More

    ಲಾಲ್​ಬಾಗ್​ನಲ್ಲಿ ಫಲಪುಷ್ಪ ಪ್ರದರ್ಶನದಲ್ಲಿ ಅಪ್ಪು ಸ್ಮರಣೆ: ಪುನೀತ್​ರನ್ನ ಕಣ್ತುಂಬಿಕೊಳ್ಳಲು ಅಭಿಮಾನಿಗಳ ಕಾತರ

    ಬೆಂಗಳೂರು: ಲಾಲ್​ಬಾಗ್​ ಸಸ್ಯೋದ್ಯಾನದಲ್ಲಿ ಈ ಬಾರಿ ‘ಸ್ವಾತಂತ್ರ್ಯೋತ್ಸವ ಫಲಪುಷ್ಪ ಪ್ರದರ್ಶನ’ ನಡೆಯಲಿದ್ದು, ಸ್ಯಾಂಡಲ್​ವುಡ್​ನ ಪವರ್​ ಸ್ಟಾರ್​​, ಕರುನಾಡಿನ ಪ್ರೀತಿಯ ಅಪ್ಪು ಅವರನ್ನ ಕಣ್ತುಂಬಿಕೊಳ್ಳಬಹುದು.

    ಹೂವಿನಲ್ಲಿ ಡಾ.ಪುನೀತ್​ ರಾಜ್​ಕುಮಾರ್​ರ ಪ್ರತಿಮೆ ಅರಳಲಿದ್ದು, ಡಾ.ರಾಜಕುಮಾರ್​ ಅವರ ಗಾಜನಗೂರಿನ ಮನೆಯನ್ನೂ ವಿವಿಧ ಹೂಗಳಿಂದ ನಿರ್ಮಿಸಲಾಗುತ್ತದೆ. ಇದು ಈ ಬಾರಿಯ ಫಲಪುಷ್ಪ ಪ್ರದರ್ಶನದ ವಿಶೇಷ.

    ತೋಟಗಾರಿಕೆ ಇಲಾಖೆ ಹಾಗೂ ಮೈಸೂರು ಉದ್ಯಾನ ಕಲಾ ಸಂಘಗಳು ಲಾಲ್​ಬಾಗ್​ನಲ್ಲಿ ಪ್ರತಿ ವರ್ಷಕ್ಕೆ ಎರಡು ಬಾರಿ ಅಂದರೆ ಜನವರಿಯಲ್ಲಿ ಗಣರಾಜ್ಯೋತ್ಸವ ಮತ್ತು ಆಗಸ್ಟ್​ನಲ್ಲಿ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ‘ಫಲಪುಷ್ಪ ಪ್ರದರ್ಶನ’ವನ್ನು ಆಯೋಜಿಸುತ್ತವೆ. ಆದರೆ, ಕರೊನಾ ಸಾಂಕ್ರಾಮಿಕ ಪಿಡುಗಿನ ಕಾರಣಕ್ಕೆ ಕಾರ್ಯಕ್ರಮ ಕೈಬಿಡಲಾಗಿತ್ತು. ಇದೀಗ ಸಹಜ ಪರಿಸ್ಥಿತಿ ಮರಳಿರುವ ಹಿನ್ನೆಲೆಯಲ್ಲಿ ಪ್ರತಿಷ್ಠಿತ ಫಲಪುಷ್ಪ ವೈಭವ ಮರುಕಳಿಸಲಿದೆ. ಫಲಪುಷ್ಪ ಪ್ರದರ್ಶನದಲ್ಲಿ ಪುನೀತ್​ರನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳ ಕಾತರದಿಂದ ಕಾಯುತ್ತಿದ್ದಾರೆ.

    ಈ ಕುರಿತು ಸುದ್ದಿಗಾರರಿಗೆ ಮಾಹಿತಿ ನೀಡಿದ ತೋಟಗಾರಿಕೆ ಸಚಿವ ಮುನಿರತ್ನ, ಆ.5 ರಿಂದ 17ರ ವರೆಗೆ ಫಲಪುಷ್ಪ ಪ್ರದರ್ಶನ ಇರಲಿದೆ. ಆ.5ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ ನೀಡಲಿದ್ದಾರೆ. ಡಾ.ಪುನೀತ್ ರಾಜ್​ಕುಮಾರ್​​ ಅವರದ್ದು ಸ್ನೇಹಮಯಿ ವ್ಯಕ್ತಿತ್ವ. ಬಾಲ್ಯ ಕಲಾವಿದನಾಗಿ ಪ್ರತಿಭೆ ಮೆರೆದು, ಬೆಳೆದು ಅಲ್ಪಾವಧಿಯಲ್ಲಿ ಕೀರ್ತಿ ಶಿಖರಕ್ಕೆ ಏರಿದ ಅವರ ಕೊಡುಗೆ ಅವಿಸ್ಮರಣೀಯ. ಕರೊನಾ ಬಳಿಕ ಮೊದಲ ಬಾರಿಗೆ ನಡೆಯಲಿರುವ ಫಲಪುಷ್ಪ ಪ್ರದರ್ಶನದಲ್ಲಿ ಪುನೀತ್​ ಅವರನ್ನು ಸ್ಮರಿಸಲಾಗುವುದು ಎಂದರು.

    ಅಭಿಮಾನಿಗಳ ನೆಚ್ಚಿನ ಅಣ್ಣಾವ್ರಿಗೆ ಗಾಜನೂರಿನ ಮನೆ ಬಗ್ಗೆ ಹೆಚ್ಚಿನ ಅಕ್ಕರೆ, ಪ್ರೀತಿಯಿತ್ತು. ಈ ನೆನಪಿನ ಕುರುವು ಆಗಿ ಪುಷ್ಪಗಳಲ್ಲಿ ಗಾಜನೂರಿನ ಮನೆ ಅರಳಲಿದೆ. ಪುನೀತ್​ ಮತ್ತು ಗಾಜನೂರಿನ ಮನೆ ಪ್ರದರ್ಶನ ಅಂದಗಾಣಿಸಲು ವಿದೇಶದಿಂದ ಹೂಗಿಡಗಳ ಪಟ್ಟಿ ತರಿಸಿಕೊಂಡು ನಮ್ಮ ವಾತಾವರಣಕ್ಕೆ ಹೊಂದಿಕೊಳ್ಳುವ ಗಿಡಗಳನ್ನು ಆಯ್ಕೆ ಮಾಡುತ್ತೇವೆ ಎಂದು ವಿವರಿಸಿದರು.

    ಇವರು ನಮ್ಮ ಪಕ್ಷದ ಕಾರ್ಯಕರ್ತ, ಇವರ ಕಾರನ್ನು ಹಿಡಿದು ತೊಂದರೆ ಕೊಡಬಾರದು: ಬಿಜೆಪಿ MLA ಶಿಫಾರಸು

    ದಾಂಡೇಲಿಯಲ್ಲಿ ಮಗನಿಂದಲೇ ತಾಯಿ ಮೇಲೆ ಅತ್ಯಾಚಾರ: ಒಂದೇ ದಿನ 2 ಬಾರಿ ಬಲತ್ಕಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts