More

    ಜನಸ್ಪಂದನ ವೇದಿಕೆಯಲ್ಲಿ ಕಾಂಗ್ರೆಸ್​ಗೆ ತಾಕತ್ತಿನ ಸವಾಲು ಹಾಕಿದ ಸಿಎಂ ಬೊಮ್ಮಾಯಿ!

    ಬೆಂಗಳೂರು: ಕಾಂಗ್ರೆಸ್​ನ ಅಧಿಕಾರದ ಕನಸು ಎಂದಿಗೂ ನನಸಾಗದು. ಕಾಂಗ್ರೆಸ್​ದ್ದು 100% ಕಮಿಷನ್​ ಸರ್ಕಾರ. ಅನ್ನಭಾಗ್ಯ ಚೀಲ ನಿಮ್ಮದು, ಅಕ್ಕಿ ಮೋದಿ ಅವರದ್ದು. ಮುಂದಿನ ಬಾರಿಯೂ ನಾವೇ ಅಧಿಕಾರಕ್ಕೆ ಬರ್ತೀವಿ. ಧಮ್ ಇದ್ರೆ ತಡೀರಿ… ಎಂದು ಕಾಂಗ್ರೆಸ್​ ವಿರುದ್ಧ ಸಿಎಂ ಬಸವರಾಜ ಬೊಮ್ಮಾಯಿ ಕಿಡಿಕಾರಿದ್ದಾರೆ.

    ದೊಡ್ಡಬಳ್ಳಾಪುರದಲ್ಲಿ ಜನಸ್ಪಂದನ ಸಮಾವೇಶದಲ್ಲಿ ಮಾತನಾಡಿದ ಸಿಎಂ, ನ್ಯಾಯ ಸಮ್ಮತವಾಗಿ ಯಡಿಯೂರಪ್ಪ ಅವರು ಅವತ್ತೇ ಸಿಎಂ ಆಗಬೇಕಿತ್ತು. ಕಾಂಗ್ರೆಸ್​ನವರು ಕುಟಿಲತೆಯಿಂದ ಜೆಡಿಎಸ್ ಜತೆ ಸೇರಿ ಸಮ್ಮಿಶ್ರ ಸರ್ಕಾರ ಮಾಡಿದ್ರು. ಸಿದ್ದರಾಮಯ್ಯ ಹೇಳೋದು ನಿಜವಾಗಲ್ಲ. ಸಿದ್ದರಾಮಯ್ಯಗೆ ರಾಜಕೀಯ ನೈತಿಕತೆ ಇಲ್ಲ. ಸಮ್ಮಿಶ್ರ ಸರ್ಕಾರ ತೊರೆದು ನಮ್ಮ ಪಕ್ಷಕ್ಕೆ ಬಂದವರು 17 ಜನ ವೀರರು. ರಮೇಶ್ ಜಾರಕಿಹೊಳಿ ಸಮೇತ ಎಲ್ಲರೂ ವೀರರು. ರಾಜೀನಾಮೆ ಕೊಟ್ಟು ಮತ್ತೆ ಚುನಾವಣೆಗೆ ಸ್ಪರ್ಧಿಸಿ ಗೆದ್ರು. ಕೋವಿಡ್ ವೇಳೆ ಕಾಂಗ್ರೆಸ್ ಸರ್ಕಾರ ಇದ್ದಿದ್ರೆ ಜನರನ್ನು ನರಕಕ್ಕೆ ತಳ್ತಿದ್ರು. ಕಾಂಗ್ರೆಸ್​ನವರದ್ದು ಕೇವಲ ನಾಟಕ ಎಂದು ಕಿಡಿಕಾರಿದರು.

    ಕಾಂಗ್ರೆಸ್‌ನವರಿಗೆ ಒಂದು ಮಾತನ್ನ ಹೇಳ್ತೀನಿ. ನಿಮ್ಮ ಇಚ್ಛೆ ಈಡೇರೋಲ್ಲ. ಇಂದು ದೊಡ್ಡಬಳ್ಳಾಪುರದಿಂದ ಆರಂಭವಾದ ಜನಸ್ಪಂದನ ಕಾರ್ಯಕ್ರಮ, ರಾಜ್ಯದ ವಿವಿಧೆಡೆ ಸಾಗಿ ರಾಜ್ಯದಲ್ಲಿ ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ಬರಲಿದೆ. ತಾಕತ್ ಇದ್ರೆ, ನಿಮಗೆ ಧಮ್ ಇದ್ರೆ ನಿಲ್ಲಿಸುವ ಕೆಲಸ ಮಾಡಿ. ಧಮ್ ಇದ್ರೆ ನಿಲ್ಲಿಸಿ ನೋಡೋಣ ಎಂದು ಕಾಂಗ್ರೆಸ್​ಗೆ ಸಿಎಂ ಸವಾಲು ಹಾಕಿದರು. ಇನ್ನು ಸ್ವಲ್ಪ ಸಮಯದಲ್ಲೇ ನಿಮ್ಮ ಎಲ್ಲ ಹಗರಣವೂ ಬಯಲಿಗೆ ಬರಲಿದೆ. ಜನರ ಮುಂದೆ ನಿಮ್ಮ ಬಣ್ಣ ಬಯಲಾಗಲಿದೆ. ಜನ ಛೀ.. ಥೂ.. ಎಂದು ನಿಮ್ಮನ್ನು ಬಯ್ಯುತ್ತಾರೆ ಎಂದು ಕಾಂಗ್ರೆಸ್‌ ವಿರುದ್ಧ ಸಿಎಂ ತೀವ್ರ ವಾಗ್ದಾಳಿ ನಡೆಸಿದರು.

    ಕೋವಿಡ್ ಸಂಕಷ್ಟ ಕಾಲವನ್ನು ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ, ರಾಜ್ಯದಲ್ಲಿ ಯಡಿಯೂರಪ್ಪನವರು ಸಮರ್ಥವಾಗಿ ಎದುರಿಸಿದ್ರು. ಕಾಂಗ್ರೆಸ್​ ಸರ್ಕಾರ ಇದ್ದಿದ್ರೆ ರಾಜ್ಯದ ಜನ ಅತಂತ್ರರಾಗುತ್ತಿದ್ರು. ಕಾಂಗ್ರೆಸ್​ನದ್ದು ಶೇ.100 ಕಮಿಷನ್ ಸರ್ಕಾರ. ಯೋಜನೆ ಜಾರಿಗೆ ಬರದೆ ಕಮಿಷನ್ ಹೊಡೆದ ಸರ್ಕಾರ ನಿಮ್ಮದು ಎಂದು ಸಿದ್ದರಾಮಯ್ಯ ವಿರುದ್ಧ ಸಿಎಂ ಗಂಭೀರ ಆರೋಪ ಮಾಡಿದರು.

    ಜನಸ್ಪಂದನ ವೇದಿಕೆಯಲ್ಲಿ ‘ಕುಲದಲ್ಲಿ ಕೀಳ್ಯಾವುದೋ..’ ಹಾಡಿಗೆ ಮಸ್ತ್​ ಡಾನ್ಸ್​ ಮಾಡಿ ಸಭಿಕರನ್ನು ರಂಜಿಸಿದ ಎಂಟಿಬಿ ನಾಗರಾಜ್!

    ಶಕ್ತಿಧಾಮಕ್ಕೆ ನಟ ವಿಶಾಲ್​ ಭೇಟಿ: ಪ್ರತಿ ಮಕ್ಕಳಲ್ಲೂ ಒಂದೊಂದು ದೇವರನ್ನ ನೋಡಿದೆ…

    ದಸರಾ ಜಂಬೂಸವಾರಿ ಆನೆಗಳ ತೂಕ ಪರೀಕ್ಷೆ: ತೂಕದಲ್ಲಿ ಅರ್ಜುನನೇ ಮೊದಲಿಗ, ಭಾರ ಹೆಚ್ಚಿಸಿಕೊಂಡ ಭೀಮ

    ಬೆಂಗ್ಳೂರಲ್ಲಿ 14 ವರ್ಷದ ಬಾಲಕಿಯನ್ನ ಮದ್ವೆಯಾದ 45 ವರ್ಷದ ಅಂಕಲ್​! ಮದ್ವೆಯಾದ 3 ದಿನದಲ್ಲೇ ಆಯ್ತು ತಕ್ಕಶಾಸ್ತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts