More

    ಮಂಗಳೂರಲ್ಲಿ ಧಗಧಗಿಸಿದ ಕೆಮಿಕಲ್​ ಫ್ಯಾಕ್ಟರಿ: ಬೆಂಕಿ ಅವಘಡಕ್ಕೆ ಬೆಚ್ಚಿಬಿದ್ದ ಸ್ಥಳೀಯರು

    ಮಂಗಳೂರು: ಮಂಗಳೂರು ವಿಶೇಷ ಆರ್ಥಿಕ ವಲಯದೊಳಗಿನ ಕೆಮಿಕಲ್‌ ಘಟಕದಲ್ಲಿ ಶನಿವಾರ ಮಧ್ಯಾಹ್ನ ಅಗ್ನಿ ಆಕಸ್ಮಿಕ ಸಂಭವಿಸಿದ್ದು ಇಡೀ ಘಟಕದಿಂದ ಭಾರಿ ಪ್ರಮಾಣದಲ್ಲಿ ಬೆಂಕಿ, ಹೊಗೆ ಹೊರಬರುತ್ತಿದೆ. ಸ್ಫೋಟಕಗಳ ಸದ್ದೂ ಕೇಳಿ ಬರುತ್ತಿದ್ದು, ದೊಡ್ಡ ಪ್ರಮಾಣದಲ್ಲಿ ಹಾನಿ ಸಂಭವಿಸಿರುವ ಸಾಧ್ಯತೆ ಗೋಚರಿಸಿದೆ.

    ಆಂತಿಯಾ ಆರೊಮೆಟಿಕ್ಸ್‌ ಎನ್ನುವ ಮಹಾರಾಷ್ಟ್ರ ಮೂಲದ ಕಂಪನಿಯ ಸಹಸಂಸ್ಥೆಯಾಗಿರುವ ಕೆಟಸಿಂತ್‌ ಕೆಮಿಕಲ್ಸ್‌ ಎನ್ನುವ ಪರ್ಫ್ಯೂಮ್‌ ತಯಾರಿಕಾ ಫ್ಯಾಕ್ಟರಿಯಲ್ಲಿ ಈ ಘಟನೆ ಸಂಭವಿಸಿದೆ.

    ಮಂಗಳೂರಲ್ಲಿ ಧಗಧಗಿಸಿದ ಕೆಮಿಕಲ್​ ಫ್ಯಾಕ್ಟರಿ: ಬೆಂಕಿ ಅವಘಡಕ್ಕೆ ಬೆಚ್ಚಿಬಿದ್ದ ಸ್ಥಳೀಯರುಘಟಕದಲ್ಲಿ ಸ್ಫೋಟದೊಂದಿಗೆ ದಟ್ಟ ಹೊಗೆ, ಬೆಂಕಿ ಕಾಣಿಸಿಕೊಂಡಿದ್ದು ಹಲವು ಅಗ್ನಿಶಾಮಕ ಘಟಕಗಳನ್ನು ಸೇರಿಸಿಕೊಂಡು ಕಾರ್ಯಾಚರಣೆ ನಡೆಸಿದರೂ ಇದುವರೆಗೆ ಬೆಂಕಿ ನಿಯಂತ್ರಿಸಲು ಸಾಧ್ಯವಾಗಿಲ್ಲ.

    ಎಂಎಸ್‌ಇಝಡ್‌ ಆವರಣದ ಒಳಗಿರುವ ಹಲವು ಪೆಟ್ರೋಕೆಮಿಕಲ್ಸ್‌ ಘಟಕಗಳಲ್ಲಿ ಇದೂ ಒಂದು. ಇದುವರೆಗೆ ಯಾವುದೇ ಸಾವು ನೋವು ಸಂಭವಿಸಿಲ್ಲ ಎಂದು ಕಂಪನಿಯ ಮ್ಯಾನೇಜರ್‌ ತಿಳಿಸಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ. ಪರಿಸರದಲ್ಲಿ ರಾಸಾಯನಿಕ ಉರಿಯುವ ಕಟು ವಾಸನೆ ಆವರಿಸಿದೆ. (ಇದು ಸಂಜೆ 4ರ ವರೆಗಿನ ಮಾಹಿತಿ)

    ಕ್ರಿಕೆಟ್​ ಆಟಗಾರ್ತಿ ವೇದಾಕೃಷ್ಣಮೂರ್ತಿ ತಾಯಿ ಕರೊನಾಗೆ ಬಲಿ

    ಇನ್ನಷ್ಟು ದಿನ ಕರ್ಫ್ಯೂ ಮುಂದುವರಿಕೆ! ಲಾಕ್​ಡೌನ್​ ಸುಳಿವು ಕೊಟ್ಟ ಸಚಿವರು

    VIDEO| ಜನರೇ ನನ್ನನ್ನು ಬೆದರಿಸ್ತಾರೆ, ನಾನೇನು ಮಾಡಲಿ… ಮಾಧ್ಯಮಗಳ ಮುಂದೆ ಅಳಲು ತೋಡಿಕೊಂಡ ಶ್ರೀರಾಮುಲು

    ಹುಬ್ಬಳ್ಳಿಯಲ್ಲಿ ನಟಿ ಶನಾಯ ಅರೆಸ್ಟ್: ಹೈಸ್ಕೂಲ್​ ಲವ್​ಗೆ ಅಡ್ಡಿಯಾದ ಸೋದರನ ಸಾವಿನ ಹಿಂದಿದೆ ಬೆಚ್ಚಿಬೀಳಿಸೋ ರಹಸ್ಯ

    a

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts