More

    ಭಿಕ್ಷೆ ಬೇಡುತ್ತಿದ್ದ ವೃದ್ಧೆಗೆ ಅಚ್ಛೇ ದಿನ್​! ನೆಲಮಂಗಲ ತಹಸೀಲ್ದಾರ್ ಮಂಜುನಾಥ್​ರ ಕಾರ್ಯಕ್ಕೊಂದು ಸಲಾಂ

    ನೆಲಮಂಗಲ: ತಾಲೂಕು ಆಡಳಿತದ ಮುಖ್ಯಸ್ಥರಲ್ಲಿ ಒಬ್ಬರಾಗಿದ್ದರೂ, ಯಾವುದೇ ಹಮ್ಮುಬಿಮ್ಮು ತೋರದೆ ಬಡ ವೃದ್ಧೆಯೊಬ್ಬರಿಗೆ ನೆರವಾಗುವ ಮೂಲಕ ತಹಸೀಲ್ದಾರ್ ಕೆ.ಮಂಜುನಾಥ್ ಮಾನವೀಯತೆ ಪ್ರದರ್ಶಿಸಿದ್ದಾರೆ.

    ನಗರದ ಅಂಬೇಡ್ಕರ್ ನಗರದ ಬಳಿ ಶುಕ್ರವಾರ ಕುರಿ ಸಂತೆಯಲ್ಲಿ ಕರೊನಾ ಮಾರ್ಗಸೂಚಿ ಪಾಲನೆಯ ಜಾಗೃತಿ ಮೂಡಿಸಲು ತಹಸೀಲ್ದಾರ್ ಕೆ. ಮಂಜುನಾಥ್ ತೆರಳಿದ್ದರು. ಆ ವೇಳೆ ಸಂತೆಯಲ್ಲಿ ಭಿಕ್ಷೆ ಬೇಡುತ್ತಿದ್ದ ವೃದ್ಧೆಯೊಬ್ಬರು ತಹಸೀಲ್ದಾರ್​ ಕಣ್ಣಿಗೆ ಬಿದ್ದರು.

    ಭಿಕ್ಷೆ ಬೇಡುತ್ತಿದ್ದ ವೃದ್ಧೆಗೆ ಅಚ್ಛೇ ದಿನ್​! ನೆಲಮಂಗಲ ತಹಸೀಲ್ದಾರ್ ಮಂಜುನಾಥ್​ರ ಕಾರ್ಯಕ್ಕೊಂದು ಸಲಾಂ

    ವೃದ್ಧೆಯನ್ನು ಬಳಿಗೆ ಕರೆಸಿಕೊಂಡ ತಹಸೀಲ್ದಾರ್​, ವೃದ್ಧಾಪ್ಯ ಪಿಂಚಣಿ ಬರುತ್ತಿದೆಯೇ? ಆಧಾರ್​ಕಾರ್ಡ್ ಇದೆಯೇ? ರೇಷನ್​ಕಾರ್ಡ್ ಇದೆಯೇ? ಎಂಬುದನ್ನು ವಿಚಾರಿಸಿದ್ದರು. ಇದೆಲ್ಲವೂ ಎಲ್ಲಿ ಸಿಗುತ್ತದೆ ಎಂಬುದು ಗೊತ್ತಿಲ್ಲ ಎಂದಾಗ, ತಾಲೂಕು ಕಚೇರಿಗೆ ಬಂದು ನಮ್ಮನ್ನು ಕಾಣುವಂತೆ ತಿಳಿಸಿದರು.

    ಇದಕ್ಕೆ ಆ ವೃದ್ಧೆ ತಮಗೆ ತಾಲೂಕು ಕಚೇರಿ ಕೂಡ ಗೊತ್ತಿಲ್ಲ ಎಂದಾಗ, ಅವರ ವಾಹನದಲ್ಲೇ ಆಕೆಯನ್ನು ತಾಲೂಕು ಕಚೇರಿಗೆ ಕರೆದೊಯ್ದು ಆಧಾರ್​ಕಾರ್ಡ್, ರೇಷನ್​ಕಾರ್ಡ್ ಕೊಡಿಸಿದ್ದಲ್ಲದೆ, ವೃದ್ಧಾಪ್ಯ ವೇತನಕ್ಕೂ ವ್ಯವಸ್ಥೆ ಮಾಡಿಕೊಟ್ಟರು.

    ಬೆಳ್ಳಂಬೆಳಗ್ಗೆ ನಂದಿ ಬೆಟ್ಟಕ್ಕೆ ಪ್ರವಾಸಿಗರ ಲಗ್ಗೆ! ಮಾರ್ಗದಲ್ಲೇ ಬಿಸಿ ಮುಟ್ಟಿಸಿದ ಪೊಲೀಸರು

    ನಿನ್ನೆ ಮಂಡ್ಯದಲ್ಲಿ ಡಿಕೆಶಿ ಹೊಡೆದದ್ದು ಕೈ ಮುಖಂಡನಿಗಲ್ಲ, ಜೆಡಿಎಸ್​ ಕಾರ್ಯಕರ್ತನಿಗೆ!

    ಸಲಿಂಗಕಾಮಕ್ಕೆ ಒಪ್ಪದ ಸರ್ಕಾರಿ ಶಾಲೆ ಶಿಕ್ಷಕನ ಬರ್ಬರ ಹತ್ಯೆ! ಬೆಚ್ಚಿಬೀಳಿಸುತ್ತೆ ಆ ರಾತ್ರಿಯ ಕೃತ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts