More

    ಸಂಸ್ಕಾರಹೀನರಿಂದ ಅಂತ್ಯಸಂಸ್ಕಾರ ಮೃತರಿಗೆ ಅಪಚಾರ: ಒಂಬತ್ತು ಶವಗಳನ್ನು ಒಂದೇ ಗುಂಡಿಗೆ ಎಸೆದ ಸಿಬ್ಬಂದಿ

    ಬಳ್ಳಾರಿ: ಜಿಲ್ಲೆಯಲ್ಲಿ ಕರೊನಾದಿಂದ ಮೃತ ಪಡುವವರನ್ನು ಪ್ರಾಣಿಗಿಂತ ಕಡೆಯಾಗಿ ನೋಡಲಾಗುತ್ತಿದ್ದು, ಕನಿಷ್ಠ ಗೌರವಯುತ ವಿದಾಯವೂ ಸಿಗದಂತಹ ಪರಿಸ್ಥಿತಿ ನಿರ್ಮಾಣ ವಾಗಿದೆ. ಮನುಷ್ಯ ಯಾವುದೇ ಕಾರಣದಿಂದ ಮೃತಪಟ್ಟರೂ ಗೌರವಯುತವಾಗಿ ಅಂತಿಮ ವಿದಾಯ ನೀಡುವುದು ಭಾರತೀಯ ಸಂಪ್ರದಾಯ, ಆಯಾ ಪ್ರದೇಶ ಹಾಗೂ ಸಮುದಾಯದ ಸಂಪ್ರದಾಯಗಳಿಗೆ ಅನು ಗುಣವಾಗಿ ಶವ ಸಂಸ್ಕಾರ ಮಾಡಲಾಗುತ್ತದೆ. ಶತ್ರು ದೇಶದ ಸೈನಿಕರಿಗೂ ಅವರ ಸಂಪ್ರದಾಯದಂತೆ ಅಂತ್ಯಕ್ರಿಯೆ ನಡೆಸುವ ಪರಿಪಾಠ ಪಾಲಿಸಿಕೊಂಡು ಬಂದಿರುವುದು ಭಾರತದ ಹೆಗ್ಗಳಿಕೆಯಾಗಿದೆ, ಆದರೆ, ಕರೊನಾ ಪೀಡಿತರಾಗಿ ಮೃತಪಡುತ್ತಿರುವವರಿಗೆ ಶತ್ರು

    ದೇಶದ ಸೈನಿಕರಿಗೆ ಸಿಗುವ ಗೌರವವೂ ಸಿಗುತ್ತಿಲ್ಲ. ಮನುಷ್ಯತ್ವವೂ ಇಲ್ಲದಂತೆ ನಗರದಲ್ಲಿ ಸೋಂಕಿನಿಂದ ಮೃತಪಟ್ಟವರ ಅಂತ್ಯಕ್ರಿಯೆ ನಡೆಸಲಾಗುತ್ತಿದೆ. ಕರೊನಾ ಸಾಂಕ್ರಾಮಿಕವಾಗಿ ವ್ಯಾಪಿಸುವ ಆತಂಕದಿಂದ ಸಂಬಂಧಿಕರನ್ನು ಕೂಡ ದೂರ ವಿಶೇಷ ಮುನ್ನೆಚ್ಚರಿಕೆ ವಹಿಸಿ ಮೃತಪಟ್ಟವರ ಅಂತ್ಯಕ್ರಿಯೆ ನಡೆಸಲಾಗುತ್ತಿದೆ. ಜಿಲ್ಲೆಯಲ್ಲಿ ಸಾವಿನ ಸಂಖ್ಯೆ ಕಡಿಮೆ ಇದ್ದಾಗ ಎಲ್ಲವೂ ನಿಯಮಗಳಂತೆ ಸುಸೂತ್ರವಾಗಿ ನಡೆದಿತ್ತು. ಸಾವಿನ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಶವ ಸಂಸ್ಕಾರ ಮಾಡಬೇಕಾದವರು ಮನುಷ್ಯತ್ವ ಮರೆತವರಂತೆ ವರ್ತಿಸುತ್ತಿದ್ದಾರೆ. ಸೋಮವಾರ ಒಂದೇ ದಿನ ಕರೊನಾ ಸೋಂಕಿತ ಒಂಬತ್ತು ಜನರು ಮೃತಪಟ್ಟಿದ್ದರು. ನಗರದ ಗುಗ್ಗರಹಟ್ಟಿ ಬಳಿ ಇರುವ ಸ್ಮಶಾನದಲ್ಲಿ ಎಲ್ಲ ಒಂಬತ್ತು ಜನರ ಅಂತ್ಯಕ್ರಿಯೆ ನಡೆಸಲಾಗಿದೆ. ಒಂಬತ್ತು ಜನರಿಗೆ ಪ್ರತ್ಯೇಕ ಗುಂಡಿ ಅಗೆದು ಗೌರವಯುತವಾಗಿ ಅಂತ್ಯಕ್ರಿಯೆ ಮಾಡಬೇಕಿತ್ತು. ಆದರೆ, ಒಂದೇ ಗುಂಡಿಯಲ್ಲಿ ಎಲ್ಲ ಮೃತದೇಹಗಳನ್ನು ಪ್ರಾಣಿಗಳನ್ನು ಎಸೆಯುವಂತೆ ಎಸೆಯಲಾಗಿದೆ. ನಿಗದಿತ ಸಂಖ್ಯೆಯ ಗುಂಡಿಗಳನ್ನು ಅಗೆದು ಸೂಕ್ತ ರೀತಿಯಲ್ಲಿ ಶವ ಸಂಸ್ಕಾರ ನಡೆಸದಿರುವುದಕ್ಕೆ ಯಾರು ಹೊಣೆ ಎಂಬುದು ಪ್ರಶ್ನೆಯಾಗಿದೆ. ಈ ಕುರಿತ ವಿಡಿಯೋ ವೈರಲ್ ಆಗಿದೆ. ಮನುಷ್ಯತ್ವ ಮರೆತು ಅಂತ್ಯಕ್ರಿಯೆ ನಡೆಸಿದವರ ಬಗ್ಗೆ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ.

    ಮುಖ್ಯಮಂತ್ರಿ ವಿಷಾದ

    ಬಳ್ಳಾರಿ ಜಿಲ್ಲೆಯಲ್ಲಿ ಸೋಂಕಿನಿಂದ ಮೃತರಾದವರ ಅಂತ್ಯಸಂಸ್ಕಾರದ ಸಂದರ್ಭದಲ್ಲಿ ಸಿಬ್ಬಂದಿ ನಡವಳಿಕೆ ಅತ್ಯಂತ ಅವಮಾನವೀಯ ಎಂದು ಸಿಎಂ ಯಡಿಯೂರಪ್ಪ ವಿಷಾದ ವ್ಯಕ್ತಪಡಿಸಿದ್ದಾರೆ. ಸೋಂಕಿತರೊಂದಿಗೆ ಮಾನವೀಯತೆಯಿಂದ ವರ್ತಿಸಿ, ಮೃತರ ಅಂತ್ಯ ಸಂಸ್ಕಾರವನ್ನು ಗೌರವದಿಂದ ನೆರವೇರಿಸಿ ಎಂದು ಕೋವಿಡ್ ನಿರ್ವ ಹಣೆಗೆ ಸಂಬಂಧಿಸಿದಂತೆ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗೆ ವಿನಂತಿಸಿದ್ದಾರೆ.

    ಕೆಳ ಹಂತದ ಸಿಬ್ಬಂದಿ ಅಗೌರವದಿಂದ ಅಂತ್ಯಕ್ರಿಯೆ ನಡೆಸಿದ್ದಕ್ಕೆ ಜಿಲ್ಲಾಡಳಿತದಿಂದ ಮೃತರ ಕುಟುಂಬದವರ ಕ್ಷಮೆ ಕೋರಲಾಗುವುದು. ಮೃತರೊಂದಿಗೆ ನಡೆದುಕೊಂಡಿರುವ ರೀತಿ ದುಃಖಕರವಾಗಿದ್ದು, ನಮಗೂ ಬೇಸರವಾಗಿದೆ. ಅಂತ್ಯಕ್ರಿಯೆ ನಡೆಸಿರುವ ಸಿಬ್ಬಂದಿಯನ್ನು ಕೈಬಿಟ್ಟು ವಿಮ್್ಸ ಫೊರೆನ್ಸಿಕ್ ವಿಭಾಗದ ಮುಖ್ಯಸ್ಥರ ನೇತೃತ್ವದಲ್ಲಿ ತರಬೇತಿ ಪಡೆದ ಹೊಸ ತಂಡ ನಿಯೋಜಿಸಲಾಗುವುದು.
    | ಎಸ್.ಎಸ್.ನಕುಲ್ ಡಿಸಿ, ಬಳ್ಳಾರಿ

    ವಿಮ್್ಸ ಅವಾಂತರದಿಂದ ಸರಣಿ ಸಾವು?

    ಬಳ್ಳಾರಿ: ಕರೊನಾ ನಿಯಂತ್ರಣ ಸಂಬಂಧ ರಾಜ್ಯದಲ್ಲಿ ದಿ ಬೆಸ್ಟ್ ಆಗಿದ್ದ ಬಳ್ಳಾರಿ ಜಿಲ್ಲೆಯಲ್ಲಿ ಎಲ್ಲವೂ ತಿರುವು ಮುರುವಾಗಿದೆ. ಕೇವಲ ಮೂರು ದಿನಗಳ ಅಂತರದಲ್ಲಿ ಜಿಲ್ಲೆಯಲ್ಲಿ 19 ಜನ ಬಲಿಯಾಗಿದ್ದು, ಸೋಂಕಿತರ ಸರಣಿ ಸಾವಿಗೆ ಜಿಲ್ಲೆ ಜನ ಬೆಚ್ಚಿಬಿದ್ದಿದ್ದಾರೆ. ಸೋಂಕು ಪತ್ತೆಯಾಗುವ ಮುನ್ನವೇ ರೋಗಿಗಳು ಸಾವಿನ ಮನೆಯ ಕದ ತಟ್ಟುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ರಾಜ್ಯದಲ್ಲಿ ಬೆಂಗಳೂರು ಬಳಿಕ ಬಳ್ಳಾರಿಯಲ್ಲೇ ಹೆಚ್ಚು ಸಾವು ಸಂಭವಿಸಿವೆ. ಈವರೆಗೆ ಒಟ್ಟಾರೆ 29 ಜನ ಮೃತಪಟ್ಟಿದ್ದಾರೆ. ಬೆಂಗಳೂರಿನಲ್ಲಿ ಬಳ್ಳಾರಿಗಿಂತ ಆರು ಪಟ್ಟು ಹೆಚ್ಚು ಕರೊನಾ ಸೋಂಕಿತರಿದ್ದಾರೆ. ಇದರಿಂದಾಗಿ ಬೆಂಗಳೂರಿನಲ್ಲಿ ಸಾವಿನ ಸಂಖ್ಯೆಯೂ ಹೆಚ್ಚಿರಬಹುದು ಎಂದುಕೊಳ್ಳಬಹುದು. ಆದರೆ, ಬಳ್ಳಾರಿಯಲ್ಲಿ ಸರಣಿ ಸಾವಿಗೆ ಕಾರಣ ತಿಳಿಯುತ್ತಿಲ್ಲ. ವಿಶೇಷವಾಗಿ ನಾನಾ ರೋಗಗಳಿಂದ ವಿಮ್ಸ್​ಗೆ ದಾಖಲಾಗುತ್ತಿರುವ ಜನರಲ್ಲಿ ಕರೊನಾ ಇದೆ ಎಂಬುದು ದೃಢಪಡುವ ಮುನ್ನವೇ ಸಾವಿನ ಮನೆಯತ್ತ ನಡೆದಿದ್ದಾರೆ. ಜಿಲ್ಲಾಸ್ಪತ್ರೆಯಲ್ಲಿ ಕರೊನಾ ದೃಢಪಟ್ಟವರನ್ನು ಮಾತ್ರ ದಾಖಲು ಮಾಡಲಾಗುತ್ತಿದೆ. ಉಳಿದ ರೋಗಿಗಳೆಲ್ಲ ವಿಮ್್ಸ ಆಸ್ಪತ್ರೆಗೆ ಹೋಗುತ್ತಿದ್ದಾರೆ. ಈ ಪೈಕಿ ತೀವ್ರ ಉಸಿರಾಟ ತೊಂದರೆ, ಇನ್​ಫ್ಲೂ್ಯಯೆಂಜಾ ಮಾದರಿಯ ಲಕ್ಷಣಗಳಿಂದ ಚಿಕಿತ್ಸೆ ಹಂತದಲ್ಲೇ ಮೃತಪಡುತ್ತಿದ್ದಾರೆ. ಇದರಿಂದಾಗಿ ವಿಮ್್ಸ ಬಗ್ಗೆಯೆ ಅನುಮಾನದಿಂದ ನೋಡುವಂತಾಗಿದೆ. ತಜ್ಞರ ಮೂಲಕ ಪರಿಶೋಧನೆಗೆ ಒಳಪಡಿಸಿ ಸರಣಿ ಸಾವಿಗೆ ಕಾರಣಗಳೇನು ಹಾಗೂ ಸಾವುಗಳ ಸಂಖ್ಯೆ ಹೆಚ್ಚಾಗದಂತೆ ತಡೆಯಲು ಅಗತ್ಯ ಕ್ರಮಕೈಗೊಳ್ಳಲಾಗುವುದು ಎಂದು ಡಿಸಿ ಎಸ್.ಎಸ್.ನಕುಲ್ ತಿಳಿಸಿದ್ದಾರೆ.

    ಜಿಲ್ಲಾಡಳಿತದಿಂದ ಮೇಲುಸ್ತುವಾರಿ: ವಿಮ್ಸ್​ನಲ್ಲಿ ಸಾವಿನ ಪ್ರಮಾಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಚಿಕಿತ್ಸಾ ವ್ಯವಸ್ಥೆಯಲ್ಲಿ ಲೋಪ ಪತ್ತೆ ಜತೆಗೆ ಸರ್ಕಾರದ ಮಾರ್ಗಸೂಚಿಗಳ ಸಮರ್ಪಕ ಪಾಲನೆ ಆಗುತ್ತಿರುವುದನ್ನು ಮೇಲುಸ್ತುವಾರಿ ಮಾಡಲು ಎಡಿಸಿ ಪಿ.ಎಸ್.ಮಂಜುನಾಥರನ್ನು ನೋಡಲ್ ಅಧಿಕಾರಿಯಾಗಿ ನೇಮಿಸಿ ಸೋಮವಾರ ಡಿಸಿ ಆದೇಶಿಸಿದ್ದಾರೆ.

    ಉಸಿರಾಟದ ತೊಂದರೆಯಾಗಿ ನ್ಯೂಮೋನಿಯಾದಿಂದ ಬಳಲುವಾಗ ಆಸ್ಪತ್ರೆಗೆ ಬರುತ್ತಿದ್ದಾರೆ. ವಿಮ್್ಸ ಆಸ್ಪತ್ರೆಯಲ್ಲಿ ಚಿಕಿತ್ಸೆ ಹಂತದಲ್ಲಿ 12 ಜನರು ಮೃತಪಟ್ಟಿದ್ದಾರೆ.
    | ಡಾ.ದೇವಾನಂದ ವಿಮ್್ಸ ನಿರ್ದೇಶಕ

    VIDEO| ಭಾರಿ ಸದ್ದು ಮಾಡುತ್ತಿದೆ ಡಿಕೆಶಿ ಪುತ್ರಿ ಐಶ್ವರ್ಯಾರ ನಿಶ್ಚಿತಾರ್ಥ ವಿಡಿಯೋ…!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts