More

    ಉತ್ತಮ ಜೀವನಶೈಲಿ ರೂಢಿಸಿಕೊಳ್ಳಬೇಕು

    ಮಾಂಜರಿ: ಆರೋಗ್ಯ ಮುಖ್ಯವಾಗಿದ್ದು, ಪ್ರತಿಯೊಬ್ಬರೂ ಮಿತವಾದ ಆಹಾರ ಸೇವಿಸುವ ಜತೆಗೆ ವೈದ್ಯರ ಸಲಹೆ ಪಡೆದು ಉತ್ತಮ ಜೀವನ ಶೈಲಿ ರೂಢಿಸಿಕೊಳ್ಳಬೇಕು ಎಂದು ಶ್ರೀಶೈಲ ಪೀಠದ ಜಗದ್ಗುರು ಡಾ.ಚೆನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

    ಸಮೀಪದ ಯಡೂರು ಗ್ರಾಮದ ವೀರಭದ್ರ ದೇವಸ್ಥಾನದ ವಿಶಾಳಿ ಜಾತ್ರಾ ಮಹೋತ್ಸವ ಅಂಗವಾಗಿ ಗುರುವಾರ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣೆ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

    ಶಿಬಿರದಲ್ಲಿ ಸಾಂಗ್ಲಿಯ ಡಾ.ಅಮೂಲ ಭೋಜೆ, ಡಾ.ಸ್ವಪ್ನಿಲ್ ಕಾನೇರಿ, ಡಾ.ಪದ್ಮಜಿತ ಪಾಟೀಲ, ಡಾ. ಮನಿಷಾತಾಯಿ ಗುರವ ಅವರು ಆರೋಗ್ಯ ತಪಾಸಣೆ ಮಾಡಿ ಸಲಹೆ ನೀಡಿದರು.

    ನಾಗನಸೂರ್‌ನ ಶ್ರೀಕಂಠ ಶಿವಾಚಾರ್ಯ ಸ್ವಾಮೀಜಿ, ಚಿಕ್ಕಲ್ಕಿಯ ಅಭಿನವ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ, ಮೈಂದೂರು ನೀಲಕಂಠ ಶಿವಾಚಾರ್ಯ ಸ್ವಾಮೀಜಿ, ಉಳ್ಳಾಗಡ್ಡಿ ಖಾನಾಪುರದ ಸಿದ್ಧೇಶ್ವರ ಶಿವಾಚಾರ್ಯ ಸ್ವಾಮೀಜಿ, ಬನಹಟ್ಟಿಯ ಗೌರಿಶಂಕರ ಶಿವಾಚಾರ್ಯ, ಅಂಬಿಕಾ ನಗರದ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು. ಅತಿಥಿಯಾಗಿ ಚಿಕ್ಕೋಡಿ ಜಿಲ್ಲಾ ಅಪರ ವೈದ್ಯಕೀಯ ಅಧಿಕಾರಿ ಡಾ.ಎಸ್.ಎಸ್.ಗಡೆದ, ತಾಲೂಕಾಧಿಕಾರಿ ಡಾ.ಸುರೇಶ ಭಾಗಯಿ, ಡಾ.ಮಹೇಶ ಕುಂಬಾರ, ಶ್ರೀಕಾಂತ ಉಮರಾಣಿ, ಅಡವಯ್ಯ ಅರಳೀಕಟ್ಟಿಮಠ, ನರಸಗೌಡ ಕಮತೆ, ಮಲ್ಲಪ್ಪ ಶಿಂಧೂರು ಇತರರಿದ್ದರು. ಹಿರೇಮಠ ಶಹಾಪುರದ ಸುಗುರೇಶ್ವರ ಶಿವಾಚಾರ್ಯ ಸ್ವಾಮೀಜಿ ನಿರೂಪಿಸಿದರು.

    ಇಂದಿನ ಕಾರ್ಯಕ್ರಮ: ಜಾತ್ರಾ ಅಂಗವಾಗಿ ಫೆ.9ರಂದು ಸಂಜೆ 7ಗಂಟೆಗೆ ಶ್ರೀಶೈಲ ಜಗದ್ಗುರು ಡಾ.ಚೆನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯದಲ್ಲಿ ನಗೆಹಬ್ಬ ಜರುಗಲಿದೆ.

    ಹಾಸ್ಯ ಕಲಾವಿದರಾದ ಗಂಗಾವತಿ ಪ್ರಾಣೇಶ, ನರಶಿಂಹ ಜೋಷಿ ಮತ್ತು ಬಸವರಾಜ ಮಹಾಮನಿ ಇರಲಿದ್ದಾರೆ ಎಂದು ವ್ಯವಸ್ಥಾಪಕ ಅಡವಯ್ಯ ಅರಳಿಕಟ್ಟಿಮಠ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts