More

    ಕೊರಗಜ್ಜನ ಕಟ್ಟೆಗೆ ಕಾಂಡೋಮ್​ ಎಸೆದಿದ್ದವ ಕೊನೆಗೂ ಸಿಕ್ಕಿಬಿದ್ದ! ಬಂಧನ ಬೆನ್ನಲ್ಲೇ ಆಘಾತಕಾರಿ ರಹಸ್ಯ ಬಯಲು

    ಮಂಗಳೂರು: ಕೊರಗಜ್ಜನ ಕಟ್ಟೆಗೆ ಕಾಂಡೋಮ್​ ಎಸೆದಿದ್ದವ ಕೊನೆಗೂ ಮಂಗಳೂರು ನಗರ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ. ಇದೊಂದು ದೇವಸ್ಥಾನ ಮಾತ್ರವಲ್ಲ, ಒಟ್ಟು 18 ಧಾರ್ಮಿಕ ಕೇಂದ್ರಗಳಿಗೆ ಅಶ್ಲೀಲ ವಸ್ತು ಎಸೆದು ಅಪಚಾರ ಮಾಡಿದ್ದು ಈತನೇ ಎಂಬ ಆಘಾತಕಾರಿ ರಹಸ್ಯ ಇವನ ಬಂಧನದ ಬೆನ್ನಲ್ಲೇ ಬಯಲಾಗಿದೆ.

    ಹುಬ್ಬಳ್ಳಿ ಉಣ್ಕಲ್ ಮೂಲದ, ಮಂಗಳೂರಿನ ಕೋಟೆಕಾರು ಕೊಂಡಾಣ‌ ನಿವಾಸಿ ದೇವದಾಸ್ ದೇಸಾಯಿ(62) ಬಂಧಿತ. ಡಿ.27ರ(ಸೋಮವಾರ) ರಾತ್ರಿ ಅತ್ತಾವರ ಮಾರ್ನಮಿಕಟ್ಟೆಯ ಕೊರಗಜ್ಜನ ಕಟ್ಟೆಗೆ ಬಳಸಿದ ಕಾಂಡೋಂಮ್​ ಎಸೆದು ಕಿಡಿಗೇಡಿ ಅಪಚಾರವೆಸಗಿದ್ದ. ಆರೋಪಿಯ ಪತ್ತೆಗೆ ಪೊಲೀಸರು ಬಲೆ ಬೀಸುತ್ತಿದ್ದಂತೆ ದೇವದಾಸ್​ ದೇಸಾಯಿ ಸಿಕ್ಕಿಬಿದ್ದಿದ್ದಾನೆ. ಈತ ಮಾರ್ನಮಿಕಟ್ಟೆಯ ಕೊರಗಜ್ಜನ ದೇವಸ್ಥಾನ ಮಾತ್ರವಲ್ಲ, ಇದುವರೆಗೂ ಒಟ್ಟು 18 ಧಾರ್ಮಿಕ ಕೇಂದ್ರಗಳ ಮೇಲೂ ಇಂತಹದ್ದೇ ನೀಚ ಕೆಲಸ ಮಾಡಿದ್ದಾನೆ. ಅದರಲ್ಲಿ ಕೊರಗಜ್ಜನ ಕಟ್ಟೆ, ದೇವಸ್ಥಾನ, ನಾಗನ ಕಟ್ಟೆ, ದರ್ಗಾ ಕೂಡ ಸೇರಿದೆ.

    “ಭೂಮಿ ಅಂತ್ಯವಾಗುವ ಸಮಯ ಬಂದಿದೆ. ದೇವರು ನಮ್ಮನ್ನು ರಕ್ಷಿಸಬೇಕಾದರೆ, ಆತನೇ ಶ್ರೇಷ್ಠ ಎಂದು ಸಾರಬೇಕಾಗಿದ್ದು, ಅದಕ್ಕಾಗಿ ಈ ಕೃತ್ಯ ಎಸಗಿದ್ದೇನೆ. ಇದಕ್ಕೆ ಪಶ್ಚಾತಾಪ ಇಲ್ಲ” ಎಂದು ಪೊಲೀಸರ ಬಳಿ ಆರೋಪಿ ಹೇಳಿದ್ದಾನೆ. ಈತನ ತಂದೆ ಜಾನ್ ದೇಸಾಯಿ ಹಿಂದು ಧರ್ಮದಿಂದ ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡಿದ್ದರು. ಈತ ಕೂಡ ಕ್ರೈಸ್ತ ಧರ್ಮವನ್ನು ಪಾಲಿಸುತ್ತಿದ್ದು, ಮಂಗಳೂರಿನಲ್ಲಿ ಒಬ್ಬಂಟಿಯಾಗಿ ವಾಸಿಸುತ್ತಿದ್ದ. ಧಾರ್ಮಿಕ ಕೇಂದ್ರಗಳ ಸಮೀಪ ಕಾಂಡೋಮ್​, ಕ್ರೈಸ್ತ ಧರ್ಮದ ಭಿತ್ತಿಪತ್ರಗಳನ್ನು ಹಾಕುತ್ತಿದ್ದದ್ದು ತಾನೇ ಎಂದು ಒಪ್ಪಿಕೊಂಡಿದ್ದಾನೆ.

    ಪಾಂಡೇಶ್ವರ ಠಾಣೆ ಪೊಲೀಸರು ಮತ್ತು ಸಿಸಿಬಿ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿದ್ದಾರೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿ ಪೊಲೀಸ್ ಕಸ್ಟಡಿಗೆ ತೆಗೆದುಕೊಳ್ಳಲಾಗುವುದು. ಆತ ಮಾನಸಿಕ ಅಸ್ವಸ್ಥನಲ್ಲ ಎಂದು ಪೊಲೀಸ್ ಆಯುಕ್ತ ಶಶಿಕುಮಾರ್ ತಿಳಿಸಿದ್ದಾರೆ.

    ದೇಗುಲಗಳ ಬಳಿ ಅಸಹ್ಯ ಮಾಡುತ್ತಿದ್ದವನ ಬಂಧನ: ಕಾಂಡೋಮ್​ ಕಿರಾತಕನ ಆ ಮಾತು ಕೇಳಿ ಪೊಲೀಸರೇ ದಂಗಾದ್ರು

    ಚೇಳು ಕಡಿತಕ್ಕೆ ಯುವಕ ಬಲಿ! ಬದುಕುವ ಚಾನ್ಸ್​ ಇದ್ದರೂ ಆ 3 ದಿನ ಆತ ಬಳಸಿಕೊಳ್ಳಲೇ ಇಲ್ಲ…

    ಕೊರಗಜ್ಜ ದೇವರ ಗುಡಿ ಮುಂದೆ ಉಪಯೋಗಿಸಿದ ಕಾಂಡೋಮ್​ ಎಸೆದು ವಿಕೃತಿ ಮೆರೆದ ದುಷ್ಕರ್ಮಿಗಳು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts