ಒಂದೇ ಕುಟುಂಬದ ಐವರು ಆತ್ಮಹತ್ಯೆ: ಮನೆಯ ದೇವರ ಫೋಟೋ ಹಿಂದಿತ್ತು ಮನಕಲಕುವ ದೃಶ್ಯ

ಚಿಕ್ಕೋಡಿ: ಒಂದೇ ಕುಟುಂಬದ ಐವರು ಆತ್ಮಹತ್ಯೆ ಮಾಡಿಕೊಂಡ ಹೃದಯವಿದ್ರಾವಕ ಘಟನೆ ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ‌ ಬೋರಗಲ್ ಗ್ರಾಮದಲ್ಲಿ ಸಂಭವಿಸಿದ್ದು, ಸ್ಥಳದಲ್ಲಿ ಡೆತ್​ನೋಟ್​ ಪತ್ತೆಯಾಗಿದೆ. ಗೋಪಾಲ್​ ಹಾದಿಮನಿ(46), ಇವರ ಮಕ್ಕಳಾದ ಸೌಮ್ಯಾ ಹಾದಿಮನಿ(19), ಶ್ವೇತಾ ಹಾದಿಮನಿ(16), ಸಾಕ್ಷಿ ಹಾದಿಮನಿ(11), ಸೃಜನ‌ ಹಾದಿಮನಿ(8) ಮೃತ ದುರ್ದೈವಿಗಳು. ಗೋಪಾಲ್​ ಪತ್ನಿ ಜಯಾ ಅವರು ಬ್ಲ್ಯಾಕ್ ಫಂಗಸ್​ಗೆ ಕಳೆದ ಜು.6 ರಂದು ಬಲಿಯಾಗಿದ್ದರು. ಇದಾದ ಮೂರು ತಿಂಗಳಿಗೆ ಗೋಪಾಲ್​ ತನ್ನ ನಾಲ್ವರು ಮಕ್ಕಳಿಗೂ ವಿಷ ಕುಡಿಸಿ, ತಾನೂ ಕುಡಿದು ದುರಂತ ಅಂತ್ಯಕಂಡಿದ್ದಾರೆ. … Continue reading ಒಂದೇ ಕುಟುಂಬದ ಐವರು ಆತ್ಮಹತ್ಯೆ: ಮನೆಯ ದೇವರ ಫೋಟೋ ಹಿಂದಿತ್ತು ಮನಕಲಕುವ ದೃಶ್ಯ