More

    ಕರೊನಾ ಬುಲೆಟಿನ್​: ಸೋಂಕಿತರು-ಗುಣಮುಖರ ಸಂಖ್ಯೆಯ ನಡುವೆ ಆಶಾದಾಯಕ ಅಂತರ…

    ಬೆಂಗಳೂರು: ರಾಜ್ಯದಲ್ಲಿ ಭಾನುವಾರ ಹೊಸದಾಗಿ 5,018 ಕೋವಿಡ್-19 ಪಾಸಿಟಿವ್​ ಪ್ರಕರಣಗಳು ಪತ್ತೆಯಾಗಿದ್ದು, ಈ ಮೂಲಕ ಇದುವರೆಗಿನ ಸೋಂಕಿತರ ಪ್ರಮಾಣ ಒಟ್ಟಿಗೆ 7,70,604ಕ್ಕೆ ತಲುಪಿದೆ. ಈ ಮೂಲಕ ಸೋಂಕಿತರಿಗಿಂತ ಗುಣವಾದವರ ಸಂಖ್ಯೆಯ ನಡುವಿನ ಅಂತರ ಮತ್ತಷ್ಟು ಹೆಚ್ಚಾಗಿದ್ದು, ಪರಿಸ್ಥಿತಿ ಸುಧಾರಿಸುವ ಲಕ್ಷಣಗಳು ಗೋಚರಿಸಿವೆ.

    ಮತ್ತೊಂದೆಡೆ ಗುಣಮುಖರಾಗಿರುವವರ ಪೈಕಿ ಒಂದೇ ದಿನ 8,005 ಮಂದಿ ಆಸ್ಪತ್ರೆ ಹಾಗೂ ಕೋವಿಡ್​ ಕೇರ್ ಸೆಂಟರ್​ಗಳಿಂದ ಬಿಡುಗಡೆ ಆಗಿ ಮನೆಗೆ ಮರಳಿದ್ದಾರೆ. ಈ ಮೂಲಕ ಇದುವರೆಗೆ ಗುಣವಾಗಿರುವವರ ಸಂಖ್ಯೆ ಒಟ್ಟು 6,53,829ಕ್ಕೆ ಏರಿದೆ.

    ಪ್ರಸ್ತುತ ರಾಜ್ಯದಲ್ಲಿ 1,06,214 ಪ್ರಕರಣಗಳು ಸಕ್ರಿಯವಾಗಿದ್ದು, ಅವರಲ್ಲಿ ಗಂಭೀರ ರೋಗಲಕ್ಷಣಗಳಿರುವ 932 ಸೋಂಕಿತರು ತೀವ್ರ ನಿಗಾ ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಸೋಂಕಿತರ ಪೈಕಿ ಶನಿವಾರ ಒಂದೇ ದಿನ 64 ಮಂದಿ ಕರೊನಾಗೆ ಬಲಿಯಾಗಿದ್ದು, ಕರೊನಾದಿಂದಾಗಿ ಇದುವರೆಗೆ ಮೃತಪಟ್ಟವರ ಸಂಖ್ಯೆ ಒಟ್ಟು 10,542ಕ್ಕೆ ತಲುಪಿದೆ.

    ರಾಜ್ಯದಲ್ಲಿ ಶನಿವಾರ ಹೊಸದಾಗಿ 7,184 ಕೋವಿಡ್-19 ಪಾಸಿಟಿವ್​ ಪ್ರಕರಣಗಳು ಪತ್ತೆಯಾಗಿದ್ದು, 8,893 ಮಂದಿ ಗುಣಮುಖರಾಗಿ ಬಿಡುಗಡೆ ಆಗಿದ್ದರು. ಭಾನುವಾರ 7012 ಸೋಂಕಿತರು ಹೊಸದಾಗಿ ಪತ್ತೆಯಾಗಿದ್ದು, 8,344 ಮಂದಿ ಗುಣಮುಖರಾಗಿ ಬಿಡುಗಡೆ ಆಗಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts