More

    ನೌಕಾಪಡೆಗೆ ಅತ್ಯಾಧುನಿಕ ಹೆಲಿಕಾಪ್ಟರ್: ಜಲಾಂತರ್ಗಾಮಿಗಳನ್ನು ಗುರುತಿಸಿ ದಾಳಿ ನಡೆಸುವ ಸಾಮರ್ಥ್ಯ

    ನವದೆಹಲಿ: ನೌಕಾಪಡೆಗಾಗಿ 24 ಅತ್ಯಾಧುನಿಕ ಜಲಾಂತರ್ಗಾಮಿ ವಿರೋಧಿ ಯುದ್ಧ ಹೆಲಿಕಾಪ್ಟರ್​ಗಳನ್ನು ಖರೀದಿಸುವ ಪ್ರಕ್ರಿಯೆಗೆ ಭಾರತ ಚಾಲನೆ ನೀಡಿದೆ. ಲಾಕ್ಹೀಡ್ ಮಾರ್ಟಿನ್ ಕಂಪನಿಯಿಂದ ಎಂಎಚ್-60ಆರ್ ಹೆಲಿಕಾಪ್ಟರ್​ಗಳನ್ನು ಭಾರತ ಖರೀದಿ ಮಾಡಲಿದೆ.

    1971ರಲ್ಲಿ ಬ್ರಿಟನ್​ನಿಂದ ಖರೀದಿಸಿದ್ದ ಸೀ ಕಿಂಗ್ ಹೆಲಿಕಾಪ್ಟರ್​ಗಳನ್ನೇ ಭಾರತೀಯ ನೌಕಾಪಡೆ ಇಷ್ಟು ವರ್ಷ ಉನ್ನತೀಕರಿಸಿ ಬಳಸುತ್ತಿತ್ತು. ಈಗ ಅಮೆರಿಕದ ಎಂಎಚ್-60ಆರ್ ಹೆಲಿಕಾಪ್ಟರ್​ಗಳು ಈ ಸ್ಥಾನ ತುಂಬಲಿವೆ. ಹಿಂದು ಮಹಾಸಾಗರದಲ್ಲಿ ಚೀನಾ ಮತ್ತು ಪಾಕಿಸ್ತಾನದ ಜಲಾಂತರ್ಗಾಮಿಗಳು ಹಾಗೂ ಯುದ್ಧ ನೌಕೆಗಳ ಮೇಲೆ ಇವು ನಿಗಾ ವಹಿಸಲಿವೆ.

    ಇದನ್ನೂ ಓದಿ     ಲಾಕ್‌ಡೌನ್ 4.0: ಕೇಂದ್ರದ ಮಾರ್ಗಸೂಚಿ ಶನಿವಾರ ಪ್ರಕಟ ನಿರೀಕ್ಷೆ- ಏನಿರುತ್ತೆ ಹೊಸ ನಿಯಮದಲ್ಲಿ?

    ಕಳೆದ ವರ್ಷ ಏಪ್ರಿಲ್​ನಲ್ಲಿ ಅಮೆರಿಕ ಭಾರತಕ್ಕೆ 2.6 ಬಿಲಿಯನ್ ಡಾಲರ್ ಮೌಲ್ಯದ ಶಸ್ತಾಸ್ತ್ರ ಖರೀದಿಗೆ ಒಪ್ಪಿಗೆ ನೀಡಿತ್ತು. ಪ್ರಸ್ತುತ ಖರೀದಿಸುತ್ತಿರುವ ಹೆಲಿಕಾಪ್ಟರ್​ಗಳು 905 ಮಿಲಿಯನ್ ಡಾಲರ್​ನದ್ದಾಗಿದ್ದು, ಇದು ಒಪ್ಪಂದದ ಒಟ್ಟು ಮೊತ್ತದ ಅರ್ಧಕ್ಕಿಂತ ಕಡಿಮೆ ಇದೆ. 2.6 ಬಿಲಿಯನ್ ಒಪ್ಪಂದದಲ್ಲಿ ವಿವಿಧ ಯುದ್ಧ ಹೆಲಿಕಾಪ್ಟರ್​ಗಳು, ಅವುಗಳ ಸೆನ್ಸರ್ ಮತ್ತು ಸಂವಹನ ವ್ಯವಸ್ಥೆ, ಹಡಗುಗಳ ಮೇಲೆ ದಾಳಿ ನಡೆಸಬಲ್ಲ ಹೆಲ್​ಫೈರ್ ಕ್ಷಿಪಣಿ, ಎಂಕೆ 54 ಟಾರ್ಪಿಡೊ ಮತ್ತು ಸ್ಟ್ರೈಕ್ ರಾಕೆಟ್ ವ್ಯವಸ್ಥೆ ಇನ್ನೂ ಅತ್ಯಾಧುನಿಕ ಶಸ್ತ್ರಾಸ್ತ್ರಗಳು ಸೇರಿವೆ. ಇದರಲ್ಲಿ ಮೊದಲ ಭಾಗವಾಗಿ ಎಂಎಚ್-60ಆರ್ ಹೆಲಿಕಾಪ್ಟರ್​ಗಳನ್ನು ಖರೀದಿಸಲಾಗುತ್ತಿದೆ. ಎನ್​ಎಸ್​ಎಂ ಕ್ಷಿಪಣಿ ಮೂಲಕ ಈ ಹೆಲಿಕಾಪ್ಟರ್​ಗಳು 185 ಕಿ.ಮೀ ವ್ಯಾಪ್ತಿವರೆಗೂ ದಾಳಿ ನಡೆಸುವ ಸಾಮರ್ಥ್ಯ ಪಡೆಯುತ್ತವೆ.

    ಅಮೆರಿಕದ ನೌಕಾಪಡೆ ಮೂಲಕ ಒಪ್ಪಂದ ಪ್ರಕ್ರಿಯೆ ನಡೆಸಲಾಗುತ್ತಿದ್ದು, ಸದ್ಯ ಮೂರು ಎಂಎಚ್-60 ಆರ್ ಹೆಲಿಕಾಪ್ಟರ್​ಗಳ ಹಸ್ತಾಂತರ ಪ್ರಕ್ರಿಯೆಯನ್ನು ವೇಗಗೊಳಿಸಲು ಲಾಕ್ಹೀಡ್ ಮಾರ್ಟಿನ್ ಕಂಪನಿಗೆ ಅಮೆರಿಕ ಅನುಮತಿ ನೀಡಿದೆ. ಇದರ ಜತೆಗೆ ಭಾರತೀಯ ನೌಕಾಪಡೆಯ ಪೈಲಟ್​ಗಳು ಹಾಗೂ ಇಂಜಿನಿಯರ್​ಗಳಿಗೆ ಈ ಹೆಲಿಕಾಪ್ಟರ್​ಗಳು, ಕ್ಷಿಪಣಿ ಸೇರಿ ಖರೀದಿ ಒಪ್ಪಂದದಲ್ಲಿರುವ ವಿವಿಧ ಶಸ್ತ್ರಾಸ್ತ್ರಗಳ ಬಳಕೆ ಬಗ್ಗೆ ಸಂಪೂರ್ಣ ತರಬೇತಿ ನೀಡಲಾಗುತ್ತದೆ. ಯೋಜನೆ ಅಂದುಕೊಂಡಂತೆ ಸಾಗಿದರೆ ಮುಂದಿನ ವರ್ಷ ಅಮೆರಿಕದಿಂದ ಎಂಎಚ್-60 ಆರ್ ಹೆಲಿಕಾಪ್ಟರ್​ಗಳ ಮೊದಲ ಬ್ಯಾಚ್ ಭಾರತಕ್ಕೆ ಹಸ್ತಾಂತರವಾಗಲಿದೆ.

    ಮುತ್ತಪ್ಪ ರೈ ಸಾವಿಗೆ ಒಂದು ದಿನ ಮೊದಲು ಕುತೂಹಲ ಕೆರಳಿಸಿದ ಡಾನ್​ ಜಯರಾಜ್​ ಪುತ್ರನ ಟ್ವೀಟ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts