More

    ಹಸೆಮಣೆ ಏರಬೇಕಿದ್ದ ತಂಗಿಯನ್ನು ಗುಂಡಿಕ್ಕಿ ಕೊಂದ ಅಣ್ಣ!

    ಮೀರತ್​: ನಾಳೆಯೆಂದರೆ ಹಸೆ ಮಣೆ ಏರಬೇಕಿದ್ದ ಯುವತಿಯೊಬ್ಬಳು ಮದುವೆಯ ಹಿಂದಿನ ದಿನ ತನ್ನ ಅಣ್ಣನಿಂದಲೇ ಕೊಲೆಯಾಗಿರುವ ಘಟನೆ ಮೀರತ್​ನಲ್ಲಿ ನಡೆದಿದೆ. ತಂಗಿಯ ಅನೈತಿಕ ಸಂಬಂಧದಿಂದ ಬೇಸತ್ತ ಅಣ್ಣ ಅದೇ ಕಾರಣಕ್ಕೆ ಹೀಗೆ ಮಾಡಿದ್ದಾನೆ ಎನ್ನಲಾಗಿದೆ.

    ಇದನ್ನೂ ಓದಿ: ‘ಥೂ.. ಅವಳು ಗಂಡೋ ಹೆಣ್ಣೋ? ಅವಳ ವಾಯ್ಸ್​ ನಾಯಿ ವಾಯ್ಸ್​ ತರ ಇದೆ’ ಎಂದಿದ್ದ ನೆರೆ ಮನೆಯ ಮಹಿಳೆಗೆ ತಕ್ಕ ಪಾಠ ಕಲಿಸಿದ ಮಹಿಳೆ
    ಯುವತಿಯು ತನ್ನ ಸಹೋದರಿಯ ಬಾವನನ್ನು ಕಳೆದ ನಾಲ್ಕು ವರ್ಷಗಳಿಂದ ಪ್ರೀತಿಸುತ್ತಿದ್ದಳಂತೆ. ಈ ವಿಚಾರ ಇತ್ತೀಚೆಗೆ ಯುವತಿ ಮನೆಯಲ್ಲಿ ಗೊತ್ತಾಗಿದೆ. ಆಕೆಯ ಬಾವ ಕಾಸಿಮ್​ಗೆ ಅವಳನ್ನು ಮದುವೆಯಾಗೆಂದು ಕೇಳಲಾಗಿದೆ. ಆದರೆ ಅದಕ್ಕೆ ಆತ ಒಪ್ಪಿಲ್ಲ. ಆ ಹಿನ್ನೆಲೆಯಲ್ಲಿ ಬೇರೊಬ್ಬ ಹುಡುಗನನ್ನು ಹುಡುಕಿ ಆತನೊಂದಿಗೆ ಮದುವೆ ನಿಶ್ಚಯಿಸಲಾಗಿದೆ.

    ಜನವರಿ 24ರಂದು ಯುವತಿಯ ಮದುವೆ ಆಗುವುದರಲ್ಲಿತ್ತು. ಆದರೆ ನನ್ನಿಂದ ಯುವತಿ ದೂರಾಗುತ್ತಿದ್ದಾಳೆ ಎನ್ನುವ ಸಿಟ್ಟಿಗೆ ಬಿದ್ದ ಕಾಸಿಮ್​ ಯುವತಿಯ ಖಾಸಗಿ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಿಗೆ ಹಾಕಿ ವೈರಲ್​ ಮಾಡಿದ್ದಾನೆ. ಈ ವಿಚಾರ ಯುವತಿಯ ಅಣ್ಣನಿಗೆ ತಿಳಿದುಬಂದಿದೆ. ಯುವತಿಯ ಮೇಲೆ ಮತ್ತೆ ಸಿಟ್ಟಾದ ಅಣ್ಣ ಮನೆಗೆ ಬಂದು ತಂಗಿಗೆ ಗುಂಡಿಕ್ಕಿ ಕೊಂದಿದ್ದಾನೆ. ಘಟನೆ ತಿಳಿದ ನಂತರ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು ಆರೋಪಿಯನ್ನು ಬಂಧಿಸಿದ್ದಾರೆ. (ಏಜೆನ್ಸೀಸ್​)

    ನಾವಲ್ಲ, ಅಕ್ಕನೇ ತಂಗಿಯನ್ನ ಕೊಂದಿದ್ದು! ಆಮೇಲೆ ನನ್ನನ್ನೂ ಕೊಂದುಬಿಡಿ ಎಂದು ಬೇಡಿಕೊಂಡಳು!

    ಹೊಲಕ್ಕೆ ಹೋದ ಯುವತಿಯ ಮೇಲೆ ಗ್ಯಾಂಗ್​ ರೇಪ್​! ಗುಪ್ತಾಂಗಕ್ಕೆ ಬಾಟೆಲ್​ ತುಂಬಿದ ಪಾಪಿಗಳು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts