ಹೋಂ ಐಸೋಲೇಷನ್​ಗೆ ಹೊಸ ಮಾರ್ಗಸೂಚಿ ಪ್ರಕಟ

home isolation
Published on

ಬೆಂಗಳೂರು: ರಾಜ್ಯದಲ್ಲಿ ಕರೊನಾ ಸೋಂಕಿತರ ಸಂಖ್ಯೆ ಶರವೇಗದಲ್ಲಿ ಏರಿಕೆಯಾಗುತ್ತಿದ್ದು, ಆತಂಕದ ವಾತಾವರಣ ಸೃಷ್ಟಿಸಿದೆ. ಕರೊನಾ ಸೋಂಕಿತರಿಗೆ ಅಗತ್ಯ ಚಿಕಿತ್ಸಾ ಸೌಲಭ್ಯ ಕಲ್ಪಿಸಲು ಸರ್ಕಾರ ಸಿದ್ಧತೆ ಮಾಡಿಕೊಂಡಿದ್ದು, ಹೋಂ ಐಸೋಲೇಷನ್​ಗೆ ಆರೋಗ್ಯ ಇಲಾಖೆ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದೆ.

ಸೌಮ್ಯ ಲಕ್ಷಣ ಹಾಗೂ ಲಕ್ಷಣರಹಿತ ಸೋಂಕಿತರಿಗೆ ಮಾತ್ರ ಈ ನಿಯಮ ಅನ್ವಯ

- ಸಣ್ಣ ಪ್ರಮಾಣದಲ್ಲಿ ಉಸಿರಾಟ ತೊಂದರೆ, ರಕ್ತದಲ್ಲಿ ಶೇ.93ಕ್ಕಿಂತ ಕಡಿಮೆ ಆಮ್ಲಜನಕ ಪ್ರಮಾಣ ಹೊಂದಿದವರು ನಿರ್ಲಕ್ಷ್ಯ ಮಾಡದೆ ತಕ್ಷಣ ಆಸ್ಪತ್ರೆಗೆ ದಾಖಲಾಗಬೇಕು.

- ಮನೆಯಲ್ಲಿಯೇ ಆರೈಕೆಗೆ ಒಳಗಾಗುವ ಸೌಮ್ಯ ಅಥವಾ ಲಕ್ಷಣ ರಹಿತ ಸೋಂಕಿತರಿಗೆ ಸೋಂಕು ನಿರ್ವಹಣೆಗೆ ಅಗತ್ಯ ಮಾರ್ಗದರ್ಶನ ನೀಡಲು ಜಿಲ್ಲಾಮಟ್ಟದಲ್ಲಿ ಕಂಟ್ರೋಲ್​ ರೂಂಗಳ ನಂಬರ್​ ನೀಡಲಾಗುವುದು. ಅವರನ್ನು ಸಂಪರ್ಕಿಸಿ ಅಗತ್ಯ ಮಾಹಿತಿ ಪಡೆಯಬಹುದು.

- ಮನೆ ಆರೈಕೆಗೆ ಒಳಗಾದ ಸೋಂಕಿತರ ಮೇಲೆ ನಿಗಾ ಇಡುವ ಜತೆಗೆ ಸೋಂಕಿತರ ಆರೈಕೆ ಮಾಡುವವರು ಕಡ್ಡಾಯವಾಗಿ ಎರಡೂ ಡೋಸ್​ ಕೋವಿಡ್​ ಲಸಿಕೆ ಪಡೆದಿರಬೇಕು.

- 60 ವರ್ಷ ಮೇಲ್ಪಟ್ಟವರು ಹಾಗೂ ನಾನಾ ಆರೋಗ್ಯ ಸಮಸ್ಯೆ ಹೊಂದಿರುವವರು ಕೋವಿಡ್​ ಸೋಂಕಿಗೆ ಒಳಗಾದಲ್ಲಿ ಅಂತಹವರು ಮನೆ ಆರೈಕೆಗೆ ಒಳಗಾಗುವಂತಿಲ್ಲ. ಸಂಬಂಧಪಟ್ಟ ವೈದ್ಯರಲ್ಲಿ ತಪಾಸಣೆ ಮಾಡಿಸಿಕೊಂಡು ವೈದ್ಯರ ಸಲಹೆಯಂತೆ ಚಿಕಿತ್ಸೆ ಪಡೆಯಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net