More

    ಡಿಫರೆಂಟ್​ ಸೆಕ್ಸ್​ ಪೊಸಿಷನ್​ಗೆ ಒಪ್ಪದ ಹೆಂಡತಿಯ ಮೇಲೆ ಹಲ್ಲೆ ನಡೆಸಿದ ಗಂಡ! ಪೊಲೀಸರ ಮೊರೆ ಹೋದ ಹೆಂಡತಿ!

    ಗಾಂಧಿನಗರ: ಜನ್ಮ ಪೂರ್ತಿ ಜತೆಯಿರಲು ಮದುವೆಯಾಗಿ ಬಂದ ಪತ್ನಿಗೆ ಪತಿ ಲೈಂಗಿಕ ಕಿರುಕುಳ ನೀಡಿದ್ದು ಇದೀಗ ಹೆಂಡತಿ ಪೊಲೀಸ್​ ಠಾಣೆಯ ಮೆಟ್ಟಿಲೇರಿದ್ದಾಳೆ. ನನ್ನ ಗಂಡ ನನಗೆ ವಿಚಿತ್ರ ಸೆಕ್ಸ್​ ಪೊಸಿಷನ್​ಗಳಿಗೆ ಒತ್ತಾಯಿಸುತ್ತಾನೆ ಎಂದು ಪತ್ನಿ ದೂರಿನಲ್ಲಿ ತಿಳಿಸಿದ್ದಾಳೆ.

    ಇದನ್ನೂ ಓದಿ: ಶಾಹೀನ್​ಬಾಗ್​ ಶೂಟರ್​ನ್ನು ಪಕ್ಷಕ್ಕೆ ಸೇರಿಸಿಕೊಂಡು ಕೆಲವೇ ಗಂಟೆಗಳಲ್ಲಿ ಉಚ್ಛಾಟಿಸಿದ ಬಿಜೆಪಿ!

    ಗುಜರಾತ್​ನ ಮಣಿನಗರದಲ್ಲಿ ಇಂತದ್ದೊಂದು ಪ್ರಕರಣ ದಾಖಲಾಗಿದೆ. ದೂರು ನೀಡಿರುವ ಮಹಿಳೆಗೆ 2019ರ ಡಿಸೆಂಬರ್​ 19ರಂದು ಮದುವೆಯಾಗಿದೆ. 20 ಲಕ್ಷ ರೂಪಾಯಿ ವರದಕ್ಷಿಣೆ ಕೊಟ್ಟು ಮದುವೆ ಮಾಡಲಾಗಿದೆ. ಗಂಡ ರಾಷ್ಟ್ರೀಕೃತ ಬ್ಯಾಂಕ್​ ಒಂದರಲ್ಲಿ ಕ್ಲರ್ಕ್​ ಆಗಿ ಕೆಲಸ ಮಾಡುತ್ತಿದ್ದಾನೆ. ಮದುವೆಯಾಗಿ 15 ದಿನಗಳಲ್ಲೇ ಗಂಡನ ಮನೆಯವರು ತಮ್ಮ ವರಸೆ ಆರಂಭಿಸಿದ್ದಾರೆ. ಸೊಸೆಗೆ ಕಿರುಕುಳ ನೀಡಲು ಶುರುವಿಟ್ಟಿದ್ದಾರೆ. ಇದರಿಂದ ನೊಂದ ಸೊಸೆ ಎರಡು ತಿಂಗಳ ಕಾಲ ತವರು ಮನೆಯಲ್ಲೇ ವಾಸಿಸಿ ಮತ್ತೆ ಗಂಡನ ಮನೆಗೆ ವಾಪಾಸಾಗಿದ್ದಾಳೆ.

    ಇದನ್ನೂ ಓದಿ: ಮಗನ ಹೆಂಡತಿಗೆ ಮಾವ ಹೀಗಾ ಮಾಡೋದು?! ತನಿಖೆಯಲ್ಲಿ ಬಯಲಾಯಿತು ಮಾವನ ನಿಜ ಬಣ್ಣ

    ಮನೆಗೆ ಮರಳಿದ ಹೆಂಡತಿಗೆ ಗಂಡ ಲೈಂಗಿಕವಾಗಿ ಕಿರುಕುಳ ನೀಡಲಾರಂಭಿಸಿದ್ದಾನೆ. ವಿಚಿತ್ರ ಸೆಕ್ಸ್ ಪೊಸಿಷನ್​ಗಳನ್ನು ಮಾಡುವಂತೆ ಗೋಳಿಟ್ಟಿದ್ದಾನೆ. ಅದಕ್ಕೆ ಆಕೆ ಒಪ್ಪದಿದ್ದಾಗ ಆಕೆಯ ಮೇಲೆ ಹಲ್ಲೆ ಮಾಡಿದ್ದಾನೆ. ಈ ವಿಚಾರವನ್ನು ಆಕೆ ತವರು ಮನೆಯವರಿಗೆ ತಿಳಿಸಿದ್ದಳಂತೆ. ಪೊಲೀಸ್​ ದೂರು ನೀಡುವುದಾಗಿಯೂ ತಿಳಿಸಿದ್ದಳಂತೆ. ಆದರೆ ಮರ್ಯಾದೆಗೆ ಅಂಜಿದ ಆಕೆಯ ಕುಟುಂಬ ದೂರು ನೀಡದಿರುವಂತೆ ತಡೆದಿದ್ದಾರೆ. ಸೋಮವಾರದಂದೂ ಅದೇ ವಿಚಾರಕ್ಕೆ ಪತಿ ಆಕೆಯ ಮೇಲೆ ಹಲ್ಲೆ ನಡೆಸಿದ್ದು, ಸಿಟ್ಟಿಗೆದ್ದ ಮಹಿಳೆ ಇದೀಗ ಪೊಲೀಸ್​ ಠಾಣೆಯ ಮೆಟ್ಟಿಲೇರಿದ್ದಾಳೆ. (ಏಜೆನ್ಸೀಸ್​)

    ಮೂಗಿನ ಸರ್ಜರಿ ಮಾಡಿಸಿ, ಎರಡೂ ಕಾಲು ಕಳೆದುಕೊಂಡ ಯುವತಿ! ಚಿಕನ್​ ತಿಂದಿದ್ದೇ ಕಾರಣ ಎಂದ ಆಸ್ಪತ್ರೆ

    ಸರ್ಪೈಸ್​ ನೀಡಲು ಮನೆಗೆ ಬಂದ ಗಂಡನಿಗೆ ಕಾದಿತ್ತು ಬಿಗ್​ ಶಾಕ್​! ಹೆಂಡತಿಯ ಇನ್ನೊಂದು ರೂಪ ನೋಡಿದ ಗಂಡ ಮಾಡಿದ್ದೇನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts