More

    ಕುಪ್ಪೂರು ಗದ್ದುಗೆ ಶ್ರೀಗಳು ಲಿಂಗೈಕ್ಯ: ಮುಗಿಲು ಮುಟ್ಟಿದ ಭಕ್ತರ ಆಕ್ರಂದನ, ಸಂತಾಪ ಸೂಚಿಸಿದ ಸಿದ್ಧಗಂಗಾ ಶ್ರೀಗಳು

    ತುಮಕೂರು: ಚಿಕ್ಕನಾಯಕನಹಳ್ಳಿ ತಾಲೂಕು ಕುಪ್ಪೂರು ಗದ್ದುಗೆ ಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ.ಯತೀಶ್ವರ ಶಿವಾಚಾರ್ಯ ಸ್ವಾಮೀಜಿ(48) ಶನಿವಾರ ಲಿಂಗೈಕ್ಯರಾದರು. ಜ್ವರದಿಂದ ಬಳಲುತಿದ್ದ ಡಾ.ಯತೀಶ್ವರ ಸ್ವಾಮೀಜಿ ಅವರಿಗೆ ತೀವ್ರ ಉಸಿರಾಟದ ಸಮಸ್ಯೆ ಕಾಣಿಸಿದ್ದರಿಂದ ಶುಕ್ರವಾರ ಸಂಜೆ ತುಮಕೂರಿನ ಸಿದ್ಧಗಂಗಾ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಶನಿವಾರ ಬೆಳಗ್ಗೆ ಆರೋಗ್ಯ ಪರಿಸ್ಥಿತಿ ತೀವ್ರ ಹದಗೆಟ್ಟ ಹಿನ್ನೆಲೆಯಲ್ಲಿ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ಮಣಿಪಾಲ್​ ಆಸ್ಪತ್ರೆಗೆ ಕರೆದೊಯ್ಯಲು ನಿರ್ಧರಿಸಲಾಗಿತ್ತು.

    ಬೆಳಗ್ಗೆ 11ಕ್ಕೆ ಆಂಬುಲೆನ್ಸ್​ನಲ್ಲಿ ಸಿದ್ಧಗಂಗಾ ಆಸ್ಪತ್ರೆಯಿಂದ ಬೆಂಗಳೂರಿಗೆ ಕರೆದೊಯ್ಯುವ ಮಾರ್ಗಮಧ್ಯೆ ನೆಲಮಂಗಲ ಸಮೀಪ ಹೃದಯ ಸ್ತಂಭನವಾದ ಸ್ವಾಮೀಜಿ ಅವರನ್ನು ಹತ್ತಿರದ ಹರ್ಷ ಆಸ್ಪತ್ರೆಗೆ ಕರೆದೊಯ್ದರಾದರೂ ಅಷ್ಟರಲ್ಲಾಗಲೇ ಸ್ವಾಮೀಜಿ ಉಸಿರಾಟ ನಿಲ್ಲಿಸಿದ್ದರು, ಪರೀಕ್ಷಿಸಿದ ವೈದ್ಯರು ನಿಧನರಾದ ವಿಷಯ ದೃಢಪಡಿಸಿದರು. ಸ್ವಾಮೀಜಿ ಅವರಿಗೆ ಕರೊನಾ ಸೋಂಕು ಕೂಡ ದೃಢಪಟ್ಟಿತ್ತು, ಮಧುಮೇಹ ಸಮಸ್ಯೆಯೂ ಇತ್ತು. ಮಧ್ಯಾಹ್ನ 3.30ರ ವೇಳೆಗೆ ಶ್ರೀಗಳ ಪಾರ್ಥೀವ ಶರೀರ ಗದ್ದುಗೆ ಮಠ ತಲುಪಿತು. ಶ್ರೀಗಳ ನಿಧನ ಸುದ್ದಿ ತಿಳಿಯುತ್ತಿದ್ದಂತೆ ಮಠದ ಆವರಣದಲ್ಲಿ ಭಕ್ತರ ಆಕ್ರಂದನ ಮುಗಿಲು ಮುಟ್ಟಿತ್ತು. ಭಾನುವಾರ ಶ್ರೀಗಳ ಅಂತ್ಯಸಂಸ್ಕಾರ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ. ಸಚಿವ ಮಾಧುಸ್ವಾಮಿ ಸೇರಿದಂತೆ ಹಲವರು ಅಂತಿಮ ದರ್ಶನ ಪಡೆದರು.

    ಕುಪ್ಪೂರು ಗದ್ದುಗೆ ಶ್ರೀಗಳು ಲಿಂಗೈಕ್ಯ: ಮುಗಿಲು ಮುಟ್ಟಿದ ಭಕ್ತರ ಆಕ್ರಂದನ, ಸಂತಾಪ ಸೂಚಿಸಿದ ಸಿದ್ಧಗಂಗಾ ಶ್ರೀಗಳು

    ಸ್ವಾಮೀಜಿ ಚಿಕ್ಕನಾಯಕನಹಳ್ಳಿ ತಾಲೂಕಿಗೆ ಹೇಮಾವತಿ ನೀರು ಹರಿಸಲು ನಡೆದ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದವರೂ, ಪ್ರಗತಿಪರ ಚಿಂತಕರು. ಎಲ್ಲರನ್ನೂ ಕೈಬೀಸಿ ಕರೆದು ಎಲ್ಲರೊಳಗೊಬ್ಬರಾಗಿದ್ದವರು, ಕೊಬ್ಬರಿ ಬೆಲೆ ಹೆಚ್ಚಳ ಸೇರಿ ತಾಲೂಕಿನ ಹಲವಾರು ಹೋರಾಟದಲ್ಲಿ ಭಾಗಿಯಾಗಿದ್ದರು.

    1974ರ ಜುಲೈ 29ರಂದು ವೋಮಕೇಶಯ್ಯ ಮತ್ತು ದೇವಿರಮ್ಮ ದಂಪತಿಗೆ ಮಠದಲ್ಲಿಯೇ ಜನಿಸಿದ ಐವರು ಮಕ್ಕಳಲ್ಲಿ ನಾಲ್ಕನೆಯವರು. ಪ್ರೌಢಶಿಕ್ಷಣ ಮುಗಿಸಿ ಪದವಿಪೂರ್ವ ಕಾಲೇಜಿಗೆ ಸೇರಿಕೊಳ್ಳುವ ಮುನ್ನವೇ ಮಠದ ಗದ್ದುಗೆಯೇರುವ ಸಂದರ್ಭ ಉಂಟಾಯಿತು. 16ನೇ ವಯಸ್ಸಿನಲ್ಲಿಯೇ ಮಠದ ಉತ್ತರಾಧಿಕಾರಿಯಾದರು. ಬೆಂಗಳೂರಿನ ಮುಡುಕುತೊರೆಯಲ್ಲಿ ಶ್ರೀಮಹಾಲಿಂಗ ಶಿವಾಚಾರ್ಯರ ಸಮ್ಮುಖದಲ್ಲಿ ವೇದ, ಸಂಸ್ಕೃತ, ಆಗಮ, ಜ್ಯೋತಿಷ್ಯ, ಮುಂತಾದ ವಿದ್ಯೆಗಳನ್ನು ಕಲಿತಿದ್ದರು. “ವೀರಶೈವ ಧಾರ್ಮಿಕ ಸಂಸ್ಕಾರಗಳು ಮತ್ತು ಸಾಮಾಜಿಕ ಸ್ವಾಸ್ಥ್ಯ” ಎಂಬ ಮಹಾಪ್ರಬಂಧಕ್ಕೆ ಶ್ರೀಲಂಕಾದ ಕೊಲಂಬೊ ವಿವಿ ಡಾಕ್ಟರೇಟ್​ ಪದವಿ ನೀಡಿತ್ತು.

    ಯತೀಶ್ವರ ಶ್ರೀಗಳು ಕುಪ್ಪೂರು ಮಠದ ಸೇವಾ ಕಾರ್ಯಗಳನ್ನ ವಿಸ್ತರಿಸಿ ಜನರ ಪ್ರೀತಿಗೆ ಪಾತ್ರರಾಗಿದ್ದರು. ಉತ್ತಮ ವಾಗ್ಮಿಗಳಾಗಿದ್ದರು. ಎಲ್ಲರೊಳಗೆ ಒಂದಾಗಿ ಎಲ್ಲರನ್ನೂ ಪ್ರೀತಿಸುವ ಸಹೃದಯತೆ ಶ್ರೀಗಳದ್ದು. ಅಗಲಿಕೆ ಪ್ರಕೃತಿ ನಿಯಮ, ಮಧ್ಯ ವಯಸ್ಸಿನಲ್ಲಿ ಅಗಲಿರುವುದು ನೋವಿನ ಸಂಗತಿ. ಕುಪ್ಪೂರು ಗದ್ದುಗೆ ಧಾರ್ಮಿಕ, ಸಾಮಾಜಿಕ, ಆಧ್ಯಾತ್ಮಿಕ ಮಹತ್ವ ಪಡೆದುಕೊಂಡ ಕ್ಷೇತ್ರ.
    | ಶ್ರೀ ಸಿದ್ದಲಿಂಗ ಸ್ವಾಮೀಜಿ ಸಿದ್ಧಗಂಗಾ ಮಠದ ಮಠಾಧ್ಯಕ್ಷರು

    ವಿದ್ಯಾರ್ಥಿ ಬಸ್​ಪಾಸ್ ಅವಧಿ ವಿಸ್ತರಣೆ: ನವೆಂಬರ್​ವರೆಗೂ ಉಚಿತ ಪ್ರಯಾಣ

    ಚಾಮುಂಡಿ ಹುಂಡಿ ಹಣ ಎಣಿಕೆ: ಆಷಾಢ ಮಾಸದಲ್ಲಿ ಕುಸಿತ ಕಂಡ ಹಣ ಸಂಗ್ರಹ

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts