More

    ಸಂಸ್ಕಾರಯುತ ಶಿಕ್ಷಣ ಅತ್ಯವಶ್ಯ

    ವಿಜಯಪುರ: ಶಿಕ್ಷಣದಿಂದಲೇ ಸಮಾಜ ಸಂಸ್ಕಾರಯುತ ಮಾಡಲು ಸಾಧ್ಯ. ಮಕ್ಕಳಿಗೆ ಬಾಲ್ಯದಲ್ಲಿ ನೀಡುವ ಗುಣಮಟ್ಟದ ಶಿಕ್ಷಣ ಅವರ ನಾಳಿನ ಸುಂದರ ಭವಿಷ್ಯವನ್ನು ನಿರ್ಧರಿಸುತ್ತದೆ. ಆ ನಿಟ್ಟಿನಲ್ಲಿ ಪಾಲಕರು ತಮ್ಮ ಮಕ್ಕಳಿಗೆ ಆರಂಭಿಕ ಹಂತದಲ್ಲೇ ಸಂಸ್ಕಾರಯುತ ಶಿಕ್ಷಣ ನೀಡಿ ಭವಿಷ್ಯದ ಭಾರತವನ್ನು ಭದ್ರಗೊಳಿಸಬೇಕೆಂದು ಭಾರತ ಯುವ ವೇದಿಕೆ ಚಾರಿಟೇಬಲ್​ ಫೌಂಡೇಶನ್​ ಅಧ್ಯಕ್ಷ ಸುನೀಲ್​ ಜೈನಾಪುರ ಹೇಳಿದರು.

    ನಗರದ ಆಲಕುಂಟೆ ಬಡಾವಣೆಯ ಪಿನ್ಯಾಕಲ್​ ಕರಿಯರ್​ ಬಿಲ್ಡರ್ಸ್​ನಲ್ಲಿ ಸೋಮವಾರ ನಡೆದ ಬೇಸಿಗೆ ಶಿಬಿರದ ಮುಕ್ತಾಯ, ನೂತನ ಪೂರ್ವ ಪ್ರಾಥಮಿಕ ಶಾಲೆಯ ಉದ್ಘಾಟನೆ ಮತ್ತು ಎಸ್​ಎಸ್​ಎಲ್​ಸಿಯಲ್ಲಿ ರ್ಯಾಂಕ್​ ಪಡೆದ ವಿದ್ಯಾರ್ಥಿಗಳಿಗೆ ನಡೆದ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.

    ಶಿಕ್ಷಕ ಸಾಹಿತಿ ಶಿವಶರಣಪ್ಪ ಶಿರೋರ ಮಾತನಾಡಿ, ಮಕ್ಕಳನ್ನು ಶೈಕ್ಷಣಿಕವಾಗಿ ಅಷ್ಟೇ ಅಲ್ಲದೇ ದೇಶಪ್ರೇಮಿಗಳಾಗಿ ಬೆಳೆಸಬೇಕು. ಸದೃಢ ಭಾರತ ನಿರ್ಮಾಣದ ಸದುದ್ದೇಶದಿಂದ ವಿದ್ಯಾರ್ಥಿಗಳನ್ನು ಶೈಕ್ಷಣಿಕವಾಗಿ ಅಣಿಗೊಳಿಸಬೇಕು. ನಮ್ಮ ಭಾರತೀಯ ಸಂಸತಿ, ಆಚಾರ&ವಿಚಾರ ತಿಳಿಸುವ ಮೂಲಕ ಮಕ್ಕಳನ್ನು ಅತ್ಯುತ್ತಮ ನಾಗರಿಕರಾಗಿ ರೂಪಿಸಬೇಕೆಂದು ಹೇಳಿದರು.

    ಡಿಸಿಸಿ ಬ್ಯಾಂಕಿನ ನೌಕರ ರಾಜು ರಾಠೋಡ್​, ಆರ್​ಎಸ್​ಎಸ್​ ಪ್ರಮುಖ ಸಿದ್ದು ಕಲರಗಿ ಪ್ರಾಸ್ತಾವಿಕವಾಗಿ ಮಾತನಾಡಿದರು.

    ಶಿವಕುಮಾರ ನೇಕಾರ, ಕಾಂತೇಶ ದಾಶ್ಯಳ, ದೇವಿಂದ್ರ ರಾಠೋಡ, ಮಹೇಶಕುಮಾರ ಪತ್ತಾರ, ವಿಠಲ ಅಲಕುಂಟೆ, ಅಕ್ಷಯ ಹಿರೇಮಠ, ಬಾಪೂರಾಯ ಮೇಡೆಗಾರ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts