More

    ಪಿಸ್ತೂಲು ಹೇಗೆ ವರ್ಕ್​ ಆಗುತ್ತದೆಯೆಂದು ನೋಡಲು ಸೋದರಳಿಯನಿಗೇ ಗುಂಡಿಟ್ಟ ಮಾವ! ವಿಡಿಯೋ ವೈರಲ್​

    ಲಖನೌ: ಕೆಲವು ವಸ್ತುಗಳೊಂದಿಗೆ ಹುಡುಗಾಟ ಸಲ್ಲ ಎಂದು ಹೇಳುತ್ತಾರೆ. ಆದರೆ ಆ ಮಾತನ್ನು ಪರಿಗಣಿಸದೆಯೇ ಪಿಸ್ತೂಲಿನೊಂದಿಗೆ ಹುಡುಗಾಟ ಮಾಡಲು ಹೋದ ವ್ಯಕ್ತಿಯೊಬ್ಬ ತನ್ನ ಸೋದರ ಅಳಿಯನಿಗೇ ಗುಂಡಿಕ್ಕಿ ಕೊಲೆ ಮಾಡಿರುವ ಘಟನೆ ಉತ್ತರ ಪ್ರದೇಶದ ಮುಜಾಫರ್​ನಗರದಲ್ಲಿ ನಡೆದಿದೆ.

    ಎರಡು ಮೂರು ಜನರು ಗದ್ದೆ ಭಾಗದಲ್ಲಿ ಕುಳಿತುಕೊಂಡು ಮದ್ಯ ಸೇವಿಸುತ್ತಿದ್ದರು. ಈ ವೇಳೆ ಅವರ ಬಳಿ ಇದ್ದ ಕಂಟ್ರಿ ಮೇಡ್ ಪಿಸ್ತೂಲನ್ನೂ ಹೊರತೆಗೆದಿದ್ದಾರೆ. ಈ ಎಲ್ಲ ದೃಶ್ಯಗಳನ್ನು ಒಬ್ಬ ತನ್ನ ಮೊಬೈಲ್​ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾನೆ. ಪಿಸ್ತೂಲು ಹೊರತೆಗೆದ ವ್ಯಕ್ತಿ ಅದಕ್ಕೆ ಬುಲೆಟ್​ ಹಾಕಿ ಅದನ್ನು ವಿಡಿಯೋ ಮಾಡುತ್ತಿದ್ದವನತ್ತ ಗುರಿ ಮಾಡಿ ತಕ್ಷಣ ಶೂಟ್​ ಮಾಡಿಬಿಟ್ಟಿದ್ದಾನೆ. ವಿಡಿಯೋ ಮಾಡುತ್ತಿದ್ದ ವ್ಯಕ್ತಿ ಅಲ್ಲೇ ಕುಸಿದುಬಿದ್ದಿದ್ದಾನೆ. ಶೂಟ್​ ಮಾಡಿದವ ಮತ್ತು ಮೃತನಾದ ವ್ಯಕ್ತಿ ಸೋದರ ಮಾವ ಅಳಿಯ ಸಂಬಂಧಿಗಳು ಎಂದು ವಿಚಾರಣೆ ವೇಳೆ ತಿಳಿದುಬಂದಿದೆ.

    ಪ್ರಕರಣದಲ್ಲಿ ಶೂಟ್ ಮಾಡಿದ್ದ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇದು ಬೇಕೆಂದು ಮಾಡದ ಕೃತ್ಯವೆನ್ನುವುದು ವಿಚಾರಣೆ ವೇಳೆ ಹೊರಬಿದ್ದಿದೆ. (ಏಜೆನ್ಸೀಸ್​)

    ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

    ಒಬ್ಬ ಮಗಳ ಪ್ರಾಣ ಉಳಿಸುವುದಕ್ಕಾಗಿ ಇನ್ನೊಬ್ಬ ಮಗಳನ್ನು 10 ಸಾವಿರ ರೂಪಾಯಿಗೆ ಮಾರಾಟ ಮಾಡಿದ ತಂದೆ ತಾಯಿ!

    ಚಿನ್ನ, ಬೆಳ್ಳಿ ದರದಲ್ಲಿ ಭಾರೀ ಇಳಿಕೆ! ಚಿನ್ನಾಭರಣ ಪ್ರಿಯರು ಫುಲ್​ ಖುಷ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts