More

    ಸೀಟ್ ಮೆಟ್ರಿಕ್ಸ್ ಅನ್ಯಾಯ ಸರಿಪಡಿಸಿ

    ತರೀಕೆರೆ: ಸೇವಾನಿರತ ಹಾಗೂ ಮಾಜಿ ಸೈನಿಕರ ಮಕ್ಕಳಿಗೆ ಸ್ನಾತಕ ವೈದ್ಯಕೀಯ, ದಂತ ವೈದ್ಯಕೀಯ, ತಾಂತ್ರಿಕ ಶಿಕ್ಷಣ ಕೋರ್ಸ್‌ಗಳ ಸೀಟು ಹಂಚಿಕೆಯಲ್ಲಾಗುತ್ತಿವ ಅನ್ಯಾಯ ಖಂಡಿಸಿ ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ರಾಜ್ಯಾಧ್ಯಕ್ಷ ಮತ್ತು ವಿವಿಧ ಜಿಲ್ಲಾ ಅಧ್ಯಕ್ಷರ ನಿಯೋಗ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರಿಗೆ ಮನವಿ ಸಲ್ಲಿಸಿತು.
    2008ನೇ ಸಾಲಿನ ಮುಂಚೆ ಸೇವಾ ನಿರತ ಮತ್ತು ಮಾಜಿ ಸೈನಿಕರ ಮಕ್ಕಳಿಗೆ ಉದ್ಯೋಗ ನೇಮಕಾತಿ ಹಾಗೂ ಶಿಕ್ಷಣ ವ್ಯವಸ್ಥೆಯ ಸೀಟು ಹಂಚಿಕೆಯಲ್ಲಿ ಶೇ.10 ರಷ್ಟಿದ್ದ ಮೀಸಲಾತಿ ಪ್ರಮಾಣವನ್ನು ರಾಜ್ಯ ಸರ್ಕಾರ ಶೇ.0.01 ನಿಗದಿ ಮಾಡಿ ಆದೇಶ ಹೊರಡಿಸಿದ್ದರಿಂದ ಸೇವಾ ನಿರತ ಮತ್ತು ಮಾಜಿ ಸೈನಿಕರ ಮಕ್ಕಳ ಕನಸಿಗೆ ಎಳ್ಳು ನೀರು ಬಿಡುವಂತಾಗಿದೆ. ಇದರಿಂದ ಅದೆಷ್ಟೋ ಮಕ್ಕಳು ವೈದ್ಯಕೀಯ, ದಂತ ವೈದ್ಯಕೀಯ, ತಾಂತ್ರಿಕ ಶಿಕ್ಷಣ ಕೋರ್ಸ್‌ಗಳಿಂದ ಹಿಂದೆ ಸರಿಯುವ ನಿರ್ಣಯಕ್ಕೆ ಬರುವಂತಾಗಿದೆ ಎಂದು ಹೇಳಿದರು.
    ಅಷ್ಟಾಗಿಯೂ ಸರ್ಕಾರ 2023-24ನೇ ಸಾಲಿನ ಸ್ನಾತಕ ವೈದ್ಯಕೀಯ, ದಂತ ವೈದ್ಯಕೀಯ ಹಾಗೂ ತಾಂತ್ರಿಕ ಶಿಕ್ಷಣ ಕೋರ್ಸ್‌ಗಳ ಪರಿಷ್ಕೃತ ಸೀಟ್ ಮೆಟ್ರಿಕ್ಸ್‌ನಲ್ಲಿ ಮಾಜಿ ಮತ್ತು ಸೇವಾ ನಿರತ ಸೈನಿಕರ ಮಕ್ಕಳಿಗೆ ವೈದ್ಯಕೀಯ ಶಿಕ್ಷಣಕ್ಕೆ 4,918 ಸೀಟುಗಳ ಪೈಕಿ 6, ದಂತ ವೈದ್ಯಕೀಯ 1,738ರ ಪೈಕಿ ಸೇವಾ ನಿರತರ ಮಕ್ಕಳಿಗೆ ಮಾತ್ರ ಕೇವಲ 3 ಸೀಟು, ತಾಂತ್ರಿಕ ಶಿಕ್ಷಣದ 36 ಸಾವಿರಕ್ಕೂ ಹೆಚ್ಚು ಸೀಟುಗಳ ಪೈಕಿ ಸೇವಾ ನಿರತರ ಮಕ್ಕಳಿಗೆ 88, ಮಾಜಿ ಸೈನಿಕರ ಮಕ್ಕಳಿಗೆ 64ಸೀಟು ಹಂಚಿಕೆ ಮಾಡಿ ಹೊರಡಿಸಿರುವ ಆದೇಶ ನುಂಗಲಾರದ ಬಿಸಿ ತುಪ್ಪವಾಗಿ ಪರಿಣಮಿಸಿದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts