More

    ವೈದ್ಯರ ಎಡವಟ್ಟು: ಜ್ವರ, ಕೆಮ್ಮು, ನೆಗಡಿಯಿಂದ ಬಳಲುತ್ತಿದ್ದ ಯುವಕನಿಗೆ ಕಾಲು ಕತ್ತರಿಸುವ ಹಂತಕ್ಕೆ ಸೋಂಕು

    ಬೆಂಗಳೂರು: ಜ್ವರ, ನೆಗಡಿ, ಕೆಮ್ಮಿನಿಂದ ಬಳಲುತ್ತಿದ್ದ 18 ವರ್ಷದ ಯುವಕನೊಬ್ಬನಿಗೆ ಎಲೆಕ್ಟ್ರಾನಿಸಿಟಿಯಲ್ಲಿ ವೈದ್ಯರು ಕೊಟ್ಟ ಇಂಜೆಕ್ಷನ್​ನಿಂದ ಕಾಲನ್ನೇ ಕತ್ತರಿಸುವ ಹಂತಕ್ಕೆ ಸೋಂಕು ತಗುಲಿದೆ!

    ಎಲೆಕ್ಟ್ರಾನಿಕ್​ಸಿಟಿ ಬಿಜಿ ರಸ್ತೆಯ ಶಶಿಕಲಾ ಅವರ ಮಗ ಅಭಿ ಎಂಬಾತನ ಕಾಲಿಗೆ ಸೋಂಕು ತಗುಲಿದೆ. ತಾಯಿ ಶಶಿಕಲಾ ಕೊಟ್ಟ ದೂರಿನ ಆಧಾರದ ಮೇಲೆ ವೈದ್ಯರಾದ ಡಾ.ಅಶೋಕ್​ ಮತ್ತು ಕ್ಲಿನಿಕ್​ ಮಾಲೀಕ ಆರೋಗ್ಯಸ್ವಾಮಿ ವಿರುದ್ಧ ಎಲೆಕ್ಟ್ರಾನಿಕ್​ ಸಿಟಿ ಪೊಲೀಸರು ಎಫ್​​ಐಆರ್​ ದಾಖಲಿಸಿಕೊಂಡಿದ್ದಾರೆ. ಅಷ್ಟಕ್ಕೂ ಏನಾಯ್ತು ಅಭಿಗೆ? ಇಲ್ಲಿದೆ ತಾಯಿ ಕೊಟ್ಟ ದೂರಿನ ವಿವರ.

    ಶಶಿಕಲಾ ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಇವರ ಮಗ ಅಭಿ (18) ನೆಗಡಿ, ಕೆಮ್ಮು, ಜ್ವರದಿಂದ ಬಳಲುತ್ತಿದ್ದ ಹಿನ್ನೆಲೆಯಲ್ಲಿ ಜ.6ರಂದು ಚಿಕಿತ್ಸೆ ಕೊಡಿಸಲೆಂದು ಬೇಗೂರಿನ ಮೈಲಸಂದ್ರದಲ್ಲಿರುವ ಕ್ಲಿನಿಕ್​ಗೆ ಕರೆದುಕೊಂಡು ಹೋಗಿದ್ದರು. ಅಲ್ಲಿ ಡಾ.ಅಶೋಕ್​ ಅವರು ಅಭಿಗೆ ಇಂಜೆಕ್ಷನ್​ ನೀಡಿದ್ದರು. ಇದಾದ ಬಳಿಕ ಅಭಿ ಕಾಲಿನಲ್ಲಿ ಊತ ಕಾಣಿಸಿಕೊಂಡಿತ್ತು. ಇಂಜೆಕ್ಷನ್​ ನೀಡಿದ ಜಾಗದಿಂದ ಇಡೀ ಕಾಲಿಗೆ ಸೋಂಕು ಹರಡಿ ಇನ್​ಫೆಕ್ಷನ್​ ಆಗಿದೆ.

    ಹೀಗಾಗಿ ತಾವು ಮಾಡಿದ ತಪ್ಪನ್ನು ಸರಿಪಡಿಸಿಕೊಳ್ಳಲು ನಾವೆ ಸೋಂಕಿಗೆ ಚಿಕಿತ್ಸೆ ನೀಡುವುದಾಗಿ ಕ್ಲಿನಿಕ್​ ಮಾಲೀಕ ಆರೋಗ್ಯಸ್ವಾಮಿ ಹೇಳಿದ್ದರು. ನಂತರ ಜಿಗಣಿಯ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನೂ ಕೊಡಿಸಿದ್ದರು. ಇದೀಗ ತಮ್ಮಿಂದ ಚಿಕಿತ್ಸೆ ಕೊಡಿಸಲು ಆಗಲ್ಲ ಎಂದು ಕ್ಲಿನಿಕ್​ನವರು ತಗಾದೆ ತೆಗೆದಿದ್ದಾರೆ. ಸದ್ಯ ಕಾಲು ಕತ್ತರಿಸುವ ಹಂತಕ್ಕೆ ಸೋಂಕು ಹರಡಿಕೊಂಡಿದೆ. ವೈದ್ಯರ ಎಡವಟ್ಟಿನಿಂದ ಅಭಿ ತನ್ನ ಕಾಲನ್ನೇ ಕಳೆದುಕೊಳ್ಳುವ ಪರಿಸ್ಥಿತಿಗೆ ಬಂದಿದ್ದಾನೆ ಎಂದು ಅಳಲುತೋಡಿಕೊಂಡ ಅಭಿ ತಾಯಿ ಶಶಿಕಲಾ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ನ್ಯಾಯಕ್ಕಾಗಿ ಪೊಲೀಸ್​ ಠಾಣೆ ಮೆಟ್ಟಿಲೇರಿದ್ದಾರೆ.

    ವೈದ್ಯರು ಮಾಡಿದ ತಪ್ಪಿನಿಂದಲೇ ಯುವಕನ ಕಾಲಿಗೆ ಇನ್​ಫೆಕ್ಷನ್​ ಆಗಿದೆಯೇ? ಅಥವಾ ಬೇರೆ ಏನಾದರೂ ಕಾರಣ ಇದಬಹುದೇ? ಎಂಬ ಬಗ್ಗೆ ತಜ್ಞ ವೈದ್ಯರ ಸಲಹೆ ಪಡೆದು ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

    ದೇವರು ನನ್ನ ಬ್ರಾ ಸೈಜ್​​ ತೆಗೆದುಕೊಳ್ಳುತ್ತಿದ್ದಾರೆ ಎಂದ ನಟಿ ಶ್ವೇತಾ ತಿವಾರಿ! ವಿಡಿಯೋ ವೈರಲ್​, ಜಾಲತಾಣದಲ್ಲೇ ತರಾಟೆ

    ಶಾಲೆಯಲ್ಲೇ ವಿದ್ಯಾರ್ಥಿನಿ ಜತೆ ಮುಖ್ಯಶಿಕ್ಷಕ ರೊಮಾನ್ಸ್​! ತಬ್ಬಿಕೊಂಡು ಮುತ್ತಿಡುತ್ತಿರುವ ವಿಡಿಯೋ ವೈರಲ್​, ಎಚ್​.ಡಿ.ಕೋಟೆಯಲ್ಲಿ ಘಟನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts