More

    ಹೊಲದಲ್ಲಿ ಮಗುವನ್ನ ಎಸೆದು ಹೋದ ಕಟುಕರು: ರಾತ್ರಿಯಿಡೀ ಕಾವಲು ಕಾದು ಮಗುವಿನ ಪ್ರಾಣ ಉಳಿಸಿದ ಬೀದಿನಾಯಿ!

    ಛತ್ತೀಸ್​ಗಡ: ದುಷ್ಕರ್ಮಿಗಳು ಹೊಲದಲ್ಲಿ ಎಸೆದು ಹೋಗಿದ್ದ ನವಜಾತ ಶಿಶುವನ್ನು ಬೀದಿನಾಯಿಯೊಂದು ರಾತ್ರಿಯಿಡೀ ಕಾವಲು ಕಾದು ಮಗುವಿನ ಪ್ರಾಣ ಉಳಿಸಿದ್ದು, ಮನುಷ್ಯ ಕುಲಕ್ಕಿಂತ ಮೂಕ ಪ್ರಾಣಿಯೇ ಲೇಸು ಎಂಬುದನ್ನ ಜಗತ್ತಿಗೆ ಸಾರಿ ಸಾರಿ ಹೇಳುವಂತೆ ಮಾಡಿದೆ.

    ಇಂತಹ ಘಟನೆ ಮುಂಗೇಲಿ ಜಿಲ್ಲೆ ಲೊರ್ಮಿಯ ಸರಿಸ್ತಾಲ್​ ಗ್ರಾಮದಲ್ಲಿ ಮೂರು ದಿನದ ಹಿಂದೆ ನಡೆದಿದೆ. ಹೆಣ್ಣು ಮಗು ಎಂಬ ಕಾರಣಕ್ಕೋ, ಅಕ್ರಮ ಸಂಬಂಧದ ಫಲವೋ… ಆಗಷ್ಟೇ ಜನಿಸಿದ ಕೂಸನ್ನು ಯಾರೋ ದುಷ್ಕರ್ಮಿಗಳು ಜಮೀನೊಂದರಲ್ಲಿ ಇಟ್ಟು ಹೋಗಿದ್ದರು. ಹೊಕ್ಕಳು ಬಳ್ಳಿಯೊಂದಿಗೆ ಯಾವುದೇ ಬಟ್ಟೆ ಇಲ್ಲದೆ ಮಗು ಇತ್ತು. ಅಲ್ಲೇ ಇದ್ದ ಬೀದಿನಾಯಿಯೊಂದು ಹಸುಗೂಸಿನ ಜತೆಗೆ ತನ್ನ ಮರಿಗಳನ್ನೂ ಮಲಗಿಸಿ ಕೊರೆಯುವ ಚಳಿಯನ್ನೂ ಲೆಕ್ಕಿಸದೆ ರಾತ್ರಿಯಿಡೀ ಕಾವಲು ಕಾದಿದೆ.

    ಬೆಳಗ್ಗೆ ಮಗು ಅಳುವ ಶಬ್ದ ಕೇಳಿದ ಗ್ರಾಮಸ್ಥರು ಸ್ಥಳಕ್ಕೆ ಬಂದು ನೋಡಿದಾಗ ನಾಯಿಮರಿಗಳ ಜತೆ ಹಸುಗೂಸು ಮಲಗಿರುವುದು ಕಂಡುಬಂದಿದೆ. ಕೂಡಲೇ ಗ್ರಾಮ ಪಂಚಾಯಿತಿಗೆ ಮಾಹಿತಿ ನೀಡಿ, ಪೊಲೀಸರನ್ನು ಸ್ಥಳಕ್ಕೆ ಕರೆಸಿದ್ದಾರೆ. ಮಗುವಿನ ಮೈಮೇಲೆ ಯಾವುದೇ ಗಾಯದ ಗುರುತು ಇರಲಿಲ್ಲ. ಸ್ಥಳೀಯ ಆಸ್ಪತ್ರೆಯಲ್ಲಿ ಮಗುವಿನ ಆರೋಗ್ಯ ತಪಾಸಣೆ ಮಾಡಿಸಿದ್ದು, ಮಗು ಆರೋಗ್ಯವಾಗಿದೆ. ಸದ್ಯ ಈ ಮಗುವನ್ನ ಮಕ್ಕಳ ಕಲ್ಯಾಣ ಇಲಾಖೆ ಸುಪರ್ದಿಗೆ ಕೊಡಲಾಗಿದ್ದು, ಮಗುವನ್ನ ಎಸೆದು ಹೋದ ದುಷ್ಕರ್ಮಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ಇನ್ನು ಈ ಮಗುವಿಗೆ ಆಕಾಂಕ್ಷ ಎಂದು ಹೆಸರಿಡಲಾಗಿದೆ.

    ನಾಯಿ ಮರಿಗಳ ಜತೆ ಮಗು ಇದ್ದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಹೆತ್ತ ಮಗುವನ್ನೇ ಬೀದಿಗೆ ಎಸೆದ ಕಟುಕರಿಗೆ ಶಿಕ್ಷಿಸಿ ಎಂದು ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ. ಇನ್ನು ಪುಟ್ಟ ಕಂದನ ಪ್ರಾಣ ಉಳಿಸಿದ ನಾಯಿಗೆ ಶಹಬ್ಬಾಸ್​ ಎನ್ನುತ್ತಿರುವ ನೆಟ್ಟಿಗರು, ಸಾಕ್ಷತ್​ ದೇವರು ಅಂದ್ರೆ ಅದುವೆ ನಿಯತ್ತಿನ ಪ್ರಾಣಿ ನಾಯಿ ಎಂದು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

    ಟ್ರೆಂಡ್​ ಆಯ್ತು ಮದ್ವೆ ಆಹ್ವಾನ ಪತ್ರಿಕೆಯಲ್ಲಿ ಅಪ್ಪು ಫೋಟೋ: ಪುನೀತ್​ ಅಗಲಿಕೆ ನೋವಲ್ಲೂ ಹೆಚ್ಚುತ್ತಿದೆ ಅಭಿಮಾನ

    ಮಗಳೇ ನೀನಿನ್ನೂ ಚಿಕ್ಕವಳು, ಬೇಡ ಕಣವ್ವಾ ಅಂದ್ರೂ ಕೇಳಲಿಲ್ಲ… ಬಾಳಿ ಬದುಕಬೇಕಿದ್ದವರ ಬಾಳಲ್ಲಿ ನಡೆಯಿತು ಘೋರ ದುರಂತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts