More

    ವೀಕೆಂಡ್​ ಕರ್ಫ್ಯೂಗೆ ಕ್ಷಣಗಣನೆ: ಇಂದು ರಾತ್ರಿ 10ಕ್ಕೆ ಬಹುತೇಕ ಎಲ್ಲ ವಹಿವಾಟು ಬಂದ್​

    ಬೆಂಗಳೂರು: ಕರೊನಾ ಮತ್ತು ಒಮಿಕ್ರಾನ್​ ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆ ಸೋಂಕು ತಡೆಗಟ್ಟಲು ರಾಜ್ಯ ಸರ್ಕಾರ ವಿಧಿಸಿರುವ ವಾರಾಂತ್ಯ ಕರ್ಫ್ಯೂ ಇಂದು(ಶುಕ್ರವಾರ) ರಾತ್ರಿ 10ರಿಂದ ರಾಜ್ಯವ್ಯಾಪಿ ಜಾರಿಯಾಗಲಿದೆ. ಸೋಮವಾರ ಬೆಳಗ್ಗೆ 5ರ ವರೆಗೆ ತುರ್ತು ಸೇವೆ ಹೊರತುಪಡಿಸಿ ಎಲ್ಲ ವಹಿವಾಟು ಆಗಲಿದೆ. ಆಯಾ ಜಿಲ್ಲಾಧಿಕಾರಿಗಳು ಮತ್ತು ಪೊಲೀಸ್​ ಕಮಿಷನರ್​ಗಳು ಅಧಿಕೃತವಾಗಿ ನಿಷೇಧಾಜ್ಞೆ ಮತ್ತು ಕರ್ಫ್ಯೂ ಆದೇಶ ಹೊರಡಿಸಿದ್ದು, ಕೋವಿಡ್​ ಮಾರ್ಗಸೂಚಿ ಪಾಲನೆ ಮಾಡುವಂತೆ ಕಟ್ಟಾಜ್ಞೆ ವಿಧಿಸಿದ್ದಾರೆ. ವೀಕೆಂಡ್​ ಕರ್ಫ್ಯೂನಲ್ಲಿ ಏನಿರುತ್ತೆ? ಏನಿರಲ್ಲ? ಎಂಬುದರ ಸಂಕ್ಷಿಪ್ತ ವಿವರ ಇಲ್ಲಿದೆ.

    ಏನಿರಲ್ಲ?
    ಉದ್ಯಾನವನ, ಸಿನಿಮಾ, ವಾಣಿಜ್ಯ ಮಳಿಗೆ ಓಪನ್​ ಇರಲ್ಲ. ಇಂದು(ಶುಕ್ರವಾರ) ರಾತ್ರಿ 8 ಗಂಟೆಯಿಂದ ಸೋಮವಾರ ಮುಂಜಾನೆ 5 ಗಂಟೆವರೆಗೆ ಮದ್ಯದಂಗಡಿಗಳನ್ನು ಬಂದ್​ ಮಾಡಿ ಅಬಕಾರಿ ಇಲಾಖೆ ಆದೇಶ. ಸಭೆ-ಸಮಾರಂಭಗಳಿಗೆ ಕಂಪ್ಲೀಟ್​ ಬ್ರೇಕ್​. 

    ಏನಿರುತ್ತೆ?
    -ಔಷಧ, ಆಹಾರ, ದಿನಸಿ, ಹಣ್ಣು ತರಕಾರಿ, ಮೀನು, ಮಾಂಸ, ಹಾಲಿನ ಕೇಂದ್ರ, ಪಶು ಆಹಾರ ಕೇಂದ್ರ, ಬೀದಿಬದಿ ವ್ಯಾಪಾರ, ನ್ಯಾಯದ ಬೆಲೆ ಅಂಗಡಿ ಹಾಗೂ ಹೋಟೆಲ್​, ರೆಸ್ಟೋರೆಂಟ್​, ದರ್ಶಿನಿಗಳಲ್ಲಿ ಪಾರ್ಸೆಲ್​, ಹೋಂ ಡೆಲವರಿ ಸೇವೆ ಲಭ್ಯ.
    ಕ್ಯಾಬ್​, ಆಟೋ ಸೇವೆಗಳು ತುರ್ತು ಅಗತ್ಯಕ್ಕೆ ಮಾತ್ರ ಅವಕಾಶ.
    -ಬೆಂಗಳೂರಿನಲ್ಲಿ ಬಿಎಂಟಿಸಿ ಶೇ.10 ಸೇವೆ ಲಭ್ಯ. ಈಗಾಗಲೇ ಆನ್​ಲೈನ್​ನಲ್ಲಿ ಟಿಕೆಟ್​ ಬುಕ್ಕಿಂಗ್​ ಮಾಡಿಕೊಂಡಿರುವ ಪ್ರಯಾಣಿಕರ ಸಂಖ್ಯೆ ಆಧರಿಸಿ ಕೆಎಸ್​ಆರ್​ಟಿಸಿ ಬಸ್​ ಸೇವೆ ಕಲ್ಪಿಸಲಾಗುವುದು.
    -ಕೈಗಾರಿಕೆಗಳು, ಐಟಿ ಉದ್ಯಮಗಳ ನೌಕರರು ಅಧಿಕೃತ ಐಡಿ ಕಾರ್ಡ್​ ತೋರಿಸಿ ಓಡಾಡಲು ಅವಕಾಶ. ಅದೂ ಕೆಲಸಕ್ಕೆ ಹೋಗುವುದಿದ್ದರಷ್ಟೇ.

    ಹೋಂ ಐಸೋಲೇಷನ್​ಗೆ ಹೊಸ ಮಾರ್ಗಸೂಚಿ ಪ್ರಕಟ

    ಅದು ನಮ್ಮಿಬ್ಬರ ಕರುಳ ಬಳ್ಳಿ ಜಗಳ, ಅಕ್ಕನ ಮಗಳೋ- ಮಾವನ ಮಗನೋ ಎಂಬಂತೆ ಜಗಳ ಆಗಿದೆ ಅಷ್ಟೇ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts