More

    ಕೆಪಿಎಸ್ಸಿ 2011ರ ಬ್ಯಾಚ್​ನ ಗೆಜೆಟೆಡ್​​ ಪ್ರೊಬೆಷನರಿಗಳ ನೇಮಕಕ್ಕೆ ಅಸ್ತು

    ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದ(ಕೆಪಿಎಸ್ಸಿ) 2011ನೇ ಸಾಲಿನ 362 ಗೆಜೆಟೆಡ್​​ ಪ್ರೊಬೆಷನರಿ ಹುದ್ದೆಗಳ ಆಯ್ಕೆ ಪಟ್ಟಿಯನ್ನು ಒಪ್ಪಿ ವಿಧೇಯಕ‌ ಮಂಡಿಸಲು ಸಂಪುಟ ಸಭೆಯಲ್ಲಿ ಬುಧವಾರ ನಿರ್ಧರಿಸಲಾಗಿದೆ.

    2011ನೇ ಗೆಜೆಟೆಡ್ ಪ್ರಬೆಷನರಿ ಬ್ಯಾಚ್ ಸಂಬಂಧ ಕೆಪಿಎಸ್ಸಿ ನೀಡಿದ ಪಟ್ಟಿಯನ್ನು ಒಪ್ಪಲು ಸಂಪುಟ ನಿರ್ಧರಿಸಿದೆ. ಹೀಗಾಗಿ ಶಾಸನ ಸಭೆಯಲ್ಲಿ ಈ ವಿಷಯದಲ್ಲಿ ಚರ್ಚೆ ಮಾಡುತ್ತೇವೆ. 2011ರ ಬ್ಯಾಚ್ ಪಟ್ಟಿಯನ್ನು ಒಪ್ಪಿ ಮುಂಬರುವ ಅಧಿವೇಶನದಲ್ಲೇ ವಿಧೇಯಕ ಮಂಡಿಸುತ್ತಿದ್ದೇವೆ. ಅಂದು ಸಮಜಾಯಿಷಿ, ಜ್ಯೇಷ್ಠತಾ ಪಟ್ಟಿ ಸೇರಿದಂತೆ ಎಲ್ಲವನ್ನೂ ಅಧಿವೇಶನದಲ್ಲಿ ಚರ್ಚೆ ಮಾಡುತ್ತೇವೆ ಎಂದು ಸಚಿವ ಮಾಧುಸ್ವಾಮಿ ಹೇಳಿದರು.

    ಸರ್ಕಾರ 2015ರಲ್ಲೇ ಆಯ್ಕೆ ಪಟ್ಟಿಯನ್ನು ಒಪ್ಪಿಕೊಂಡಿದೆ. ಕೆಪಿಎಸ್ಸಿ ಪ್ರಕಟಿಸಿದ್ದ ಆಯ್ಕೆ ಪಟ್ಟಿಗೆ ಅನುಮೋದನೆ ನೀಡಿ, ಅಭ್ಯರ್ಥಿಗಳು ಆಯ್ಕೆ ಆಗಿದ್ದಾರೆ ಎಂದು ಭಾವಿಸಿ ಅವರಿಗೆಲ್ಲ ನೇಮಕಾತಿ ಪತ್ರ ಕೊಡಬೇಕೆಂದು ಬಿಲ್​ ಮಂಡಿಸ್ತೇವೆ ಎಂದರು.

    ಕೆಪಿಎಸ್​ಸಿ 2011ರ ಬ್ಯಾಚ್​ನಲ್ಲಿ ಅಕ್ರಮ ನಡೆದಿದೆ ಎಂಬ ಕಾರಣಕ್ಕಾಗಿ 362 ಮಂದಿ ಮೇಲೆ ತೂಗುಕತ್ತಿ ನೇತಾಡುತ್ತಿತ್ತು. ಇವರ ಆಯ್ಕೆಯನ್ನ ಸಕ್ರಮಗೊಳಿಸಲು ಒಲವು ತೋರಿರುವ ರಾಜ್ಯಸರ್ಕಾರ, ಆಯ್ಕೆ ಪಟ್ಟಿಯನ್ನು ಒಪ್ಪಿ ವಿಧೇಯಕ‌ ಮಂಡಿಸಲು ಸಜ್ಜಾಗಿದೆ.

    ‘ಅಲ್ಲಾಹು ಅಕ್ಬರ್’ ಘೋಷಣೆ ಕೂಗಿದ್ದ ವಿದ್ಯಾರ್ಥಿನಿಗೆ 5 ಲಕ್ಷ ರೂ. ಬಹುಮಾನ?

    ರೈತನ ಆತ್ಮಹತ್ಯೆಗೆ ಅನುಮತಿ ನೀಡಿ ಸ್ವೀಕೃತಿ ಪತ್ರವನ್ನೂ ಕೊಟ್ಟ ಪಿಡಿಒ! ಕೊಪ್ಪಳ ಜಿಲ್ಲೇಲಿ ಘಟನೆ

    ಮದ್ವೆ ಆಸೆ ಹುಟ್ಟಿಸಿ ದೈಹಿಕ ಸಂಪರ್ಕ ಬೆಳೆಸಿದ, ಕೊನೆಗೆ ಹೇಳಬಾರದ್ದು ಹೇಳಿದ, ಪ್ಲೀಸ್​ ನ್ಯಾಯ ಕೊಡಿಸಿ… ಕಣ್ಣೀರಿಟ್ಟ ಸಂತ್ರಸ್ತೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts