More

    ಗೆಳತಿಯರೊಂದಿಗೆ ಮಡಿಕೇರಿ ಪ್ರವಾಸಕ್ಕೆ ಬಂದಿದ್ದ ಯುವತಿ ಸಾವು! ಹೋಂ ಸ್ಟೇನಲ್ಲಿ ಆಗಿದ್ದೇನು?

    ಕೊಡಗು: ಮಡಿಕೇರಿ ಪ್ರವಾಸಕ್ಕೆಂದು ಬಂದಿದ್ದ ಐವರು ಗೆಳತಿಯರ ಪೈಕಿ ಓರ್ವ ಯುವತಿ ಹೋಂ ಸ್ಟೇನಲ್ಲಿ ಅನುಮಾನಸ್ಪದವಾಗಿ ಮೃತಪಟ್ಟಿದ್ದಾಳೆ.

    ವಿಘ್ನೇಶ್ವರಿ ಈಶ್ವರ್ (24) ಮೃತೆ. ಬಳ್ಳಾರಿ ಮೂಲದ ಈಕೆ ಮುಂಬೈನಲ್ಲಿ ಉದ್ಯೋಗದಲ್ಲಿದ್ದಳು. ಇತ್ತೀಚಿಗೆ ಗೆಳತಿಯರೊಂದಿಗೆ ರಾಜ್ಯಕ್ಕೆ ಬಂದಿದ್ದ ಈಶ್ವರಿ, 5 ದಿನದ ಪ್ರವಾಸಕ್ಕೆಂದು ಸ್ನೇಹಿತೆಯರೊಂದಿಗೆ ಮಡಿಕೇರಿಗೆ ಬಂದಿದ್ದಳು. ಎರಡು ದಿನ ಸುತ್ತಮುತ್ತಾ ಓಡಾಡಿದ್ದ ಸ್ನೇಹಿತರು ಮಡಿಕೇರಿಯ ಹೋಂ ಸ್ಟೇನಲ್ಲಿ ತಂಗಿದ್ದರು. ಮೂರನೇ ದಿನವಾದ ಭಾನುವಾರ ರಾತ್ರಿ ಈಶ್ವರಿ ಮೃತಪಟ್ಟಿದ್ದಾಳೆ.

    ಭಾನುವಾರ ರಾತ್ರಿ ಸ್ನಾನಕ್ಕೆಂದು ಹೋಗಿದ್ದ ವಿಘ್ನೇಶ್ವರಿ ಬಾತ್ ರೂಮಿನಲ್ಲೇ ಮೃತಪಟ್ಟಿದ್ದು, ಘಟನೆ ನಡೆಯುತ್ತಿದ್ದಂತೆ ಹೋಂಸ್ಟೇ ಮಾಲೀಕರಿಗೆ ಉಳಿದ ಯುವತಿಯರು ಮಾಹಿತಿ ನೀಡಿದ್ದಾರೆ. ಮಡಿಕೇರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಂದು ಏನಾಯ್ತು? ಅವಳು ಸತ್ತಿದ್ದಾರೂ ಏಕೆ ಎಂಬ ಮಾಹಿತಿ ಲಭ್ಯವಾಗಿಲ್ಲ. ಮರಣೋತ್ತರ ಪರೀಕ್ಷೆಯ ವರದಿ ಬಂದ ಬಳಿಕ ಗೊತ್ತಾಗಲಿದೆ. ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

    ಒಂದೇ ಕುಟುಂಬದ ಐವರು ಆತ್ಮಹತ್ಯೆ: ಮನೆಯ ದೇವರ ಫೋಟೋ ಹಿಂದಿತ್ತು ಮನಕಲಕುವ ದೃಶ್ಯ

    ಸರ್ಕಾರಿ ಆಸ್ಪತ್ರೆಯಲ್ಲಿ ಮೇಣದಬತ್ತಿ ಬತ್ತಿ ಹಚ್ಚಿಕೊಂಡು ಹೆರಿಗೆ ಮಾಡಿದ ದಾದಿಯರು!

    ಶಾಸಕ ಶ್ರೀನಿವಾಸ್​ಗೆ ಬಾಗಿಲು ಮುಚ್ಚಿದ ಜೆಡಿಎಸ್! ಕಾಂಗ್ರೆಸ್​ ಜತೆಗಿನ ಹೊಂದಾಣಿಕೆ ಸುಲಭವಲ್ಲ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts