More

    ಬೀದಿಗೆ ಬಿತ್ತು ಸಚಿವ ಮಾಧುಸ್ವಾಮಿ, ಮಾಜಿ ಶಾಸಕ ಸುರೇಶ್​ಗೌಡ ನಡುವಿನ ಜಗಳ: ಜೆಸಿಎಂ ವಿರುದ್ಧ ನಡ್ಡಾಗೆ ದೂರು

    ತುಮಕೂರು: ಶಿಸ್ತಿನ ಪಕ್ಷ ಎಂದು ಹೇಳಿಕೊಳ್ಳುವ ಬಿಜೆಪಿ ಜಿಲ್ಲಾ ಘಟಕದ ಜಗಳ ಬೀದಿಗೆ ಬಂದಿದೆ. ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಹಾಗೂ ಮಾಜಿ ಶಾಸಕ ಬಿ.ಸುರೇಶ್​ಗೌಡ ನಡುವಿನ ಜಗಳ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅಂಗಳ ತಲುಪಿದೆ.

    ಮೂಲ ಬಿಜೆಪಿ ಕಾರ್ಯಕರ್ತರಿಗೆ ಜಿಲ್ಲಾ ಉಸ್ತುವಾರಿ ಸಚಿವರ ಕಾರ್ಯವೈಖರಿ ನೋವು ತಂದಿದೆ, ವಿರೋಧ ಪಕ್ಷಗಳ ಶಾಸಕರನ್ನು ಓಲೈಸಿಕೊಂಡು ಕ್ಷೇತ್ರದಲ್ಲಿ ಓಡಾಡಿದರೆ ಪಕ್ಷ ಸಂಟನೆ ಹೇಗೆ ಸಾಧ್ಯ ಎಂದು ಮಾಜಿ ಶಾಸಕ ಬಿ.ಸುರೇಶ್​ಗೌಡ ಬಹಿರಂಗವಾಗಿಯೇ ಹರಿಹಾಯ್ದಿದ್ದಾರೆ.

    ಗ್ರಾಮಾಂತರ ಕ್ಷೇತ್ರದ ಕೆರೆ ತುಂಬಿಸಲು ಅಂದಿನ ಬೃಹತ್​ ನೀರಾವರಿ ಮಂತ್ರಿ, ಇಂದು ಸಿಎಂ ಆಗಿರುವ ಬಸವರಾಜ ಬೊಮ್ಮಾಯಿ ಅವರೇ ಅನುಮೋದನೆ ನೀಡಿದ ಯೋಜನೆ ಅವೈಜ್ಞಾನಿಕ ಎಂದಿರುವ ಮಾಧುಸ್ವಾಮಿ ಹೇಳಿಕೆ ನಮಗೆ ಅಚ್ಚರಿ ಮೂಡಿಸಿದೆ. ಬೊಮ್ಮಾಯಿ ಕಾಲದ ಯೋಜನೆಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬಂತೆ ಆರೋಪಿಸಿದ್ದಾರೆ ಎಂದು ಸುರೇಶ್​ಗೌಡ ಕೋಪ ಹೊರಹಾಕಿದ್ದಾರೆ

    ಏನಿದು ವಿವಾದ?: ಆರಂಭದಿಂದಲೂ ಜೆ.ಸಿ.ಮಾಧುಸ್ವಾಮಿ ಹಾಗೂ ಬಿ.ಸುರೇಶ್​ಗೌಡರದ್ದು ಎಣ್ಣೆ, ಸೀಗೇಕಾಯಿ ಸಂಬಂಧ. ಪಕ್ಷ ಸಂಘಟನೆಯಲ್ಲಿ ಜೆಸಿಎಂ ವಿರೋಧಿ ಬಣದವರನ್ನು ಚಿಕ್ಕನಾಯಕನಹಳ್ಳಿ ಮಂಡಲಕ್ಕೆ ನೇಮಿಸಿದಾಗಿನಿಂದಲೂ ಬೂದಿ ಮುಚ್ಚಿದ ಕೆಂಡದಂತಿದ್ದ ಮುಸುಕಿನ ಗುದ್ದಾಟ ಈಗ ಸ್ಫೋಟವಾಗಿದೆ. ಸಚಿವ ಜೆ.ಸಿ.ಮಾಧುಸ್ವಾಮಿ ಇತ್ತೀಚೆಗೆ ನಡೆದ ಕೆಡಿಪಿ ಸಭೆಯಲ್ಲಿ ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿರುವ ಬಹುಗ್ರಾಮ ಕುಡಿಯುವ ನೀರು ಯೋಜನೆಗಳು ಅವೈಜ್ಞಾನಿಕವಾಗಿದ್ದು, ಕೆರೆಗಳಿಗೆ ಹೇಮಾವತಿ ನೀರು ಹರಿಸಲು ಇರುವ ಪೈಪ್​ಲೈನ್​ ಸಾಮರ್ಥ್ಯ ಸಾಕಾಗುತ್ತಿಲ್ಲ ಎಂದು ಹೇಳಿಕೆ ನೀಡಿದ್ದು ಹಾಗೂ ಜೆಡಿಎಸ್​ ಶಾಸಕ ಡಿ.ಸಿ.ಗೌರಿಶಂಕರ್​ ಮಾಧುಸ್ವಾಮಿ ಅವರನ್ನು ಹೊಗಳುವುದು ಸುರೇಶ್​ಗೌಡರ ಸಿಟ್ಟು ಹೆಚ್ಚಿಸಿದೆ.

    ಬಿಎಸ್​ವೈ ಸಿಎಂ, ಬೊಮ್ಮಾಯಿ ನೀರಾವರಿ ಮಂತ್ರಿಯಾಗಿದ್ದಾಗ ನಮ್ಮ ಒತ್ತಾಯದ ಮೇರೆಗೆ ತುಮಕೂರು ಗ್ರಾಮಾಂತರದಲ್ಲಿ ನೀರಾವರಿ ಯೋಜನೆಗೆ ಮಂಜೂರಾತಿ ನೀಡಲಾಗಿತ್ತು. ಆದರೆ ಯೋಜನೆ ಅವೈಜ್ಞಾನಿಕ ಎಂದು ಹೇಳಿಕೆ ನೀಡುವ ಮೂಲಕ ಜಿಲ್ಲಾ ಉಸ್ತುವಾರಿ ಸಚಿವ ವರಸೆ ಬದಲಿಸಿದ್ದು, ಮಾಧುಸ್ವಾಮಿ ವಿರುದ್ಧ ಶಿಸ್ತು ಕ್ರಮಕ್ಕೆ ಆಗ್ರಹಿಸಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರಿಗೆ ದೂರು ನೀಡುವೆ.
    | ಬಿ.ಸುರೇಶ್​ಗೌಡ ಮಾಜಿ ಶಾಸಕ

    ಸಖತ್ ವೈರಲ್​ ಆಗ್ತಿರೋ ಮದ್ವೆ ಫೋಟೋ ಹಿನ್ನೆಲೆ ಗೊತ್ತಾ? ಯುವತಿ ಹೇಳಿಕೆ ಕೇಳಿದ್ರೆ ಅಚ್ಚರಿಯಾಗೋದು ಖಂಡಿತ!

    ಬಸ್​ ನಿಲ್ದಾಣದಲ್ಲಿ ನಿಲ್ಲಿಸಿದ್ದ ಕೆಎಸ್​ಆರ್​ಟಿಸಿ ಬಸ್​ ಅನ್ನೇ ಕದ್ದ ಕಳ್ಳರು!

    ಲವ್​-ಸೆಕ್ಸ್​ ದೋಖಾ: ಎಎಸ್​ಐ ಸೇರಿ 8 ಮಂದಿ ವಿರುದ್ಧ ಎಫ್​ಐಆರ್! ಯುವತಿ ಸತ್ತ 11 ದಿನಕ್ಕೆ ಸಿಕ್ತು ಡೆತ್​ನೋಟ್​

    ಶಾಸಕ ಶ್ರೀನಿವಾಸ್​ಗೆ ಎಚ್​ಡಿಕೆ ಮಾಸ್ಟರ್ ಸ್ಟ್ರೋಕ್! 25ಕ್ಕೆ ಗುಬ್ಬಿಯಲ್ಲೇ ಸಮಾವೇಶ, ಪರ್ಯಾಯ ನಾಯಕತ್ವ ಸೃಷ್ಟಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts