More

    ಬನ್ನೇರುಘಟ್ಟದ ಆಸ್ಪತ್ರೆಯಲ್ಲಿ ಹುಲಿ ಮತ್ತು ಸಿಂಹದ ಮರಿಗಳ ಚಿನ್ನಾಟ ದೃಶ್ಯ ವೈರಲ್​

    ಬೆಂಗಳೂರು: ಹುಲಿ, ಸಿಂಹ ಅಂದ್ರೆ ಸಾಕು ಮಾರುದ್ದ ಓಡೋಣ ಅನ್ನಿಸೋದು ಸಹಜ. ಆದ್ರೆ ಇಲ್ಲಿ ಮಾತ್ರ ಅವುಗಳನ್ನ ಮತ್ತೆ ಮತ್ತೆ ನೋಡಬೇಕು, ಮುದ್ದು ಮಾಡಬೇಕು… ಅನ್ನಿಸುವ ಜತೆಗೆ ಪ್ರೀತಿ ಉಕ್ಕಿಸುತ್ತೆ.

    ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ‘ಅನುಷ್ಕಾ’ ಎಂಬ ಹುಲಿ ಎರಡು ಮರಿಗಳಿಗೆ ಜನ್ಮ ನೀಡಿದ್ದು, ‘ಸನಾ’ ಎಂಬ ಸಿಂಹಿಣಿಯೂ ಎರಡು ಮರಿಗಳಿಗೆ ಜನ್ಮನೀಡಿದೆ. ಬನ್ನೇರುಘಟ್ಟ ‌ಝೂ ಆಸ್ಪತ್ರೆಯಲ್ಲಿ ಆರೈಕೆ ಪಡೆಯುತ್ತಿರುವ ಈ ನಾಲ್ಕೂ ಮರಿಗಳು ಆಸ್ಪತ್ರೆಯಲ್ಲಿ ಅಡ್ಡಾಡುತ್ತಾ ಚಿನ್ನಾಟ ಆಡುವ ದೃಷ್ಯ ನೋಡುಗರಿಗೆ ಖುಷಿಯ ಹೂರಣ.

    ಹುಟ್ಟಿದ‌ ಬಳಿಕ ತಾಯಿಯಿಂದ ಮರಿಗಳಿಗೆ ಸೂಕ್ತ ಆರೈಕೆ ಸಿಗದ ಕಾರಣ, ಮೃಗಾಲಯ ಸಿಬ್ಬಂದಿ ಸಿಂಹ ಮತ್ತು ಹುಲಿಯ ಮರಿಗಳಿಗೆ ಮೇಕೆ ಹಾಲು ಹಾಗೂ ಪೌಷ್ಟಿಕಾಂಶದ ಟಾನಿಕ್ ನೀಡಿ ಆರೈಕೆ ಮಾಡುತ್ತಿದ್ದಾರೆ. ಹುಲಿ ಮತ್ತು ಸಿಂಹದ ಮರಿಗಳು ಆರೋಗ್ಯವಾಗಿದ್ದು, ಆಸ್ಪತ್ರೆಯಲ್ಲಿ ಚಿನ್ನಾಟ ಆಡಿಕೊಂಡಿವೆ.

    ಬನ್ನೇರುಘಟ್ಟ ಉದ್ಯಾನದಲ್ಲಿ ಹುಲಿ ಹಾಗೂ ಸಿಂಹದ‌ ಸಂಖ್ಯೆಯಲ್ಲಿ ಗಣನೀಯ ಏರಿಕೆ ಕಂಡಿದ್ದು, ಸದ್ಯ 19 ಹುಲಿಗಳು ಹಾಗೂ 24 ಸಿಂಹಗಳು ಇವೆ.

    ಕಲ್ಲಿನಿಂದ ಹೊಡೆದು ಸಾರಿಗೆ ಬಸ್​ ಚಾಲಕನ ಪ್ರಾಣ ತೆಗೆದ ಕಿಡಿಗೇಡಿಗಳು! ಮುಷ್ಕರ ಬಿಟ್ಟು ಕೆಲಸಕ್ಕೆ ಬಂದಿದ್ದಕ್ಕೆ ಶಿಕ್ಷೆ?

    ಕಾಡ್ಗಿಚ್ಚಿನಲ್ಲಿ ಸುಟ್ಟುಕರಕಲಾಗಿದ್ದ ವ್ಯಕ್ತಿ ಪ್ರಕರಣ: ಬ್ಯಾನರ್​ ಕೊಟ್ಟ ಸುಳಿವಿಂದ ಬಯಲಾಯ್ತು ನಿಗೂಢ ರಹಸ್ಯ

    VIDEO| ದಿನಕ್ಕೆರಡು ಬಾರಿ ಕಲ್ಲಿಗೆ ಹಾಲುಣಿಸುತ್ತಿದೆ ಹಸು! ಪುರೋಹಿತರು ಹೇಳಿದ್ದ ಭವಿಷ್ಯ ನಿಜವಾಯ್ತೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts