More

    ಇಂದು ಮುಂಜಾನೆ 3.34ಕ್ಕೆ ಸಂಚಾರಿ ವಿಜಯ್​ ನಿಧನ, ವೈದ್ಯರ ಘೋಷಣೆ

    ಬೆಂಗಳೂರು: ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ರಾಷ್ಟ್ರ ಪ್ರಶಸ್ತಿ ವಿಜೇತ, ಸ್ಯಾಂಡಲ್​ವುಡ್​ ನಟ ಸಂಚಾರಿ ವಿಜಯ್​ ಅವರು ಮಂಗಳವಾರ ಮುಂಜಾನೆ 3.34ಕ್ಕೆ ನಿಧನರಾದರು. ವಿಜಯ್​ರ ನಿಧನಕ್ಕೆ ಇಡೀ ಅಪೊಲೋ ಆಸ್ಪತ್ರೆ ಸಿಬ್ಬಂದಿ ಸಂತಾಪ ಸೂಚಿಸಿದ್ದಾರೆ ಎಂದು ಅಪೊಲೋ ಆಸ್ಪತ್ರೆ ಪ್ರಕಟಣೆಯಲ್ಲಿ ತಿಳಿಸಿದೆ.

    ಜೂ.12ರ ರಾತ್ರಿ​ ಅಪಘಾತಕ್ಕೀಡಾಗಿ ಗಂಭೀರ ಗಾಯಗೊಂಡು ಕೋಮಾಗೆ ತಲುಪಿದ್ದ ವಿಜಯ್​ ಅವರ ಬ್ರೈನ್​ ಡೆತ್​ಗೆ ಆಗಿದೆ ಎಂದು ಸೋಮವಾರ ರಾತ್ರಿ ಆಸ್ಪತ್ರೆ ಅಧಿಕೃತವಾಗಿ ಘೋಷಣೆ ಮಾಡಿತ್ತು. ಅಂಗಾಗ ದಾನ ಪ್ರಕ್ರಿಯೆ ಮುಗಿದ ಬಳಿಕ ಡೆತ್ ಡಿಕ್ಲೆರೇಷನ್ ಮಾಡಲಾಗಿದೆ. ಸಾವಿನಲ್ಲೂ ಸಾರ್ಥಕತೆ ಮರೆದ ವಿಜಯ್​, ಹಲವರಿಗೆ ಜೀವದಾನ ನೀಡುವ ಮೂಲಕ ಅಭಿಮಾನಿಗಳ ಮನಸ್ಸಿಗೆ ಮತ್ತಷ್ಟು ಹತ್ತಿರವಾಗಿದ್ದಾರೆ. ಇಂದು ಬೆಳಗ್ಗೆ 8 ರಿಂದ 10ರ ವರೆಗೆ ರವೀಂದ್ರ ಕಲಾಕ್ಷೇತ್ರದಲ್ಲಿ ಸಂಚಾರಿ ವಿಜಯ್​ರ ಅಂತಿಮ ದರ್ಶನಕ್ಕೆ ಸರ್ಕಾರದ ಕಡೆಯಿಂದಲೇ ವ್ಯವಸ್ಥೆ ಮಾಡಲಾಗಿದೆ. ಇಂದು ಸಂಜೆ ವಿಜಯ್​ರ ಹುಟ್ಟೂರು ಚಿಕ್ಕಮಗಳೂರಿನ ಕಡೂರು ತಾಲೂಕಿನ ಪಂಚನಹಳ್ಳಿಯಲ್ಲಿ ಅಂತ್ಯಕ್ರಿಯೆ ನೆರವೇರಲಿದೆ.

    ಜೂ.12ರ ರಾತ್ರಿ ಸ್ನೇಹಿತರೊಂದಿಗೆ ಬೈಕ್​ನಲ್ಲಿ ಹೋಗುತ್ತಿರುವಾಗ ಜೆಪಿ ನಗರದ 7ನೇ ಹಂತದಲ್ಲಿ ಅಪಘಾತವಾಗಿ ಸಂಚಾರಿ ವಿಜಯ್​ ತಲೆಗೆ ತೀವ್ರ ಪೆಟ್ಟಾಗಿತ್ತು. ಮಿದುಳಿನ ಬಲಭಾಗದಲ್ಲಿ ತೀವ್ರ ಗಾಯವಾಗಿ ರಕ್ತ ಸೋರುತ್ತಿದ್ದ ಹಿನ್ನೆಲೆ ಅವರರಿಗೆ ಬನ್ನೇರುಘಟ್ಟ ರಸ್ತೆಯಲ್ಲಿನ ಅಪೋಲೋ ಆಸ್ಪತ್ರೆಯಲ್ಲಿ ಮಿದುಳಿನ ಶಸ್ತ್ರ ಚಿಕಿತ್ಸೆ ಮಾಡಿ ಐಸಿಯುನಲ್ಲಿ ಇರಿಸಲಾಗಿತ್ತು. ಕೋಮದಲ್ಲಿದ್ದ ವಿಜಯ್​ರ ಬ್ರೈನ್ ಫಂಕ್ಷನ್ ನಿಂತು ಹೋಗಿತ್ತು. ಟ್ರೀಟ್​ಮೆಂಟ್​ಗೆ ಅವರು ಸ್ಪಂದಿಸುತ್ತಿಲ್ಲ ಎಂದು ವೈದ್ಯರು ಹೇಳಿದ್ದರು. ಈ ವಿಚಾರ ತಿಳಿಯುತ್ತಿದ್ದಂತೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಮೊದಲ ಮತ್ತು ಎರಡು ಬಾರಿಯ ಅಪ್ನಿಯಾ ‌ಟೆಸ್ಟ್​ನಲ್ಲೂ ಬ್ರೈನ್‌ ಡೆಡ್‌ ಎಂಬುದು ಗೊತ್ತಾಯಿತು. ನೋವಿನಲ್ಲೂ ವಿಜಯ್​ರ ಅಂಗಾಗ ದಾನ ಮಾಡುವ ಮೂಲಕ ಅವರ ಕುಟುಂಬಸ್ಥರು ಸಾರ್ಥಕತೆ ಮೆರೆದಿದ್ದಾರೆ.

    ಇಂದು ಮುಂಜಾನೆ 3.34ಕ್ಕೆ ಸಂಚಾರಿ ವಿಜಯ್​ ನಿಧನ, ವೈದ್ಯರ ಘೋಷಣೆ

    ‘ರಂಗಪ್ಪ ಹೋಗ್ಬಿಟ್ನಾ’ ಸಿನಿಮಾ ಮೂಲಕ ಸಿನಿರಂಗಕ್ಕೆ ಕಾಲಿಟ್ಟಿದ್ದ ಸಂಚಾರಿ ವಿಜಯ್​, 24ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದರು. ‘ನಾನು ಅವನಲ್ಲ ಅವಳು’ ಚಿತ್ರದ ಮೂಲಕ ಭಾರೀ ಜನಪ್ರಿಯತೆ ಪಡೆದಿದ್ದರು. ಇದೇ ಚಿತ್ರದ ನಟನೆಗಾಗಿ ರಾಷ್ಟ್ರ ಪ್ರಶಸ್ತಿ ಕೂಡ ಒಲಿದಿತ್ತು. ನಟರಾದ ವಾಸುದೇವರಾವ್, ಚಾರುಹಾಸನ್​ ಬಳಿಕ ರಾಷ್ಟ್ರಪ್ರಶಸ್ತಿ ಪಡೆದ ಹೆಮ್ಮೆ ಇವರದ್ದು.

    ಇಂದು ಮುಂಜಾನೆ 3.34ಕ್ಕೆ ಸಂಚಾರಿ ವಿಜಯ್​ ನಿಧನ, ವೈದ್ಯರ ಘೋಷಣೆ

    ಚಿಕ್ಕಮಗಳೂರು ಜಿಲ್ಲೆಯ ಕಡೂರಿನ ಪಂಚಮಹಳ್ಳಿಯಲ್ಲಿ 1983ರ ಜುಲೈ 18ರಂದು ಜನಿಸಿದ್ದ ಸಂಚಾರಿ ವಿಜಯ್, ಬಾಲ್ಯದಲ್ಲೇ ರಂಗಭೂಮಿ ಹಾಗೂ ಚಿತ್ರಕಲೆಯಲ್ಲಿ ತೊಡಗಿಸಿಕೊಂಡಿದ್ದರು. ಬಿಎಂಎಸ್ ಶಿಕ್ಷಣ ಸಂಸ್ಥೆಯಲ್ಲಿ ಇಂಜಿನಿಯರಿಂಗ್ ಪದವಿ ಮುಗಿಸಿ ಕೆಲಕಾಲ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದರು. ಬಳಿಕ ರಂಗಭೂಮಿಯತ್ತ ಕಾಲಿಟ್ಟರು. ‘ಸಂಚಾರಿ’ ನಾಟಕ ತಂಡದಲ್ಲಿ ನಟನಾ ತಾಲೀಮು ಆರಂಭಿಸಿದ್ದ ವಿಜಯ್​, ಸಿನಿರಂಗಕ್ಕೆ ಬಂದ ನಂತರ ಸಂಚಾರಿ ವಿಜಯ್ ಅಂತಲೇ ಜನಪ್ರಿಯತೆ ಗಳಿಸಿದ್ದರು. ಕರ್ನಾಟಕ ಶಾಸ್ತ್ರೀಯ ಹಾಗೂ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತವನ್ನೂ ಕಲಿತಿದ್ದರು. ಇತ್ತೀಚಿಗೆ ‘ಆಟಕ್ಕುಂಟು ಲೆಕ್ಕಕ್ಕಿಲ್ಲ’ ಹಾಗೂ ‘ಮೇಲೊಬ್ಬ ಮಾಯಾವಿ’ ಚಿತ್ರಗಳಲ್ಲೂ ನಟಿಸಿದ್ದಾರೆ.

    ಅಪಘಾತಕ್ಕೂ 2 ದಿನ ಮೊದಲೇ ಸಂಚಾರಿ ವಿಜಯ್​ ಬರೆದಿದ್ದ ಈ ಬರಹ ಓದಿದ್ರೆ ಕಣ್ಣು ತುಂಬಿ ಬರುತ್ತೆ

    ಆಂಬುಲೆನ್ಸ್​-ಸ್ಕೂಟಿ ನಡುವೆ ಭೀಕರ ಅಪಘಾತ, ಸ್ಥಳದಲ್ಲೇ ಮೂವರ ಸಾವು

    ಯಾರಿಗೂ ತಿಳಿಯದಂತೆ ಪ್ರೇಯಸಿಯನ್ನ ಮನೆಯಲ್ಲೇ 10 ವರ್ಷ ಅಡಗಿಸಿಟ್ಟಿದ್ದ ಪ್ರಿಯಕರ! ಆ ಕೋಣೆಯ ರಹಸ್ಯ ಬಯಲಾಗಿದ್ದೇ ರೋಚಕ

    ನನ್ನ ಪತ್ನಿ ಪರಪುರುಷನೊಂದಿಗೆ ಓಡಿಹೋಗಿದ್ದಾಳೆ… ಎಂದವನ ಅಜ್ಜಿ ಹೊಲದಲ್ಲಿ ಅಡಗಿತ್ತು ಭಯಾನಕ ರಹಸ್ಯ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts