More

    ಪತ್ನಿಗೆ ಸಂಬಂಧಿಸಿದ ವಿವರ ಮರೆಮಾಚಿದ ಪ್ರಕರಣ: ಸೂರಜ್​ ರೇವಣ್ಣಗೆ ಹೈಕೋರ್ಟ್​ನಿಂದ ಸಮನ್ಸ್​ ಜಾರಿ

    ಬೆಂಗಳೂರು: ನಾಮಪತ್ರಿಕೆ ಸಲ್ಲಿಕೆ ವೇಳೆ ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಪ್ರಮಾಣಪತ್ರದಲ್ಲಿ ಪತ್ನಿಗೆ ಸಂಬಂಧಿಸಿದ ವಿವರಗಳನ್ನು ನಮೂದಿಸದ ಆರೋಪಕ್ಕೆ ಸಂಬಂಧಿಸಿದಂತೆ ವಿಧಾನಪರಿಷತ್​ ಸದಸ್ಯ ಡಾ. ಸೂರಜ್​ ರೇವಣ್ಣ ಅವರಿಗೆ ಹೈಕೋರ್ಟ್​ ಸಮನ್ಸ್​ ಜಾರಿಗೊಳಿಸಿದೆ.

    ಹಾಸನ ಕ್ಷೇತ್ರದ ಸ್ಥಳೀಯ ಸಂಸ್ಥೆ ಕ್ಷೇತ್ರದಿಂದ ಎಂಎಲ್​ಸಿ ಆಗಿ ಆಯ್ಕೆಯಾಗಿರುವ ಡಾ. ಸೂರಜ್​ ರೇವಣ್ಣ ಅವರ ಆಯ್ಕೆ ಕಾನೂನುಬಾಹಿರವೆಂದು ಘೋಷಿಸುವಂತೆ ಕೋರಿ ಹೊಳೆನರಸೀಪುರ ತಾಲೂಕಿನ ಕಾಮಸಮುದ್ರ ಗ್ರಾಮದ ಎಲ್​. ಹನುಮೇಗೌಡ ಸಲ್ಲಿಸಿರುವ ಚುನಾವಣಾ ತಕರಾರು ಅರ್ಜಿಯನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಪೀಠ ಶುಕ್ರವಾರ ವಿಚಾರಣೆ ನಡೆಸಿತು.

    ಅರ್ಜಿದಾರರ ಪರ ಹಿರಿಯ ವಕೀಲೆ ಪ್ರಮೀಳಾ ನೇಸರ್ಗಿ ವಾದ ಮಂಡಿಸಿ, ಅರ್ಜಿಯಲ್ಲಿ ಪ್ರತಿವಾದಿಯಾಗಿರುವ ಸೂರಜ್​ ರೇವಣ್ಣ ನೋಟಿಸ್​ ಸ್ವೀಕರಿಸುವ ಪ್ರಕ್ರಿಯೆಗೆ ಸಹಕರಿಸದೆ ವಿಳಂಬ ಮಾಡುತ್ತಿದ್ದಾರೆ. ಆದ್ದರಿಂದ, ಸ್ಥಳೀಯ ಜಿಲ್ಲಾ ನ್ಯಾಯಾಧೀಶರ ಮುಖಾಂತರ ನೋಟಿಸ್​ ಜಾರಿಗೊಳಿಸಲು ನಿರ್ದೇಶಿಸಬೇಕು ಎಂದು ಕೋರಿದರು.

    ಕಾನೂನು ಪ್ರಕಾರ ಈಗ ಸಮನ್ಸ್​ ನೀಡೋಣ, ಸ್ವೀಕರಿಸದೇ ಹೋದಲ್ಲಿ ಮುಂದಿನ ಪ್ರಕ್ರಿಯೆ ಬಗ್ಗೆ ನೋಡೋಣ ಎಂದು ತಿಳಿಸಿದ ಪೀಠ, ಸೂರಜ್​ ರೇವಣ್ಣ ಅವರಿಗೆ ಸಮನ್ಸ್​ ಜಾರಿಗೊಳಿಸಿ ವಿಚಾರಣೆಯನ್ನು ಏ.8ಕ್ಕೆ ಮುಂದೂಡಿತು.

    ಆರೋಪವೇನು?: ಸೂರಜ್​ ರೇವಣ್ಣ 2017ರ ಮಾ.4ರಂದು ಮದುವೆಯಾಗಿದ್ದಾರೆ. ಆದರೆ, ಎಂಎಲ್​ಸಿ ಚುನಾವಣೆಗಾಗಿ 2021ರ ನ.23ರಂದು ನಾಮಪತ್ರ ಸಲ್ಲಿಸುವ ವೇಳೆ ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಪ್ರಮಾಣ ಪತ್ರದ ಅರ್ಜಿ ನಮೂನೆ 26ರಲ್ಲಿ ತಮ್ಮ ಪತ್ನಿಗೆ ಸಂಬಂಧಿಸಿದ ಯಾವುದೇ ಮಾಹಿತಿಗಳನ್ನು ಒದಗಿಸಿಲ್ಲ. ಪತ್ನಿಗೆ ಸಂಬಂಧಿಸಿದಂತೆ ನಗದು, ಆಸ್ತಿ, ಬ್ಯಾಂಕ್​ ಖಾತೆ ಮತ್ತಿತರ ಕಾಲಂಗಳಲ್ಲಿ ‘ಅನ್ವಯವಾಗುವುದಿಲ್ಲ’ ಎಂದು ನಮೂದಿಸಿದ್ದಾರೆ. ಜತೆಗೆ, ಸೂರಜ್​ ರೇವಣ್ಣ ತಮ್ಮ ಬ್ಯಾಂಕ್​ ಖಾತೆಗಳ ಬಗ್ಗೆಯೂ ಸರಿಯಾದ ಮಾಹಿತಿ ಒದಗಿಸಿಲ್ಲ. ಈ ಮೂಲಕ ಚುನಾವಣೆಯಲ್ಲಿ ಅಕ್ರಮ ಎಸಗಿರುವ ಸೂರಜ್​ ರೇವಣ್ಣ ಅವರ ಆಯ್ಕೆಯು ಪ್ರಜಾ ಪ್ರತಿನಿಧಿ ಕಾಯ್ದೆ-1951ರ ಕಲಂ 123 (1) (ಎ) (ಬಿ) ಮತ್ತು 123 (2)ಗೆ ವಿರುದ್ಧವಾಗಿದೆ ಎಂದು ಆರೋಪಿಸಿರುವ ಅರ್ಜಿದಾರರು, ಅವರ ಆಯ್ಕೆಯನ್ನು ಕಾನೂನು ಬಾಹಿರ ಎಂದು ಘೋಷಿಸಬೇಕು ಎಂದು ಮನವಿ ಮಾಡಿದ್ದಾರೆ.

    ನನ್ನ ಅರಿವಿಗೆ ಬಾರದೇ ಅಚಾತುರ್ಯವಾಗಿದ್ರೆ ವಿಷಾದಿಸುವೆ… ಮಾಜಿ ಶಾಸಕರಿಗೆ ಪತ್ರ ಬರೆದು ಕ್ಷಮೆ ಕೋರಿದ ಡಿಕೆಶಿ

    ದಯನೀಯ ಸ್ಥಿತಿಯಲ್ಲಿರುವ ಶಿವಮೊಗ್ಗದ ವಿಶ್ವನಾಥ ಶೆಟ್ಟಿ ತಾಯಿಗೆ ಪ್ರೇಜಾವರ ಶ್ರೀಗಳ ನೆರವು, ಪೊಳ್ಳು ಭರವಸೆ ವಿರುದ್ಧ ಆಕ್ರೋಶ

    6 ವರ್ಷದ ಹಿಂದೆ ಸಂತೆಯಲ್ಲಿ ಬೇರ್ಪಟ್ಟಿದ್ದ ತಾಯಿ-ಮಗನನ್ನು ಒಂದುಗೂಡಿಸಿದ ಆಧಾರ್ ಕಾರ್ಡ್​! ಭಾವುಕ ಕ್ಷಣಕ್ಕೆ ಸಾಕ್ಷಿಯಾದ ಯಲಹಂಕ ಪೊಲೀಸರು

    ಕೋಲಾರ ಜಿಲ್ಲಾಡಳಿತ ಭವನದಲ್ಲೇ 2.80 ಲಕ್ಷ ರೂ. ಲಂಚ ಪಡೆಯುವಾಗ ಸಿಕ್ಕಿಬಿದ್ದ ಉಪ ತಹಸೀಲ್ದಾರ್, ಎಫ್​ಡಿಎ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts