More

    ಹೆರಿಗೆ ಆದಾಗ ಹೆಣ್ಣು ಮಗು, ಕೊನೆಗೆ ಕೊಟ್ಟದ್ದು ಗಂಡು ಮಗು! ಆಸ್ಪತ್ರೆ ಎಡವಟ್ಟಿಗೆ ಪಾಲಕರು ಆಕ್ರೋಶ

    ಮಂಗಳೂರು: ನಿಮಗೆ ಹೆಣ್ಣು ಮಗು ಜನಿಸಿದೆ ಎಂದಿದ್ದ ಆಸ್ಪತ್ರೆ ಸಿಬ್ಬಂದಿ, ಕೊನೆಗೆ ಕೊಟ್ಟದ್ದು ಮಾತ್ರ ಗಂಡು ಮಗು! ಇಂತಹ ವಿಚಿತ್ರ ಘಟನೆ ನಗರದ ಲೇಡಿಗೋಷನ್​ ಆಸ್ಪತ್ರೆಯಲ್ಲಿ ಸಂಭವಿಸಿದೆ.

    ಹೆರಿಗೆ ವೇಳೆ ನನ್ನ ಪತ್ನಿಗೆ ಹೆಣ್ಣು ಮಗು ಜನಿಸಿದೆ ಎಂದು ಆಸ್ಪತ್ರೆ ಸಿಬ್ಬಂದಿ ನನಗೆ ತಿಳಿಸಿದ್ದರು. ಅದಕ್ಕೆ ದಾಖಲೆಯನ್ನೂ ನೀಡಿದ್ದರು. ಬಳಿಕ ಗಂಡು ಮಗು ಕೊಟ್ಟಿದ್ದಾರೆ ಎಂದು ಎಂದು ಕುಂದಾಪುರ ಮೂಲದ ಮುಸ್ತಾಫಾ ಎಂಬುವರು ಆರೋಪಿಸಿದ್ದಾರೆ.

    ಮುಸ್ತಾಪ ಅವರ ಪತ್ನಿ ಸೆ.27ರಂದು ಹೆರಿಗೆಗೆಂದು ಆಸ್ಪತ್ರೆಗೆ ದಾಖಲಾಗಿದ್ದು, ಬಿಪಿ ಇದ್ದ ಕಾರಣ ಸಿಸೇರಿಯನ್​ ಮೂಲಕ ಮಗು ಹೊರ ತೆಗೆಯಲಾಗಿತ್ತು. ಈ ವೇಳೆ ಹೆಣ್ಣು ಮಗು ಎಂದು ಆಸ್ಪತ್ರೆ ಸಿಬ್ಬಂದಿ ತಿಳಿಸಿದ್ದರು. ಮಗುವಿನ ಆರೋಗ್ಯದಲ್ಲಿ ಏರುಪೇರಾದ ಕಾರಣ 18 ದಿನ ಐಸಿಯುವಿನಲ್ಲಿ ಚಿಕಿತ್ಸೆ ನೀಡಲಾಗಿತ್ತು. ಬಳಿಕ ಮಗುವನ್ನು ಬ್ರಹ್ಮಾವರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಅಲ್ಲಿನ ವೈದ್ಯರು ದಾಖಲೆಯಲ್ಲಿ ಮಗು ಗಂಡು ಎಂದು ದಾಖಲಿಸಿದ್ದಾರೆ. ಈ ಕುರಿತು ಲೇಡಿಗೋಷನ್​ ಆಸ್ಪತ್ರೆಗೆ ಬಂದು ವಿಚಾರಿಸಿದಾಗ “ಮಗು ನಿಮ್ಮದೇ, ಕಡತದಲ್ಲಿ ದಾಖಲಿಸುವಾಗ ತಪ್ಪಾಗಿದೆ’ ಎಂದು ವೈದ್ಯಾಧಿಕಾರಿ ತಿಳಿಸಿದ್ದಾಗಿ ಮುಸ್ತಾಫಾ ಮಾಹಿತಿ ನೀಡಿದ್ದಾರೆ. ಈ ಸಂಬಂಧ ಬಂದರು ಠಾಣೆಯಲ್ಲಿ ದೂರು ನೀಡಲಾಗಿದ್ದು, ಡಿಎನ್​ಎ ಟೆಸ್ಟ್​ ಮಾಡಿಸಿ ಖಚಿತ ಪಡಿಸಬೇಕು ಎಂದು ಆಗ್ರಹಿಸಿದ್ದಾರೆ.

    ಬೇಯಿಸಿದ ಮೊಟ್ಟೆ ತಿಂದು ಪ್ರಾಣಬಿಟ್ಟ ಮಹಿಳೆ! ಮೊಟ್ಟೆ ಪ್ರಿಯರನ್ನ ಬೆಚ್ಚಿಬೀಳಿಸುತ್ತೆ ಈ ಘಟನೆ

    ಪರಸ್ತ್ರೀ ಜತೆ ಗ್ರಾಪಂ ಅಧ್ಯಕ್ಷೆ ಗಂಡನ ಕಾಮದಾಟ! ವಾಟ್ಸ್ಆ್ಯಪ್​ ಗ್ರೂಪ್​ಗೆ ತನ್ನದೇ ಫೋಟೋ ತಾನೇ ಹಾಕಿಕೊಂಡ…

    ವಿವಿಧ ಇಲಾಖಾ ಪರೀಕ್ಷೆಗಳಿಗೆ ಅರ್ಜಿ ಆಹ್ವಾನಿಸಿದ ಕೆಪಿಎಸ್​ಸಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts