More

    ಹಿಜಾಬ್​ ಹೆಸರಲ್ಲಿ ಹೆಣ್ಣುಮಕ್ಕಳ ಶಿಕ್ಷಣಕ್ಕೆ ಅಡ್ಡಿ: ರಾಹುಲ್ ಗಾಂಧಿ

    ನವದೆಹಲಿ: ”ಹಿಜಾಬ್​ ಹೆಸರಲ್ಲಿ ಶಿಕ್ಷಣಕ್ಕೆ ಅಡ್ಡಿ ಪಡಿಸುವ ಮೂಲಕ ದೇಶದ ಹೆಣ್ಣುಮಕ್ಕಳ ಭವಿಷ್ಯವನ್ನ ಕಸಿಯಲಾಗುತ್ತಿದೆ” ಎಂದು ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ವಾಗ್ದಾಳಿ ನಡೆಸಿದ್ದಾರೆ. ಇದಕ್ಕೆ ಪ್ರತಿಯಾಗಿ ಕರ್ನಾಟಕ ಬಿಜೆಪಿ, ”ಭಾರತದ ಭವಿಷ್ಯಕ್ಕೆ ರಾಹುಲ್ ಗಾಂಧಿ” ಅಪಾಯಕಾರಿ ಎಂದು ಟೀಕಿಸಿದೆ.

    ಕರ್ನಾಟಕದಲ್ಲಿ ಹಿಜಾಬ್​ ವಿವಾದ ತೀವ್ರ ಸ್ವರೂಪ ಪಡೆಯುತ್ತಿರುವ ಬೆನ್ನಲ್ಲೇ ರಾಹುಲ್​ ಗಾಂಧಿ ಹಿಜಾಬ್​ ಕುರಿತು ಶನಿವಾರ ಟ್ವೀಟ್​ ಮಾಡಿದ ರಾಹುಲ್​ ಗಾಂಧಿ, ”ಹಿಜಾಬ್​ ಹೆಸರಲ್ಲಿ ಶಿಕ್ಷಣಕ್ಕೆ ಅಡ್ಡಿ ಮಾಡುವ ಮೂಲಕ ದೇಶದ ಹೆಣ್ಣುಮಕ್ಕಳ ಭವಿಷ್ಯವನ್ನ ಕಸಿಯಲಾಗುತ್ತಿದೆ. ತಾಯಿ ಸರಸ್ವತಿಯು ಎಲ್ಲರಿಗೂ ಜ್ಞಾನ ನೀಡುತ್ತಾಳೆ. ಅವಳು ಭೇದಭಾವ ಮಾಡುವುದಿಲ್ಲ” ಎಂದಿದ್ದಾರೆ.

    ರಾಹುಲ್​ ಗಾಂಧಿ ಟ್ವೀಟ್​ಗೆ ಪ್ರತಿಕ್ರಿಯಿಸಿದ ಕರ್ನಾಟಕ ಬಿಜೆಪಿ, “ಶಿಕ್ಷಣವನ್ನು ಕೋಮುವಾದ ಮಾಡುವ ಮೂಲಕ, ಕಾಂಗ್ರೆಸ್ ಸಹ-ಮಾಲೀಕ ರಾಹುಲ್ ಗಾಂಧಿ ಅವರು ಭಾರತದ ಭವಿಷ್ಯಕ್ಕೆ ಅಪಾಯಕಾರಿ ಎಂದು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ” ಎಂದು ಟೀಕಿಸಿದೆ.

    ಅತ್ತ ವಿಪಕ್ಷ ನಾಯಕ ಸಿದ್ದರಾಮಯ್ಯ, ”ಶಾಲಾ- ಕಾಲೇಜುಗಳಲ್ಲಿ ಹಿಜಾಬ್​ ನಿಷೇಧ ಮೂಲಭೂತ ಹಕ್ಕಿನ ಉಲ್ಲಂಘನೆ” ಎಂದು ನಿನ್ನೆ(ಶುಕ್ರವಾರ) ಆಕ್ರೋಶ ಹೊರಹಾಕಿದ್ದರು. ಸದ್ಯ ಈ ವಿವಾದ ಕಾಂಗ್ರೆಸ್​ ಮತ್ತು ಬಿಜೆಪಿ ನಡುವಿನ ವಾಕ್ಸಮರಕ್ಕೆ ಕಾರಣವಾಗಿದೆ.

    ನನ್ನ ಹುಟ್ಟೂರು ಧಾರವಾಡ, ಪ್ಲೀಸ್​ ನನ್ನ ಮೂಲ ಹುಡುಕಲು ಸಹಕರಿಸಿ.. ಬಾಲ್ಯದ ಫೋಟೋ ಹಾಕಿ ಅಂಗಲಾಚಿದ ಸ್ವೀಡನ್​ ಪ್ರಜೆ

    ಡೇಟಿಂಗ್​ ನೆಪದಲ್ಲಿ ಅವಿವಾಹಿತೆಯರ ಮನೆಗೆ ತೆರಳುತ್ತಿದ್ದ ಎರಡು ಮಕ್ಕಳ ತಂದೆ, ಬಟ್ಟೆ ಬಿಚ್ಚುತ್ತಿದ್ದಂತೆ ವರಸೆ ಬದಲಿಸುತ್ತಿದ್ದ…

    ಹಿಜಾಬ್​ ಬೇಕು ಅಂದ್ರೆ ಅಫ್ಘಾನಿಸ್ತಾನ, ಪಾಕಿಸ್ತಾನಕ್ಕೆ ಹೋಗಿ: ಪ್ರಮೋದ್ ಮುತಾಲಿಕ್​ ಆಕ್ರೋಶ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts