More

    ಕುಪ್ಪೂರು ಶ್ರೀಗಳಿಗೆ ಕರೊನಾ ಇದ್ರೂ ಸೂಕ್ತ ಚಿಕಿತ್ಸೆ ಕೊಟ್ಟಿಲ್ಲ.. ವೈದ್ಯನ ನಿರ್ಲಕ್ಷ್ಯಕ್ಕೆ ಶ್ರೀಗಳ ಸಾವಾಯ್ತು.. ನೋಟಿಸ್ ಜಾರಿ

    ತುಮಕೂರು: ಚಿಕ್ಕನಾಯಕನಹಳ್ಳಿ ತಾಲೂಕು ಕುಪ್ಪೂರು ಗದ್ದುಗೆ ಸಂಸ್ಥಾನ ಮಠದ ಡಾ.ಯತೀಶ್ವರ ಶಿವಾಚಾರ್ಯ ಸ್ವಾಮೀಜಿ(48) ಸಾವಿಗೆ ಸಾಯಿಗಂಗಾ ಖಾಸಗಿ ಆಸ್ಪತ್ರೆ ವೈದ್ಯ ಡಾ.ವಿಜಯ ರಾಘವೇಂದ್ರನ ನಿರ್ಲಕ್ಷ್ಯವೇ ಕಾರಣ ಎಂಬ ಆರೋಪ ಕೇಳಿಬಂದಿದೆ.

    ಡಾ.ಯತೀಶ್ವರ ಶಿವಾಚಾರ್ಯ ಶ್ರೀಗಳಲ್ಲಿ ಕರೊನಾ ಸೋಂಕು ಕಾಣಿಸಿಕೊಂಡಿದ್ದರೂ ಆರಂಭದಲ್ಲಿ ಚಿಕಿತ್ಸೆ ನೀಡಿದ್ದ ಸ್ಥಳೀಯ ವೈದ್ಯರು ಉದಾಸೀನತೆ ತೋರಿದ್ದಾರೆ ಎಂಬ ದೂರು ಬಂದ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ತನಿಖೆ ನಡೆಸುತ್ತಿದೆ. ಸ್ವಾಮೀಜಿ ಅವರಲ್ಲಿ ಕರೊನಾ ರೋಗ ಲಕ್ಷಣಗಳನ್ನು ಗುರುತಿಸುವಲ್ಲಿ ಚಿಕ್ಕನಾಯಕನಹಳ್ಳಿ ಪಟ್ಟಣದ ಸಾಯಿಗಂಗಾ ಖಾಸಗಿ ಆಸ್ಪತ್ರೆ ವೈದ್ಯ ವಿಜಯರಾಘವೇಂದ್ರ ವಿಫಲರಾಗಿದ್ದು, ಅಗತ್ಯ ಮುಂಜಾಗ್ರತಾ ಕ್ರಮಕೈಗೊಂಡಿಲ್ಲ ಎಂದು ಆರೋಪಿಸಿ ಕಾರಣಕೇಳಿ ಜಿಲ್ಲಾ ಆರೋಗ್ಯ ಇಲಾಖೆ ನೋಟಿಸ್ ಜಾರಿ ಮಾಡಿದೆ.

    ಮಂಗಳವಾರ ಬೆಳಗ್ಗೆ ಶ್ರೀಮಠಕ್ಕೆ ಭೇಟಿ ನೀಡಿ ಮಾಹಿತಿ ಪಡೆದು ಖಾಸಗಿ ವೈದ್ಯರ ವಿಚಾರಣೆ ನಡೆಸಿದ ಡಿಎಚ್​ಒ ಡಾ.ನಾಗೇಂದ್ರಪ್ಪಗೆ ಉತ್ತರ ತೃಪ್ತಿಯಾಗದ ಹಿನ್ನೆಲೆಯಲ್ಲಿ ಸಚಿವ ಜೆ.ಸಿ.ಮಾಧುಸ್ವಾಮಿ ಸೂಚನೆ ಹಿನ್ನೆಲೆಯಲ್ಲಿ ನೋಟಿಸ್ ಜಾರಿ ಮಾಡಿದ್ದಾರೆ. ಸ್ವಾಮೀಜಿ ಕುಟುಂಬದ ಇಬ್ಬರು ಸದಸ್ಯರಲ್ಲಿಯೂ ಕರೊನಾ ಪಾಸಿಟಿವ್ ಬಂದಿದ್ದು ಅವರನ್ನು ಕ್ವಾರಂಟೈನ್ ಮಾಡಲಾಗಿದೆ.

    ಸಾಯಿಗಂಗಾ ಆಸ್ಪತ್ರೆಯಲ್ಲಿ ವೈದ್ಯ ರೇಡಿಯಾಲಜಿಸ್ಟ್ ಆಗಿದ್ದರೂ ಎಲ್ಲ ಕಾಯಿಲೆಗೂ ಚಿಕಿತ್ಸೆ ನೀಡುತ್ತಿರುವ ಬಗ್ಗೆ ಆರಂಭದಿಂದಲೂ ನಮಗೆ ದೂರು ಬರುತ್ತಿದೆ, ಕುಪ್ಪೂರು ಸ್ವಾಮೀಜಿ ಅವರಿಗೆ ಕರೊನಾ ಲಕ್ಷಣಗಳಿದ್ದರೂ ಗುರುತಿಸದೆ ರೋಗ ಉಲ್ಬಣವಾಗಲು ಕಾರಣನಾಗಿದ್ದು, ಕಾರಣ ಕೇಳಿ ನೋಟಿಸ್ ನೀಡಲಾಗಿದೆ. ವೈದ್ಯನ ಅಜಾಗರೂಕತೆಯಿಂದ ಸ್ವಾಮೀಜಿ ಕುಟುಂಬ ಸದಸ್ಯರಲ್ಲಿಯೂ ಕರೊನಾ ಕಾಣಿಸಿಕೊಂಡಿದ್ದು ಚಿಕಿತ್ಸೆ ನೀಡಲಾಗುತ್ತಿದೆ.
    | ಜೆ.ಸಿ.ಮಾಧುಸ್ವಾಮಿ ಕಾನೂನು ಸಚಿವ

    ಕುಪ್ಪೂರು ಮಠಕ್ಕೆ ಉತ್ತರಾಧಿಕಾರಿ ತೇಜಸ್​ ಆಯ್ಕೆ ಅಧಿಕೃತವಲ್ಲ: ಸಚಿವ ಜೆ.ಸಿ.ಮಾಧುಸ್ವಾಮಿ ಸ್ಪಷ್ಟನೆ

    ಕುಪ್ಪೂರು ಗದ್ದುಗೆ ಶ್ರೀಗಳು ಲಿಂಗೈಕ್ಯ: ಮುಗಿಲು ಮುಟ್ಟಿದ ಭಕ್ತರ ಆಕ್ರಂದನ, ಸಂತಾಪ ಸೂಚಿಸಿದ ಸಿದ್ಧಗಂಗಾ ಶ್ರೀಗಳು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts