More

    ಬೇಡ ಬೇಡ ಅಂದ್ರೂ ಪ್ರಿಯಕರನ ಜತೆ ಸುತ್ತಾಡಿ ಹೋಟೆಲ್​ಗೆ ಹೋದ ಮೈಸೂರಿನ ಬಿಸಿಎ ವಿದ್ಯಾರ್ಥಿನಿ ದುರಂತ ಅಂತ್ಯ!

    ಮೈಸೂರು: ಆಕೆ ಬಿಸಿಎ ವಿದ್ಯಾರ್ಥಿನಿ. 15 ದಿನ ಕಳೆದಿದ್ರೆ ಪದವಿ ಮುಗಿಸಿ ತನ್ನ ಊರಿಗೆ ಹೋಗುತ್ತಿದ್ದು, ತಂದೆ-ತಾಯಿಗೆ ಆಸರೆಯಾಗುತ್ತಿದ್ದಳು. ಆದ್ರೆ ವಿಧಿಯ ಆಟವೇ ಬೇರೆಯಾಗಿತ್ತು. ಸ್ನೇಹಿತನ ಜತೆ ಹೋಟೆಲ್​ಗೆ ಬಂದ ವಿದ್ಯಾರ್ಥಿನಿ ಹೆಣವಾಗಿದ್ದಾಳೆ. ಆಕೆಯ ಸಾವಿನ ಸುತ್ತ ಅನುಮಾನದ ಹುತ್ತ ಬೆಳೆದಿದೆ.

    ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲೂಕಿನ ಹರಳಹಳ್ಳಿ ಗ್ರಾಮದ ನಿವಾಸಿ ರವಿ ಎಂಬುವರ ಪುತ್ರಿ ಅಪೂರ್ವಶೆಟ್ಟಿ (21) ಮೃತ ದುರ್ದೈವಿ. ಮೈಸೂರಿನ ಖಾಸಗಿ ಕಾಲೇಜಿನಲ್ಲಿ ಅಂತಿಮ ವರ್ಷದ ಬಿಸಿಎ ವ್ಯಾಸಂಗ ಮಾಡುತ್ತಿದ್ದಳು. ಹಲವು ವರ್ಷಗಳಿಂದ ಆಶಿಕ್ ಎಂಬ ಯುವಕನ ಜತೆ ಓಡಾಡುತ್ತಿದ್ದಳು. ಎರಡು ದಿನಗಳ ಹಿಂದೆ ಮೈಸೂರಿನ ಹುಣಸೂರು ರಸ್ತೆಯಲ್ಲಿರುವ ಖಾಸಗಿ ಹೋಟೆಲ್​ನಲ್ಲಿ ಆಶಿಕ್ ಜತೆ ರೂಂ ಬಾಡಿಗೆ ಪಡೆದು ವಾಸ್ತವ್ಯ ಹೂಡಿದ್ದರು. ಆಶಿಕ್ ಆಗಾಗ ಹೊರಗಡೆ ಹೋಗಿ ಮತ್ತೆ ಹೋಟೆಲ್​ಗೆ ವಾಪಸ್ ಬರುತ್ತಿದ್ದ. ನಿನ್ನೆ ಬೆಳಗ್ಗೆ ಹೋಟೆಲ್​ನಿಂದ ಹೊರಟ ಆಶಿಕ್ ಮತ್ತೆ ವಾಪಸ್ ಹೋಟೆಲ್​ಗೆ ಬಂದಿರಲಿಲ್ಲ. ಆಕೆ ಸಂಜೆಯಾದರೂ ಹೋಟೆಲ್​ನಿಂದ ಹೊರ ಬಾರದ ಕಾರಣ ಅನುಮಾನಗೊಂಡು ಹೋಟೆಲ್ ಸಿಬ್ಬಂದಿ ರೂಂನಲ್ಲಿದ್ದ ಇಂಟರ್ ಕಾಂಗೆ ಕರೆ ಮಾಡಿದ್ದಾರೆ. ಕರೆ ಸ್ವೀಕರಿಸದಿದ್ದಾಗ ಅನುಮಾನಗೊಂಡ ಸಿಬ್ಬಂದಿ, ದೇವರಾಜ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ದೇವರಾಜ ಠಾಣೆ ಪೊಲೀಸರು ಬಂದು ರೂಂ ಬಾಗಿಲು ತೆರೆದು ನೋಡಿದಾಗ ಅಪೂರ್ವ ಶೆಟ್ಟಿ ಮೃತಪಟ್ಟಿರುವುದು ಗೊತ್ತಾಗಿದೆ.

    ಅಪೂರ್ವ ಶೆಟ್ಟಿ ಸ್ನೇಹಿತರ ಮಾಹಿತಿ ಪ್ರಕಾರ, ಆಶಿಕ್ ಮತ್ತು ಅಪೂರ್ವಶೆಟ್ಟಿ ಹಲವು ವರ್ಷಗಳಿಂದ ಪ್ರೀತಿ ಮಾಡುತ್ತಿದ್ದರು. ಒಂದೂವರೆ ವರ್ಷದ ಹಿಂದೆ ಮನೆಯವರಿಗೆ ವಿಚಾರ ತಿಳಿದು ಜಗಳ ಕೂಡ ಆಗಿತ್ತಂತೆ. ಇಬ್ಬರಿಗೂ ಬುದ್ಧಿ ಮಾತು ಹೇಳಿ ದೂರ ಇರುವಂತೆ ಎಚ್ಚರಿಸಿದ್ದರು. ಇದಾದ ಬಳಿಕವೂ ಆಕೆ, ಪ್ರಿಯಕರನ ಸಹವಾಸ ಬಿಟ್ಟಿರಲಿಲ್ಲವಂತೆ.

    ಹೋಟೆಲ್​ನಲ್ಲಿ ಅವರಿಬ್ಬರೂ ಒಟ್ಟಿಗೆ ಇದ್ದ ವೇಳೆ ಜಗಳ ನಡೆದು ಮಗಳು ಕೊಲೆ ಆಗಿರಬಹುದೆಂದು ಅಪೂರ್ವಶೆಟ್ಟಿಯ ತಂದೆ ದೇವರಾಜ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ಸ್ನೇಹಿತ ಆಶಿಕ್​ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಆತ ಕೂಡ ಅಪೂರ್ವಶೆಟ್ಟಿ ಸಾವಿನ ನಂತರ ಆತ್ಮಹತ್ಯೆಗೆ ಯತ್ನಸಿದ್ದ ಎಂಬ ಮಾಹಿತಿ ಲಭ್ಯವಾಗಿದೆ. ಪೊಲೀಸರ ತನಿಖೆಯ ನಂತರವಷ್ಟೇ ಅಪೂರ್ವಶೆಟ್ಟಿಯ ಸಾವಿನ ರಹಸ್ಯ ಗೊತ್ತಾಗಲಿದೆ. ಮಗಳು ಓದಲಿ ಎಂದು ತಂದೆ-ತಾಯಿ ಕಳಿಸಿದ್ರೆ, ಈ ರೀತಿ ಪ್ರೀತಿ-ಪ್ರೇಮ ಅಂತ ಬಲಿಯಾಗಿದ್ದು ಮಾತ್ರ ದುರಂತ. (ದಿಗ್ವಿಜಯ ನ್ಯೂಸ್, ಮೈಸೂರು)

    ಮಳೆಯಿಂದ ಮಂಡ್ಯದಲ್ಲಿ ಬಯಲಾಯ್ತು ಭಯಾನಕ ರಹಸ್ಯ! ಸ್ನಾನದ ಕೋಣೆಯಲ್ಲಿ ಸುರಂಗ… ಮಾಲೀಕನಿಗೆ ಕಾದಿತ್ತು ಶಾಕ್

    ಒಬ್ಬಳನ್ನೇ ಮದ್ವೆಯಾದ ಇಬ್ಬರು! ಆ.28ರ ರಾತ್ರಿ ಮಾಡಬಾರದ್ದು ಮಾಡಲು ಹೋಗಿ ಸಿಕ್ಕಿಬಿದ್ದ 2ನೇ ಪತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts