More

    ಕರೊನಾ ಹಿನ್ನೆಲೆ ಐತಿಹಾಸಿಕ ಕೊಪ್ಪಳದ ಗವಿಮಠ ಜಾತ್ರೆ ರದ್ದು

    ಕೊಪ್ಪಳ: ದಕ್ಷಿಣ ಭಾರತದ ಮಹಾಕುಂಭ ಮೇಳ ಎಂಬ ಖ್ಯಾತಿಯ ಗವಿಮಠ ಜಾತ್ರೆ ಈ ಬಾರಿ ನಡೆಯಲ್ಲ. ಕರೊನಾ ಮತ್ತು ಒಮಿಕ್ರಾನ್​ ಪ್ರಕರಣ ದಿನದಿಂದ ಹೆಚ್ಚುತ್ತಿರುವ ಹಿನ್ನೆಲೆ ಕೊಪ್ಪಳ ಜಾತ್ರೆ ರದ್ದಾಗಿದೆ.

    ಪ್ರತಿ ವರ್ಷ 15 ದಿನಗಳ ಕಾಲ ನೆಡೆಯುತ್ತಿದ್ದ ಈ ಜಾತ್ರೆಯಲ್ಲಿ 5ರಿಂದ 6 ಲಕ್ಷ ಜನ ಸೇರುತ್ತಿದ್ದರು. ಈ ವರ್ಷ ಜನವರಿ 19ರಂದು ಮಹಾರಥೋತ್ಸವ ನಡೆಯಬೇಕಿತ್ತು. ಆದರೆ, ಕರೊನಾ ಮತ್ತು ಒಮಿಕ್ರಾನ್​ ಕರಿನೆರಳು ಜಾತ್ರೆ ಮೇಲೆ ಆವರಿಸಿದ್ದು, ಸೋಂಕು ಹರಡುವಿಕೆ ತಡೆಯುವ ನಿಟ್ಟಿನಲ್ಲಿ ಮುಂಜಾಗ್ರತಾ ಕ್ರಮವಾಗಿ ಜಾತ್ರೆಯನ್ನು ರದ್ದು ಮಾಡಿ ಗವಿಮಠದ ಆಡಳಿತ ಮಂಡಳಿ ಪ್ರಕಟಣೆ ಹೊರಡಿಸಿದೆ.

    ಜಾತ್ರೆ ರದ್ದಾಗಿದ್ದರೂ ಸಂಪ್ರಾದಾಯ ಬದ್ಧವಾಗಿ ಧಾರ್ಮಿಕ ವಿಧಿವಿಧಾನಗಳು ನಡೆಯಲಿವೆ. ಸದ್ಯ ಗವಿಸಿದ್ದೇಶ್ವರ ಕರ್ತೃ ಗದ್ದುಗೆಯ ದರ್ಶನ ಪಡೆಯಲು ಭಕ್ತರಿಗೆ ಅವಕಾಶವಿದೆ. ಒಂದು ವೇಳೆ ಕರೊನಾ ಮತ್ತಷ್ಟು ಹೆಚ್ಚಾದರೆ ಶ್ರೀಮಠದ ಭಕ್ತರ ಪ್ರವೇಶಕ್ಕೂ ನಿರ್ಬಂಧ ಹೇರಲಾಗುವುದು.

    ಅಯ್ಯನಗುಡಿ ಜಾತ್ರೆ ಮೇಲೆ ಕರೊನಾ ಛಾಯೆ: ಐತಿಹಾಸಿಕ ಕೆಂಗಲ್​ ದನಗಳ ಜಾತ್ರೆ ರದ್ದು

    ಬರೋಬ್ಬರಿ 6 ಅಡಿ ಮೇಲೆದ್ದ ಡುಪ್ಲೆಕ್ಸ್​ ಮನೆ! ಶಿವಮೊಗ್ಗದಲ್ಲಿ 150 ಜಾಕ್​ ಬಳಸಿ ಬಿಹಾರಿ ಕಾರ್ಮಿಕರ ಮ್ಯಾಜಿಕ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts