲುಕಿಕೊಂಡಿರುವ ಮಾಹಿತಿ ಲಭಿಸಿತ್ತು. ತಕ್ಷಣವೇ ಸ್ಥಳಕ್ಕೆ ತೆರಳಿದ ನಮ್ಮ ಸಿಬ್ಬಂದಿ ಬಸ್​ನ ಚಾಲಕ ಮತ್ತು ನಿರ್ವಾಹಕ ಅಲ್ಲದೆ, ಒಬ್ಬ ಆಟೋರಿಕ್ಷಾ ಚಾಲಕನನ್ನು ರಕ್ಷಿಸಿದರು. ಬಸ್​ನಲ್ಲಿ ಪ್ರಯಾಣಿಕರು ಯಾರೂ ಇರಲಿಲ್ಲ ಎಂದು ತಿಳಿಸಿದ್ದಾರೆ.

    ಷಾ ಆಪ್ತನೆಂದು ಹೇಳಿಕೊಂಡು ಗಡ್ಕರಿ ಕಚೇರಿಗೆ ಹೋಯಿತೊಂದು ಫೋನ್‌ ಕಾಲ್‌: ಮುಂದೇನಾಯ್ತು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts