More

    ಸಹಪಾಠಿಗೆ ‘ನಿಶ್ಚಿತಾರ್ಥ’ ಉಡುಗೊರೆ ನೀಡಿದ ನರ್ಸರಿ ಬಾಲಕ: ಈತ ಕೊಟ್ಟ ಚಿನ್ನದ ಮೊತ್ತ ಹೌಹಾರಿಸುವಂತಿದೆ…

    ಶಾಂಘೈ: ಪರಿಶುದ್ದತೆ ಮತ್ತು ಮುಗ್ಧತೆಯ ಪ್ರತಿರೂಪ ಎಂದೇ ಚಿಕ್ಕ ಮಕ್ಕಳನ್ನು ಪರಿಗಣಿಸಲಾಗುತ್ತದೆ. ಈ ಮಾತಿಗೆ ಅನುರೂಪವಾಗುವಂತಹ ಘಟನೆಯೊಂದು ಚೀನಾದಲ್ಲಿ ನಡೆದಿದೆ. ಚೀನಾ ಚಿಕ್ಕ ಹುಡುಗನೊಬ್ಬ ತನ್ನ ನರ್ಸರಿ ತರಗತಿಯಲ್ಲಿನ ಹುಡುಗಿಯೊಬ್ಬಳಿಗೆ ”ನಿಶ್ಚಿತಾರ್ಥ” ಉಡುಗೊರೆ ನೀಡಿದ್ದಾನೆ.

    ಇಷ್ಟೊಂದು ಚಿಕ್ಕ ವಯಸ್ಸಿನಲ್ಲಿಯೇ ನಿಶ್ಚಿತಾರ್ಥವೇ ಎಂಬ ಅಚ್ಚರಿ ಮೂಡಿದರೆ, ಆತ ಕೊಟ್ಟಿರುವ ಉಡುಗೊರೆಯು ಇನ್ನಷ್ಟು ಆಶ್ಚರ್ಯಕ್ಕೆ ಕಾರಣವಾಗುತ್ತದೆ.

    ನಾಲ್ಕು ವರ್ಷದ ಈ ಬಾಲಕ ಕೊಟ್ಟಿರುವುದು ಚಿನ್ನದ ಬಾರ್​ಗಳ ಮೌಲ್ಯ ಬರೋಬ್ಬರಿ 15,000 ಡಾಲರ್ (ಅಂದಾಜು 12 ಲಕ್ಷ ರೂಪಾಯಿ).

    ಈ ಘಟನೆ ಕುರಿತು ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ವರದಿ ಮಾಡಿದೆ.

    ಡಿಸೆಂಬರ್ 22 ರಂದು, ನೈಋತ್ಯ ಚೀನಾದ ಸಿಚುವಾನ್ ಪ್ರಾಂತ್ಯದ ಗುವಾಂಗ್‌ಆನ್‌ನಲ್ಲಿ, ಚಿಕ್ಕ ಹುಡುಗಿ ತನ್ನ ಮನೆಯಲ್ಲಿ ತನ್ನ ಹೆತ್ತವರಿಗೆ ಅಸಾಮಾನ್ಯ ಉಡುಗೊರೆಯನ್ನು ಉತ್ಸಾಹದಿಂದ ತೋರಿಸಿದಾಗ ಮನರಂಜಿಸುವ ಘಟನೆ ಬೆಳಕಿಗೆ ಬಂದಿದೆ. ಆಘಾತ ಮತ್ತು ಗೊಂದಲಕ್ಕೊಳಗಾದ ಹುಡುಗಿಯ ಪೋಷಕರು ಮರುದಿನ ತನ್ನ ಸಹಪಾಠಿಗೆ ಉಡುಗೊರೆಯನ್ನು ಹಿಂತಿರುಗಿಸುವಂತೆ ಹೇಳಿದ್ದಾರೆ. ಅಲ್ಲದೆ, ಹುಡುಗನ ಕುಟುಂಬವನ್ನು ಸಂಪರ್ಕಿಸಿದ್ದಾರೆ.

    ಆಗ ಹುಡುಗನ ಪೋಷಕರು ಕ್ಷಮೆ ಕ್ಷಮೆಯಾಚಿಸಿದ್ದಾರೆ. ಈ ಚಿನ್ನದ ಬಾರ್​ಗಳನ್ನು ತಮ್ಮ ಮಗನ ಭಾವಿ ಪತ್ನಿಗಾಗಿ ಇಡಲಾಗಿದೆ ಎಂದು ತಮ್ಮ ಮಗನಿಗೆ ತಿಳಿಸಿರುವುದಾಗಿ ಹೇಳಿದ್ದಾರೆ.

    ”ಬಾಲಕನ ಪೋಷಕರು ತಮ್ಮ ಮಗನಿಗೆ ಚಿನ್ನದ ತುಂಡುಗಳನ್ನು ಆತನ ಭಾವಿ ಪತ್ನಿಗಾಗಿ ಇಟ್ಟಿರುವುದಾಗಿ ಹೇಳಿದ್ದಾರೆ, ಆದರೆ ಅವನು ಅವುಗಳನ್ನು ರಹಸ್ಯವಾಗಿ ತೆಗೆದುಕೊಂಡು ನಮ್ಮ ಮಗಳಿಗೆ ಕೊಡುತ್ತಾನೆ ಎಂದು ನಿರೀಕ್ಷಿಸಿರಲಿಲ್ಲ,” ಎಂದು ಹುಡುಗಿಯ ತಾಯಿ ಹೇಳಿದ್ದಾರೆ.

    ಇಂತಹ ಘಟನೆಗಳು ನಡೆಯದಂತೆ ಇತರ ಪೋಷಕರೂ ಜಾಗೃತರಾಗಬೇಕು ಎಂದೂ ಅವರು ಹೇಳಿದ್ದಾರೆ.

    ಈ ಘಟನೆಯು ಆನ್‌ಲೈನ್‌ನಲ್ಲಿ ಸಾಕಷ್ಟು ವಿನೋದ ಮತ್ತು ನಗೆಯನ್ನು ಹುಟ್ಟುಹಾಕಿದೆ. ಇಬ್ಬರು ಮಕ್ಕಳ ಸ್ನೇಹವನ್ನು ಇಂಟರ್​ನೆಟ್​ ಬಳಕೆದಾರರು ಇಷ್ಟಪಟ್ಟಿದ್ದಾರೆ.

    ”ಈ ಚಿಕ್ಕ ಹುಡುಗನಿಗೆ ಧೈರ್ಯವಿದೆ, ಕೇವಲ 200 ಗ್ರಾಂ ಚಿನ್ನವನ್ನು ಆರಾಮವಾಗಿ ಕೊಟ್ಟಿದ್ದಾನೆ,” ಎಂದು ಒಬ್ಬ ಇಂಟರ್​ನೆಟ್​ ಬಳಕೆದಾರರು ಪ್ರತಿಕ್ರಿಯಿಸಿದ್ದಾರೆ.

    “ಮೊದಲ ವರ್ಷದಲ್ಲಿ, ನನ್ನ ಮಗಳ ಸಹಪಾಠಿ, ಒಬ್ಬ ಹುಡುಗ, ಅವಳಿಗೆ 200 ಯುವಾನ್ ನಗದು ನೀಡಿದ್ದ. ನಾನು ಅದೇ ಸಂಜೆ ಹುಡುಗನ ಪೋಷಕರಿಗೆ ಹಣವನ್ನು ಹಿಂದಿರುಗಿಸಿದೆ” ಎಂದು ಮತ್ತೊಬ್ಬರು ಹೇಳಿದ್ದಾರೆ.

    ಕಳೆದ ವರ್ಷ ಮೇ ತಿಂಗಳಲ್ಲಿ ಚೀನಾದ ಬಾಲಕನೊಬ್ಬ ತನ್ನ ಶಿಶುವಿಹಾರದಲ್ಲಿನ ಬಾಲಕಿಗೆ ಕೊಡಲು ತನ್ನ ತಾಯಿಯ ಚಿನ್ನದ ಬಳೆಯನ್ನು ತೆಗೆದುಕೊಂಡು ಹೋಗಿದ್ದ ಘಟನೆ ನಡೆದಿತ್ತು.

    ದೇಶದಲ್ಲಿ 756 ಹೊಸ ಕೋವಿಡ್​ ಪ್ರಕರಣ, ಐವರ ಸಾವು

    ಮೋದಿ ಲಕ್ಷದ್ವೀಪ ಭೇಟಿ ನಂತರ ಮಾಲ್ಡೀವ್ಸ್ ಸಚಿವ ಸೃಷ್ಟಿಸಿದ ವಿವಾದ: ಮಾಲ್ಡೀವ್ಸ್​ಗೆ ಪ್ರವಾಸ ರದ್ದುಗೊಳಿಸುತ್ತಿರುವ ಭಾರತೀಯರು

    “ನಾವೇಕೆ ದ್ವೇಷ ಸಹಿಸಿಕೊಳ್ಳಬೇಕು”: ಮಾಲ್ಡೀವ್ಸ್ ಬದಲು ಲಕ್ಷದ್ವೀಪಕ್ಕೆ ಬೆಂಬಲ ವ್ಯಕ್ತಪಡಿಸಿದ ಸೆಲೆಬ್ರಿಟಿಗಳು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts