More

    ಚಾಮುಂಡಿ ಬೆಟ್ಟದಲ್ಲಿ ಆಷಾಢ ಶುಕ್ರವಾರ ವಿಶೇಷ ಪೂಜೆ: ಎರಡು ವರ್ಷದ ಬಳಿಕ ಭಕ್ತರ ಪ್ರವೇಶಕ್ಕೆ ಅವಕಾಶ

    ಮೈಸೂರು: ಎರಡು ವರ್ಷಗಳ ಬಳಿಕ ಈ ಬಾರಿ ಆಷಾಢ ಶುಕ್ರವಾರಗಳಂದು ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಲು ಭಕ್ತರಿಗೆ ಅವಕಾಶ ಸಿಗಲಿದೆ. ಜುಲೈ 1, 8, 15 ಹಾಗೂ 22ರಂದು ಆಷಾಢ ಶುಕ್ರವಾರದ ಪೂಜೆ ಹಾಗೂ ಜು.20ರಂದು ವರ್ಧಂತಿ ಮಹೋತ್ಸವ ನಡೆಯಲಿದ್ದು, ಆ ದಿನಗಳಲ್ಲಿ ಬೆಟ್ಟಕ್ಕೆ ಹೆಚ್ಚಿನ ಭಕ್ತರು ಆಗಮಿಸುವ ನಿರೀಕ್ಷೆ ಇದೆ.

    ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ಈ ಕುರಿತು ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಎಸ್​.ಟಿ.ಸೋಮಶೇಖರ್​, ಚಾಮುಂಡಿ ಬೆಟ್ಟದಲ್ಲಿ ಆಷಾಢ ಮಾಸದ ಶುಕ್ರವಾರಗಳಂದು ಜರುಗುವ ವಿಶೇಷ ಪೂಜೆ ಹಾಗೂ ಅಮ್ಮನವರ ವರ್ಧಂತ್ಯುತ್ಸವ ಸಂದರ್ಭದಲ್ಲಿ ಬೆಟ್ಟಕ್ಕೆ ಆಗಮಿಸುವ ಭಕ್ತರಿಗೆ ಯಾವುದೇ ತೊಂದರೆ ಉಂಟಾಗದಂತೆ ಕ್ರಮ ವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
    ಈ ಬಾರಿಯ ಆಷಾಢ ಶುಕ್ರವಾರಗಳು
    ಜುಲೈ 1 ಮೊದಲನೇ ಆಷಾಢ ಶುಕ್ರವಾರ
    ಜುಲೈ 8 ಎರಡನೇ ಆಷಾಢ ಶುಕ್ರವಾರ
    ಜುಲೈ 15 ಮೂರನೇ ಆಷಾಢ ಶುಕ್ರವಾರ
    ಜುಲೈ 20 ಅಮ್ಮನವರ ವರ್ಧಂತಿ ಮಹೋತ್ಸವ
     ಜುಲೈ 22 ನಾಲ್ಕನೇ ಹಾಗೂ ಕೊನೆಯ ಆಷಾಢ ಶುಕ್ರವಾರ

    ಎರಡು ಡೋಸ್​ ಹಾಕಿಸಿಕೊಂಡರೆ ಪ್ರವೇಶ: ಕೋವಿಡ್​ ಲಸಿಕೆ ಎರಡು ಡೋಸ್​ ಹಾಕಿಸಿಕೊಂಡವರಿಗೆ ಮಾತ್ರ ಚಾಮುಂಡಿ ಬೆಟ್ಟಕ್ಕೆ ಪ್ರವೇಶಿಸಲು ಅವಕಾಶ ಕಲ್ಪಿಸಲಾಗುವುದು. ಇಲ್ಲವಾದಲ್ಲಿ 72 ಗಂಟೆಯೊಳಗೆ ಕೋವಿಡ್​ ಪರೀಕ್ಷೆ ಮಾಡಿಸಿರುವ ನೆಗೆಟಿವ್​ ರಿಪೋರ್ಟ್​ ಇರಬೇಕು. ಈ ಸಂಬಂಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಪ್ರಸಾದ್​ ಅವರಿಗೆ ಸಚಿವ ಎಸ್​.ಟಿ.ಸೋಮಶೇಖರ್ ನಿರ್ದೇಶಿಸಿದ್ದಾರೆ. ಸುರಕ್ಷತೆಯ ದೃಷ್ಟಿಯಿಂದ ಮೆಟ್ಟಿಲು ಮಾರ್ಗದಲ್ಲಿ ಸಿಸಿಟಿವಿ ಕ್ಯಾಮರಾ ಅಳವಡಿಸಲಾಗುವುದು. ಈಗಾಗಲೇ ದೇವಸ್ಥಾನದ ಸುತ್ತಮುತ್ತ ಕ್ಯಾಮರಾ ಅಳವಡಿಸಲಾಗಿದೆ.

    ಲಲಿತ್​ ಮಹಲ್​ ಬಳಿ ಪಾರ್ಕಿಂಗ್​: ಇಷ್ಟು ವರ್ಷ ಚಾಮುಂಡಿ ಬೆಟ್ಟಕ್ಕೆ ಬರುವ ಎಲ್ಲ ಖಾಸಗಿ ವಾಹನಗಳನ್ನು ಹೆಲಿಪ್ಯಾಡ್​ ಬಳಿ ನಿಲ್ಲಿಸಿ, ಅಲ್ಲಿಂದ ಕೆಎಸ್​ಆರ್​ಟಿಸಿ ಬಸ್​ಗಳ ಮೂಲಕ ತೆರಳುವ ವ್ಯವಸ್ಥೆ ಮಾಡಲಾಗುತ್ತಿತ್ತು. ಈ ಬಾರಿ ಲಲಿತಮಹಲ್​ ಬಳಿಯ 18 ಎಕರೆ ಜಾಗದಲ್ಲಿ ಪಾರ್ಕಿಂಗ್​ ಸೌಲಭ್ಯ ಕಲ್ಪಿಸಲಾಗಿದೆ. ಅಲ್ಲಿಂದ ಬೆಟ್ಟಕ್ಕೆ ಸಾರ್ವಜನಿಕರನ್ನು ಕೆಆರ್​ಎಸ್​ಟಿಸಿ ಬಸ್​ ಮೂಲಕ ಕರೆದೊಯ್ಯಲಾಗುವುದು. ಇದಕ್ಕಾಗಿ 50 ಬಸ್​ ನೀಡುವಂತೆ ಕೆಎಸ್​ಆರ್​ಟಿಸಿ ಡಿಸಿಗೆ ಸೂಚಿಸಲಾಗಿದೆ. ಭಕ್ತರಿಗೆ ಉಚಿತ ಪ್ರಯಾಣ ಇರುತ್ತದೆ. ಈ ಹಣವನ್ನು ದೇವಸ್ಥಾನದಿಂದ ಭರಿಸಲು ಸೂಚಿಸಲಾಗಿದೆ ಎಂದು ಸಭೆ ಸಚಿವ ಎಸ್​.ಟಿ.ಸೋಮಶೇಖರ್ ತಿಳಿಸಿದ್ದಾರೆ.

    ಕೋತಿರಾಜ್ ಥರಾ ಸರಸರನೆ ಚಿತ್ರದುರ್ಗ ಕೋಟೆ ಏರಿದ IPS ಅಧಿಕಾರಿ​! ಮಂಗ್ಳೂರು ಕಮೀಷನರ್​ರ ಸಾಹಸಕ್ಕೆ ಮನಸೋತ ಜನ

    ಮೈಸೂರಲ್ಲಿ 2ನೇ ಪತ್ನಿಯ ರುಂಡ-ಮುಂಡ ಕತ್ತರಿಸಿ ಭೀಕರ ಕೊಲೆ! ತಂದೆಯ ಕರಾಳ ಮುಖ ಬಿಚ್ಚಿಟ್ಟ 20 ವರ್ಷದ ಮಗಳು

    ಏಕಾಏಕಿ ವಾಹನ ತಡೆಯಂಗಿಲ್ಲ, ಟ್ರಾಫಿಕ್​ ಪೊಲೀಸರಿಗೆ DGP ಖಡಕ್​​ ಸೂಚನೆ: ಎಎಸ್​ಐ-ಮುಖ್ಯಪೇದೆ ಅಮಾನತು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts