More

    ಕರ್ನಾಟಕ ರಾಜ್ಯಪಾಲರಾಗಿ ಥಾವರ್​ಚಂದ್​ ಗೆಹಲೋತ್ ಪ್ರಮಾಣವಚನ ಸ್ವೀಕಾರ

    ಬೆಂಗಳೂರು: ಕರ್ನಾಟಕದ 19ನೇ ರಾಜ್ಯಪಾಲರಾಗಿ 73 ವರ್ಷದ ಥಾವರ್ ಚಂದ್ ಗೆಹಲೋತ್ ಅವರು ಭಾನುವಾರ ಬೆಳಗ್ಗೆ ಪ್ರಮಾಣವಚನ ಸ್ವೀಕರಿಸಿದರು. ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಓಕ್​ ಪ್ರತಿಜ್ಞಾವಿಧಿ ಬೋಧಿಸಿದರು.

    ರಾಜಭವನದ ಗಾಜಿನಮನೆಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಈಶ್ವರನ ಹೆಸರಿನಲ್ಲಿ ಥಾವರ್ ಚಂದ್ ಗೆಹಲೋತ್ ಪ್ರಮಾನವಚನ ಸ್ವೀಕರಿದರು. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ನಿರ್ಗಮಿತ ರಾಜ್ಯಪಾಲ ವಜುಬಾಯಿ ವಾಲಾ. ವಿಧಾನಸಭಾಧ್ಯಕ್ಷ ವಿಶ್ವೇಶ್ವರಹೆಗಡೆ ಕಾಗೇರಿ, ಮೇಲ್ಮನೆ ಸಭಾಪತಿ ಬಸವರಾಜ ಹೊರಟ್ಟಿ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಉಪಸ್ಥಿತರಿದ್ದರು.

    ಮಧ್ಯಪ್ರದೇಶದ ನಾಗ್ಡಾದ ರುಪೆಟಾ ಗ್ರಾಮದಲ್ಲಿ ದಲಿತ ಕುಟುಂಬದಲ್ಲಿ ಜನಿಸಿದ ಥಾವರ್ ಚಂದ್ ಗೆಹಲೋತ್, ಭಾರತೀಯ ಜನತಾ ಪಕ್ಷದ ಹಿರಿಯ ಸದಸ್ಯರು. ಮಧ್ಯಪ್ರದೇಶದ ಉಜ್ಜಯಿನ ವಿಕ್ರಮ್ ವಿಶ್ವವಿದ್ಯಾಲಯದಿಂದ ಬ್ಯಾಚುಲರ್ ಆಫ್ ಆರ್ಟ್ಸ್ ಪದವಿ ಪಡೆದಿದ್ದಾರೆ. ಇವರು ಕೇಂದ್ರ ಸಾಮಾಜಿಕ, ನ್ಯಾಯ ಸಬಲೀಕರಣ ಸಚಿವರಾಗಿದ್ದರು. ಮೂರು ಬಾರಿ ಮಧ್ಯಪ್ರದೇಶದ ಶಾಸಕರಾಗಿ, ನಾಲ್ಕುಬಾರಿ ಲೋಕಸಭಾ ಸದಸ್ಯರಾಗಿದ್ದ ಥಾವರ್ ಚಂದ್ ಗೆಹಲೋತ್ ಅವರು ಹಾಲಿ ರಾಜ್ಯಸಭಾ ಸದಸ್ಯರಾಗಿದ್ದರು. ಇವರಿಗೆ ಡಾ.ಬಿ.ಆರ್‌.ಅಂಬೇಡ್ಕರ್‌ ಯೂನಿರ್ವಸಿಟಿ ಆಫ್ ಸೋಷಿಯಲ್‌ ಸೈನ್ಸ್‌ನಿಂದ ಗೌರವ ಡಾಕ್ಟರೇಟ್‌ ನೀಡಲಾಗಿದೆ.

    ಭಿಕ್ಷೆ ಬೇಡುತ್ತಿದ್ದ ವೃದ್ಧೆಗೆ ಅಚ್ಛೇ ದಿನ್​! ನೆಲಮಂಗಲ ತಹಸೀಲ್ದಾರ್ ಮಂಜುನಾಥ್​ರ ಕಾರ್ಯಕ್ಕೊಂದು ಸಲಾಂ

    ನಿನ್ನೆ ಮಂಡ್ಯದಲ್ಲಿ ಡಿಕೆಶಿ ಹೊಡೆದದ್ದು ಕೈ ಮುಖಂಡನಿಗಲ್ಲ, ಜೆಡಿಎಸ್​ ಕಾರ್ಯಕರ್ತನಿಗೆ!

    ‘ಲೈಂಗಿಕ ಉತ್ಸವ’ದಲ್ಲಿ ಮಿಂದೆದ್ದ ನೂರಾರು ಜೋಡಿಗಳು! ನಾಲ್ಕು ದಿನ ನಡೆಯಿತು ಸೆಕ್ಸ್​ ಫೆಸ್ಟಿವಲ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts