More

    ಎಫ್​​ಡಿಎ ನೌಕರಿ ಆಮಿಷವೊಡ್ಡಿ 25 ಲಕ್ಷ ರೂ. ವಂಚನೆ! ದಂಪತಿ ಸೇರಿ ಮೂವರ ವಿರುದ್ಧ ವಿಧಾನಸೌಧ ಠಾಣೆಯಲ್ಲಿ ಎಫ್​ಐಆರ್​

    ಬೆಂಗಳೂರು: ಪಿಎಸ್​ಐ ನೇಮಕಾತಿಯಲ್ಲಿನ ಅಕ್ರಮ ರಾಷ್ಟ್ರಮಟ್ಟದಲ್ಲಿ ಕರ್ನಾಟಕ ಪೊಲೀಸ್​ ಇಲಾಖೆಯ ಮಾನ ಹರಾಜು ಹಾಕಿದೆ. ಇದರ ಬೆನ್ನಲ್ಲೇ ಶಿಕ್ಷಕರ ಹದ್ದೆ ಹಗರಣ ಬಯಲಾಗಿ ರಾಜ್ಯದಲ್ಲಿ ಪ್ರತಿಭಾವಂತರಿಗೆ ಅನ್ಯಾಯ ಆಗುತ್ತಿರುವ ಹಾಗೂ ಭ್ರಷ್ಟ ವ್ಯವಸ್ಥೆ ಬಗ್ಗೆ ಆಕ್ರೋಶ ವ್ಯಕ್ತವಾಗಿದೆ. ಇದೀಗ ಪ್ರಥಮ ದರ್ಜೆ ಸಹಾಯಕ (ಎಫ್​ಡಿಎ) ನೌಕರಿ ಕೊಡಿಸುವ ಆಮಿಷವೊಡ್ಡಿ ವ್ಯಕ್ತಿಯೊಬ್ಬರಿಂದ 25 ಲಕ್ಷ ರೂ. ಪಡೆದು ದಂಪತಿ ಸೇರಿ ಮೂವರು ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.

    ವಿಜಯಪುರ ಮೂಲದ ಪಂಡಿತ್​ ಪರಮಾನಂದ ಚೌದ್ರಿ (35) ವಂಚನೆಗೆ ಒಳಗಾದವರು. ಇವರು ಕೊಟ್ಟ ದೂರಿನ ಮೇರೆಗೆ ಮಾಗಡಿ ರಸ್ತೆ ಬ್ಯಾಡರಹಳ್ಳಿ ನಿವಾಸಿಗಳಾದ ಚಂದ್ರಕಲಾ ಬಾಯಿ, ಆಕೆಯ ಪತಿ ಗಂಗಾಧರ್​ ನಾಯಕ್​ ಮತ್ತು ಕಲಬುರಗಿ ಮೂಲದ ಶಶಿಕಾಂತ್​ ಗಾನಟೆ ವಿರುದ್ಧ ವಿಧಾನಸೌಧ ಪೊಲೀಸ್​ ಠಾಣೆಯಲ್ಲಿ ಎಫ್​ಐಆರ್​ ದಾಖಲು ದಾಖಲಾಗಿದೆ.

    ದೂರುದಾರ ಪಂಡಿತ್​ ಪರಮಾನಂದ ಚೌದ್ರಿಗೆ ಸ್ನೇಹಿತ ನಾಗಪ್ಪ ಎಂಬಾತನ ಮೂಲಕ ಆರೋಪಿಗಳಾದ ಚಂದ್ರಕಲಾ ಬಾಯಿ, ಗಂಗಾಧರ್​ ನಾಯಕ್​ ಮತ್ತು ಶಶಿಕಾಂತ್​ ಗನಾಟೆ ಪರಿಚಯ ಆಗಿದೆ. ಸರ್ಕಾರದ ಯಾವುದಾದರು ಇಲಾಖೆಯಲ್ಲಿ ಎಫ್​ಡಿಎ ಕೆಲಸ ಕೊಡಿಸುವುದಾಗಿ ದೂರುದಾರನಿಗೆ ನಂಬಿಸಿದ್ದಾರೆ. ಆನಂತರ 2014 ರಿಂದ 2022ರ ವರೆಗೆ ಹಂತ ಹಂತವಾಗಿ ಪಂಡಿತ್​ ಅವರಿಂದ 25 ಲಕ್ಷ ರೂಪಾಯಿಯನ್ನು ಆರೋಪಿಗಳು ಪಡೆದುಕೊಂಡಿದ್ದಾರೆ.

    ಆದರೆ, ವರ್ಷಗಳೇ ಕಳೆದರೂ ಕೆಲಸ ಕೊಡಿಸಿಲ್ಲ. ಹಣ ವಾಪಸ್​ ನೀಡುವಂತೆ ಪಂಡಿತ್​ ಕೇಳಿದ್ದಾರೆ. 2015ರಲ್ಲಿ ಸಮಾಜ ಕಲ್ಯಾಣ ಇಲಾಖೆ ಎಫ್​ಡಿಎ ಹುದ್ದೆಗೆ ನೇಮಕ ಮಾಡಿರುವ ಆದೇಶ ಪತ್ರವನ್ನು ಪಂಡಿತ್​ ಮನೆಗೆ ಕಳುಹಿಸಿದ್ದಾರೆ.

    ಪಂಡಿತ್​ ಆ ನೇಮಕಾತಿ ಪತ್ರ ಹಿಡಿದು ಸಂಬಂಧಪಟ್ಟ ಇಲಾಖೆಗೆ ತೆರಳಿ ವಿಚಾರಿಸಿದಾಗ, ನಕಲಿ ಆದೇಶ ಪತ್ರ ಎಂಬುದು ಗೊತ್ತಾಗಿದೆ. ಹಣ ವಾಪಸ್​ ನೀಡುವಂತೆ ಪಂಡಿತ್​ ಆರೋಪಿಗಳನ್ನು ಕೇಳಿದಾಗ ಸಬೂಬು ಹೇಳಿ ಕಾಲ ದೂಡಿದ್ದಾರೆ. ಕೆಲಸವೂ ಇಲ್ಲದೆ ಹಣವೂ ಇಲ್ಲದೆ ನೊಂದ ಅಭ್ಯರ್ಥಿ ಇದೀಗ ಪೊಲೀಸ್​ ಠಾಣೆ ಮೆಟ್ಟಿಲೇರಿದ್ದಾರೆ.

    ಕೈ ಅಧ್ಯಕ್ಷ ಸ್ಥಾನಕ್ಕೆ ಇಂದು ಮತದಾನ; ಬುಧವಾರ ಪ್ರಕಟವಾಗಲಿದೆ ಫಲಿತಾಂಶ

    ರಾಜ್ಯದಲ್ಲಿ ಬೆರಕೆ ಸರ್ಕಾರ ಬರೋದು ಗ್ಯಾರಂಟಿ.. ದೇಶಕ್ಕೆ ಕೇಡು ಖಚಿತ… ಹಾಸನಾಂಬೆ ಸನ್ನಿಧಿಯಲ್ಲಿ ಬ್ರಹ್ಮಾಂಡ ಗುರೂಜಿ ಭವಿಷ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts