More

    ಹಿಜಾಬ್​ ವಿವಾದ: ಉಡುಪಿ ಎಂಜಿಎಂ ಕಾಲೇಜಲ್ಲಿ ಪಿಯುಸಿ ಪ್ರಾಕ್ಟಿಕಲ್ ಎಕ್ಸಾಂ ಮುಂದೂಡಿಕೆ

    ಉಡುಪಿ: ರಾಜ್ಯದಲ್ಲಿ ಹಿಜಾಬ್​ ಗಲಾಟೆ ಗುರುವಾರವೂ ಮುಂದುವರಿದಿದೆ. ಉಡುಪಿಯ ಎಂಜಿಎಂ ಕಾಲೇಜಿನಲ್ಲಿ ಇಂದು ದ್ವಿತೀಯ ಪಿಯುಸಿ ಪ್ರಾಕ್ಟಿಕಲ್ ಎಕ್ಸಾಂ ಅನ್ನು ಮುಂದೂಡಲಾಗಿದೆ.

    ಫೆ.8ರಂದು ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಕಾಲೇಜಿಗೆ ಆಗಮಿಸಿದ್ದರು. ಇದಕ್ಕೆ ಪ್ರತಿಯಾಗಿ ಹಿಂದೂ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಕೇಸರಿ ಶಾಲು, ಪೇಟ ಧರಿಸಿ ಕ್ಯಾಂಪಸ್‌ನಲ್ಲಿ ಹಾಜರಾಗಿದ್ದ ಸ್ಥಳದಲ್ಲಿ ಉದ್ವಿಗನ ಪರಿಸ್ಥಿತಿ ನಿರ್ಮಾಣವಾಗಿತ್ತು. ಕೊನೆಗೆ ಕಾಲೇಜಿಗೆ ಆಡಳಿತ ಮಂಡಳಿ ಅನಿರ್ದಿಷ್ಟಾವಧಿ ರಜೆ ಘೋಷಣೆ ಮಾಡಿತ್ತು.

    ಗುರುವಾರ ಕೆಮಿಸ್ಟ್ರಿ ಪ್ರಾಕ್ಟಿಕಲ್ ಪರೀಕ್ಷೆ ನಡೆಯಬೇಕಿತ್ತು. ಸುಮಾರು ಇಪ್ಪತ್ತಕ್ಕಿಂತ ಹೆಚ್ಚು ಮುಸ್ಲಿಂ ವಿದ್ಯಾರ್ಥಿನಿಯರು ಈ ತರಗತಿಯಲ್ಲಿದ್ದಾರೆ. ಮತ್ತೆ ಗೊಂದಲದ ವಾತಾವರಣ ನಿರ್ಮಾಣ ಆಗಬಾರದೆಂದು ತಾತ್ಕಾಲಿಕವಾಗಿ ಪರೀಕ್ಷೆಯನ್ನು ಮುಂದೂಡಲಾಗಿದೆ. ಶೀಘ್ರವೇ ಪರೀಕ್ಷೆಯ ಮುಂದಿನ ದಿನಾಂಕ ಪ್ರಕಟಿಸುವುದಾಗಿ ಎಂಜಿಎಂ ಕಾಲೇಜು ಆಡಳಿತ ಮಂಡಳಿ ತಿಳಿಸಿದೆ.

    ವಿಜಯಪುರದಲ್ಲಿ ಹಾಡಹಗಲೇ ಪಿಎಸ್‌ಐ ಮಗನ ಹತ್ಯೆ: ಗರ್ಭಿಣಿ ಮಗಳ ಬಾಳಿಗೆ ಕೊಳ್ಳಿ ಇಟ್ಟ ಮಾಜಿ ಕಾರ್ಪೋರೇಟರ್​

    ನೀನೊಳ್ಳೆ ಜಮೀರ್​ ಆಡ್ದಂಗೆ ಆಡ್ತಿಯಲ್ಲೋ… ರೇಣುಕಾಚಾರ್ಯರನ್ನು ಮಾತಲ್ಲೇ ಚಿವುಟಿದ ಬಿಎಸ್​ವೈ

    ಕಲಬುರಗಿ ಜಿಲ್ಲಾಧಿಕಾರಿ ಕಾರು ಜಪ್ತಿಗೆ ಕೋರ್ಟ್​ ಆದೇಶ: ರೈತನಿಗೆ ಪರಿಹಾರ ಕೊಡದೆ ಸತಾಯಿಸುತ್ತಿದ್ದ ಡಿಸಿಗೆ ಶಾಕ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts