More

    ಆಕ್ಸಿಜನ್​, ಐಸಿಯು ಸೌಲಭ್ಯವುಳ್ಳ ಸಣ್ಣ ಆಸ್ಪತ್ರೆಗಳು ಕರೊನಾ ಚಿಕಿತ್ಸೆಗೆ ಲಭ್ಯ

    ಬೆಂಗಳೂರು: ಕರೊನಾ ಸೋಂಕಿತರ ಚಿಕಿತ್ಸೆಗೆ ಸಣ್ಣ ಆಸ್ಪತ್ರೆಗಳನ್ನು ಬಳಸಿಕೊಳ್ಳಬಾರದು ಎಂಬ ತನ್ನ ನಿರ್ಧಾರವನ್ನು ಸರ್ಕಾರ ಸ್ವಲ್ಪಮಟ್ಟಿಗೆ ಸಡಿಲಿಸಿದೆ.

    ಐಸಿಯು, ಆಮ್ಲಜನಕ ಸೌಲಭ್ಯವುಳ್ಳ 30 ಹಾಸಿಗೆಗಳ ಆಸ್ಪತ್ರೆಗಳನ್ನು ಕರೊನಾ ಸೋಂಕಿತರ ಚಿಕಿತ್ಸೆಗೆ ಬಳಸಲು ನಿರ್ಧರಿಸಿದೆ. ಇಂತಹ ಅನೇಕ ಆಸ್ಪತ್ರೆಗಳು ಸೇವೆ ಒದಗಿಸಲು ಮುಂದೆ ಬಂದಿದ್ದು, ಇದರಿಂದಾಗಿ 1,800 ರಿಂದ 2,000 ಹಾಸಿಗೆಗಳು ಲಭ್ಯವಾಗಲಿವೆ ಎಂದು ಆಸ್ಪತ್ರೆ ಹಾಸಿಗೆಗಳ ಮೇಲ್ವಿಚಾರಣೆ ಜವಾಬ್ದಾರಿ ಹೊತ್ತಿರುವ ಗೃಹ ಸಚಿವ ಬಸವರಾಜ ಬೊಮ್ಮಾಯಿ‌ ಸುದ್ದಿಗಾರರಿಗೆ‌ ಬುಧವಾರ ತಿಳಿಸಿದರು. ಇದನ್ನೂ ಓದಿರಿ ಹೆಲ್ಮೆಟ್ ಧರಿಸದ ಬೈಕ್​ ಸವಾರನಿಗೆ ದಂಡ ಹಾಕಿದ ಎಸ್​ಐಗೆ ನಡುರಸ್ತೆಯಲ್ಲೇ ಎಸಿ, ತಹಸೀಲ್ದಾರ್ ಅವಾಜ್​! ವಿಡಿಯೋ ವೈರಲ್​

    ಹೋಟೆಲ್ ಅಸೋಸಿಯೇಷನ್ ಅಧ್ಯಕ್ಷ ರಾವ್, ಖಾಸಗಿ ಆಸ್ಪತ್ರೆಗಳ ಸಂಘದ ಅಧ್ಯಕ್ಷ ಪ್ರಸನ್ನ ಹಾಗೂ ವಿವಿಧ‌ ಇಲಾಖೆಗಳ ಅಧಿಕಾರಿಗಳ ಜತೆಗೆ ವೆಬೆಕ್ಸ್‌ ಸಭೆ ಇಂದು ನಡೆಸಲಾಗಿದ್ದು, ಆಸ್ಪತ್ರೆಗಳ ಸಮೀಪದ ಹೋಟೆಲ್/ ಲಾಡ್ಜ್ ಗಳನ್ನು ಸ್ಟೆಪ್ ಅಪ್ ಹಾಗೂ ಸ್ಟೆಪ್ ಡೌನ್ ಆಸ್ಪತ್ರೆಗಳನ್ನಾಗಿ ಬಳಸಿಕೊಳ್ಳುವ ಕುರಿತು ಚರ್ಚೆಯಾಗಿದೆ.

    ಈಗಾಗಲೇ 1,200 ಹಾಸಿಗೆಗಳನ್ನು ಒದಗಿಸಿದ್ದು, ಇನ್ನೂ 2,000 ಹಾಸಿಗೆಗಳು ಇನ್ನೆರಡು ದಿನಗಳಲ್ಲಿ ಸಿಗಲಿವೆ. ಹೋಟೆಲ್ ಅಸೋಸಿಯೇಷನ್​ನವರು ಸ್ಟೆಪ್ ಅಪ್/ ಸ್ಟೆಪ್ ಡೌನ್ ಆಸ್ಪತ್ರೆಗಳ ಸಿಬ್ಬಂದಿಗೆ ಲಸಿಕೆ ಹಾಕಲು ಮನವಿ ಮಾಡಿದ್ದು, ಮೊದಲ ಆದ್ಯತೆಯ ಭರವಸೆ ನೀಡಲಾಗಿದೆ.

    ಖಾಸಗಿ ಆಸ್ಪತ್ರೆಗಳಲ್ಲಿ ಹೆಚ್ಚುವರಿಯಾಗಿ 10-15 ಹಾಸಿಗೆಗಳ ವಿಸ್ತರಣಾ‌ ಸಾಮರ್ಥ್ಯವಿದೆ ಎಂದು ಪ್ರಸನ್ನ ಹೇಳಿದಾಗ ಒಪ್ಪಿಗೆ ನೀಡಿದ್ದು, ಬೇಕಾದ ಅನುಕೂಲತೆಗಳನ್ನು ಸರ್ಕಾರ ಒದಗಿಸಲಿದೆ ಎನ್ನುವ ಆಶ್ವಾಸನೆ ನೀಡಲಾಗಿದೆ. ಆಕ್ಸಿಜನ್ ಸಾಂದ್ರಕಗಳ ಪೂರೈಕೆ ಬೇಡಿಕೆಗೂ ಕ್ರಮವಹಿಸಲಾಗುವುದು ಎಂದು ತಿಳಿಸಲಾಗಿದೆ. ಸದ್ಯಕ್ಕೆ ‌550 ಆಕ್ಸಿಜನ್ ಸಾಂದ್ರಕಗಳು ಲಭಿಸಿದ್ದು ಕರೊನಾ ಆರೈಕೆ ಕೇಂದ್ರಗಳಿಗೆ ಬಳಸಿಕೊಳ್ಳಲಾಗುವುದು. ಆಮ್ಲಜನಕ ಪೂರೈಕೆ ಪ್ರಮಾಣವು‌ ಏರಿಕೆಯಾಗಲಿದ್ದು, ಯಾವುದೇ ಸಮಸ್ಯೆ ಮರುಕಳಿಸದಂತೆ ವ್ಯವಸ್ಥಿತ ಕಾರ್ಯಯೋಜನೆ ರೂಪಿಸಲಾಗಿದೆ ಬೊಮ್ಮಾಯಿ‌ ಹೇಳಿದರು.

    ಪ್ರಿಯಕರನಿಗಾಗಿ ವಿಷ ಕುಡಿದು ಬದುಕಿದ ಪ್ರೇಯಸಿಯನ್ನ ರಾತ್ರೋರಾತ್ರಿ ಸುಟ್ಟುಹಾಕಿದ್ರು! ವಿಜಯನಗರದಲ್ಲೊಂದು ಮರ್ಯಾದಾ ಹತ್ಯೆ?

    ಪ್ರೀತಿ ಹೆಸರಲ್ಲಿ ಶಾಲಾ ವಿದ್ಯಾರ್ಥಿನಿ ಜತೆ ಯುವಕನ ಸೆಕ್ಸ್: ಮಾತ್ರೆ ನುಂಗಿಸಿ ಸಿಕ್ಕಿಬಿದ್ದ ಕಾಮುಕನ ಕಥೆ ಏನಾಯ್ತು?

    ಲೈಂಗಿಕ ಕ್ರಿಯೆ ನಡೆಸಿದ ಕೋಣೆಯಲ್ಲೇ ವಿಷ ಕುಡಿದ ಪ್ರೇಮಿಗಳು: ಸಾವಿಗೂ ಮುನ್ನ ಪಾಲಕರಿಗೆ ಬಾಲಕಿ ಹೇಳಿದ್ಲು ಸ್ಫೋಟಕ ರಹಸ್ಯ

    ಗಂಡನ ಪ್ರಾಣ ಉಳಿಸಿಕೊಡಿ ಎಂದು ಅಂಗಲಾಚಿದ ಮಹಿಳೆಯನ್ನು ಮಂಚಕ್ಕೆ ಕರೆದ ಕೋವಿಡ್​ ಆಸ್ಪತ್ರೆ ಸಿಬ್ಬಂದಿ: ಮುಂದಾಗಿದ್ದು ದುರಂತ!

    .

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts