More

    ಬೆಂಗಳೂರಲ್ಲಿ ಮೊಬೈಲ್ ಕಳ್ಳರ ಬಂಧನದಿಂದ ಬಯಲಾಯ್ತು ಕೊಲೆ ಕೇಸ್​!

    ಬೆಂಗಳೂರು: ಮೊಬೈಲ್ ಮಳಿಗೆಗೆ ನುಗ್ಗಿ ಸ್ಮಾರ್ಟ್ ಫೋನ್​ ಕಳವು ಮಾಡಿದ್ದ ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಬಿಹಾರದಲ್ಲಿ ನಡೆದಿದ್ದ ಕೊಲೆ ಕೇಸು ಬೆಳಕಿಗೆ ಬಂದಿದೆ.

    ಬಿಹಾರ ಮೂಲದ ಮಹಮ್ಮದ್ ಇಫ್ತಿಕಾರ್ ಅಲಿಂ ಮತ್ತು ಮಹಮ್ಮದ್ ಸಾಹೀಬ್ ಬಂಧಿತರು. 1.40 ಲಕ್ಷ ರೂ. ಮೌಲ್ಯದ 17 ಸ್ಮಾರ್ಟ್ ಫೋನ್‌ಗಳನ್ನು ಜಪ್ತಿ ಮಾಡಿರುವುದಾಗಿ ಪೊಲೀಸ್​ ಅಧಿಕಾರಿಗಳು ತಿಳಿಸಿದ್ದಾರೆ. ಬಿಹಾರ ಮೂಲದ ಆರೋಪಿಗಳು ಕ್ಷುಲ್ಲಕ ಕಾರಣಕ್ಕೆ ಸ್ನೇಹಿತನನ್ನು ಗುಂಡು ಹಾರಿಸಿ ಹತ್ಯೆ ಮಾಡಿ ಬಂಧನ ಭೀತಿಯಿಂದ ಬೆಂಗಳೂರಿಗೆ ಬಂದು ಕೆಲ ವರ್ಷಗಳಿಂದ ನೆಲೆಸಿದ್ದರು. ಎಸಿ ಮೆಕಾನಿಕ್ ಆಗಿದ್ದ ಆರೋಪಿಗಳು ಬೆಳಗ್ಗೆ ಎಲ್ಲ ಕಡೆ ಓಡಾಡಿ ಅಂಗಡಿ ಗುರುತು ಮಾಡಿಕೊಳ್ಳುತ್ತಿದ್ದರು.

    ರಾತ್ರಿ ವೇಳೆ ಅಂಗಡಿಗೆ ಹೋಗಿ ಷಟರ್ ಮೀಟಿ ಒಳ ನುಗ್ಗಿ ಬೆಲೆ ಬಾಳುವ ವಸ್ತುಗಳನ್ನು ಕದ್ದು ಮಾರಾಟ ಮಾಡುತ್ತಿದ್ದರು. ಆ. 1ರಂದು ಹುಣಸಮಾರನಹಳ್ಳಿಯಲ್ಲಿ ಇರುವ ಎರಡು ಮೊಬೈಲ್ ಅಂಗಡಿಗೆ ನುಗ್ಗಿ 17 ಹೊಸ ಮೊಬೈಲ್ ಕಳವು ಮಾಡಿದ್ದರು. ಈ ಕುರಿತು ತನಿಖೆ ಕೈಗೊಂಡ ಚಿಕ್ಕಜಾಲ ಪೊಲೀಸರಿಗೆ ಸ್ಥಳದಲ್ಲಿ ಸಿಸಿ ಕ್ಯಾಮರಾ ದೃಶ್ಯಾವಳಿ ಲಭ್ಯವಾಗಿತ್ತು. ಜತೆಗೆ ಕದ್ದ ಮೊಬೈಲ್‌ಗಳು ಚಾಲನೆಯಲ್ಲಿ ಇದ್ದವು. ಮೊಬೈಲ್ ಐಪಿ ನಂಬರ್ ಆಧರಿಸಿ ಆರೋಪಿಗಳನ್ನು ಬಂಧಿಸಲಾಗಿದೆ. ಕದ್ದ ಮೊಬೈಲ್‌ಗಳನ್ನು ದೆಹಲಿಯಲ್ಲಿ ಮಾರಾಟ ಮಾಡುತ್ತಿದ್ದರು. ಆರೋಪಿಗಳ ವಿಚಾರಣೆ ವೇಳೆ ಕೊತ್ತನೂರು ಮತ್ತು ಹೆಣ್ಣೂರು ಠಾಣೆ ವ್ಯಾಪ್ತಿಯಲ್ಲಿ ಕಾಪರ್ ವೈಯರ್ ಕಳವು ಮಾಡಿದ್ದರು.

    ಬಿಹಾರದಲ್ಲಿ ತನ್ನ ಸ್ನೇಹಿತನನ್ನು ಗುಂಡಿಕ್ಕಿ ಹತ್ಯೆ ಮಾಡಿ ಬಂಧನ ಭೀತಿಯಿಂದ ಬೆಂಗಳೂರಿಗೆ ಬಂದಿರುವ ವಿಚಾರವನ್ನೂ ಬಾಯ್ಬಿಟ್ಟಿದ್ದಾರೆ. ಬಿಹಾರ ಪೊಲೀಸರಿಗೆ ಮಾಹಿತಿ ರವಾನಿಸಿದ್ದು, ಆರೋಪಿಗಳನ್ನು ಕೋರ್ಟ್ ಮೂಲಕ ಹಸ್ತಾಂತರ ಮಾಡುವುದಾಗಿ ಪೊಲೀಸರು ತಿಳಿಸಿದ್ದಾರೆ.

    ನನ್ನನ್ನು ತಳ್ಳಿ ಗೆಳತಿಯನ್ನು ಪೊದೆಯತ್ತ ಎಳೆದೊಯ್ದರು… ​ ಸಂತ್ರಸ್ತೆಯ ಸ್ನೇಹಿತನಿಂದ ಹೊರಬಿತ್ತು ಸ್ಫೋಟಕ ಮಾಹಿತಿ

    ಅಪಘಾತದಲ್ಲಿ ಪತ್ನಿ ಸತ್ತಳು ಎಂದು ಕಣ್ಣೀರಿಟ್ಟ ಗಂಡ! ಸ್ಥಳ ಪರಿಶೀಲನೆ ವೇಳೆ ಸಿಕ್ಕ ಸುಳಿವು ಬೆನ್ನಟ್ಟಿದ ಪೊಲೀಸರಿಗೆ ಕಾದಿತ್ತು ಶಾಕ್​

    ಪ್ರೇಯಸಿಯ ಕೊಂದು ಪ್ರಾಣಬಿಟ್ಟ ಪ್ರಿಯಕರ! ಸಾವಿಗೂ ಮುನ್ನ ಡೆತ್​ನೋಟ್​ನಲ್ಲಿ ಮನದ ನೋವು ಬಿಚ್ಚಿಟ್ಟ ಯುವಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts