ಮೈಸೂರು: ಈ ಹಿಂದೆ ನಂಜನಗೂಡಿನ ಪೆಟ್ರೋಲ್ ಬಂಕ್ನಲ್ಲಿ ತಮ್ಮ ಜೀಪ್ಗೆ ಡೀಸೆಲ್ ಹಾಕಿಲ್ಲ ಎಂದು ರಂಪಾಟ ಮಾಡಿ ಪೆಟ್ರೋಲ್ ಬಂಕ್ ಸುಟ್ಟು ಹಾಕುತ್ತೇನೆ ಎಂದು ಹೇಳುವ ಮೂಲಕ ದೊಡ್ಡ ವಿವಾದವನ್ನೇ ಸೃಷ್ಟಿಸಿದ್ದ ಮಹಿಳಾ ಸಬ್ ಇನ್ಸ್ಪೆಕ್ಟರ್ ಯಾಸ್ಮಿನ್ ತಾಜ್ ಈಗ ಮತ್ತೊಂದು ಕಿರಿಕ್ ಮಾಡಿಕೊಂಡಿದ್ದಾರೆ.
ಅಪಘಾತವಾಗಿದ್ದನ್ನೇ ನೆಪವಾಗಿಟ್ಟುಕೊಂಡು ಸಾರ್ವಜನಿಕವಾಗಿಯೇ ಆಟೋ ಚಾಲಕನಿಗೆ ಅವಾಚ್ಯ ಶಬ್ದದಿಂದ ನಿಂದಿಸಿದ್ದು, ಈ ದೃಶ್ಯ ಜಾಲತಾಣದಲ್ಲಿ ವೈರಲ್ ಅಗಿದೆ.
ಮೈಸೂರು ನಗರದ ಎಸ್ಪಿ ಕಚೇರಿ ವೃತ್ತದ ಬಳಿ ಯಾಸ್ಮಿನ್ ತಾಜ್ ಸ್ಕೂಟರ್ನಲ್ಲಿ ತೆರಳುತ್ತಿದ್ದಾಗ ಆಟೋವೊಂದು ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಇದನ್ನೇ ನೆಪವಾಗಿಟ್ಟುಕೊಂಡು ಸಾರ್ವಜನಿಕವಾಗಿಯೇ ಚಾಲಕನ ಮೇಲೆ ಅವಾಚ್ಯ ಶಬ್ದದಿಂದ ನಿಂದಿಸಿ ಗಲಾಟೆ ಮಾಡಿದ್ದಾರೆ. ಈ ದೃಶ್ಯವನ್ನು ಸ್ಥಳದಲ್ಲಿದ್ದವರು ಮೊಬೈಲ್ ಕ್ಯಾಮರಾದಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.
ಶಿಕ್ಷಕಿಗೆ ಒಳ ಉಡುಪು ಗಿಫ್ಟ್ ಕೊಟ್ಟು ಸುತ್ತಾಡೋಕೆ ಹೊರ ಕರೆದ ಮನೆ ಮಾಲೀಕ… ಒಲ್ಲೆ ಎಂದಾಕೆಗೆ ಕ್ವಾಟ್ಲೆ ಶುರು…
ತಂಗಿ ಸತ್ತರೂ ಯಾರಿಗೂ ಹೇಳದೆ 4 ದಿನ ಶವದ ಜತೆ ಒಬ್ಬಳೇ ಇದ್ದ ಅಕ್ಕ! ಇವರಿಬ್ಬರ ಬದುಕೇ ಕರುಣಾಜನಕ