More

    ಪದ್ಮಶ್ರೀ ಪ್ರಶಸ್ತಿಗೆ ಪುನೀತ್ ರಾಜ್​ಕುಮಾರ್​ ಹೆಸರು ಶಿಫಾರಸು: ಸಿಎಂ ಬೊಮ್ಮಾಯಿ

    ಬೆಂಗಳೂರು: ಚಂದನವನದ ‘ರಾಜಕುಮಾರ’, ಕೋಟ್ಯಂತರ ಅಭಿಮಾನಿಗಳ ಪಾಲಿನ ಪ್ರೀತಿಯ ‘ಅಪ್ಪು’, ನಟ ದಿ. ಪುನೀತ್​ ರಾಜ್​ಕುಮಾರ್​ ಅವರ ಹೆಸರು ಪದ್ಮಶ್ರೀ ಪ್ರಶಸ್ತಿಗೆ ಶಿಫಾರಸು ಆಗಲಿದೆ.

    ಈ ಕುರಿತು ಇಂದು(ಸೋಮವಾರ) ಬೆಳಗಾವಿಯಲ್ಲಿ ಆರಂಭವಾದ ವಿಧಾನಸಭೆ ಅಧಿವೇಶನಲ್ಲಿ ಮುಖ್ಯಮಂತ್ರಿ ಬಸವರಾಜು ಬೊಮ್ಮಾಯಿ ತಿಳಿಸಿದರು. ಪುನೀತ್​ ರಾಜ್​ಕುಮಾರ್​ ನಟನೆಗೆ ಮಾತ್ರ ಸೀಮಿತವಾಗಿರಲಿಲ್ಲ. ಅವರ ಸಮಾಜ ಸೇವೆ ಎಲ್ಲರಿಗೂ ಮಾದರಿಯಾಗಿದೆ. ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಶೀಘ್ರವೇ ಪುನೀತ್​ ರಾಜ್​ಕುಮಾರ್​ ಅವರ ಹೆಸರನ್ನು ಶಿಫಾರಸು ಮಾಡಲಾಗುವುದು ಎಂದರು.

    ಪದ್ಮಶ್ರೀ ಪ್ರಶಸ್ತಿಗೆ ಪುನೀತ್ ರಾಜ್​ಕುಮಾರ್​ ಹೆಸರು ಶಿಫಾರಸು: ಸಿಎಂ ಬೊಮ್ಮಾಯಿ

    ಅ.29ರಂದು ಪುನೀತ್​ ರಾಜ್​ಕುಮಾರ್​ ನಿಧನರಾದರು. ಅಪ್ಪು ಇನ್ನಿಲ್ಲ ಎಂಬ ಸುದ್ದಿ ಕರುನಾಡಿಗೆ ದೊಡ್ಡ ನೋವನ್ನೇ ತಂದೊಡಿತು. ಇಂದಿಗೂ ಅಪ್ಪುಗಾಗಿ ಅಭಿಮಾನಿಗಳು ಮನ ಮಿಡಿಯುತ್ತಲೇ ಇದೆ. ಪುನೀತ್​ ರಾಜ್​ಕುಮಾರ್​ ಅವರಿಗೆ ಮರಣೋತ್ತರವಾಗಿ ಪದ್ಮಶ್ರೀ ಪ್ರಶಸ್ತಿ ನೀಡಬೇಕು ಎಂಬ ಆಗ್ರಹ ದಟ್ಟವಾಗಿ ಕೇಳಿಬಂತು. ಈ ಕುರಿತು ಪ್ರತಿಕ್ರಿಯಿಸಿದ್ದ ಸಹೋದರ ಶಿವರಾಜ್​ಕುಮಾರ್, ಅಪ್ಪುಗೆ ಪದ್ಮಶ್ರೀ ಪ್ರಶಸ್ತಿ.. ಯಾವ ಶ್ರೀ ಕೊಟ್ಟರು ದೊಡ್ಡದ್ದಲ್ಲ. ಅವನು ಅಮರ ಶ್ರೀ.. ಆ ಶ್ರೀಗಿಂತ ಯಾವುದೂ ದೊಡ್ಡದಲ್ಲ. ಅವನು ಎಲ್ಲರ ಮನಸ್ಸಿನ್ನೂ ಶ್ರೀ ಆಗಿದ್ದಾನೆ, ಅದಕ್ಕಿಂದ ದೊಡ್ಡದು ಬೇರೆ ಯಾವುದೂ ಇಲ್ಲ’ ಎಂದಿದ್ದರು. ಆದರೂ ಅಭಿಮಾನಿಗಳ ಆಗ್ರಹ ನಿಂತಿಲ್ಲ.

    ಪದ್ಮಶ್ರೀ ಪ್ರಶಸ್ತಿಗೆ ಪುನೀತ್ ರಾಜ್​ಕುಮಾರ್​ ಹೆಸರು ಶಿಫಾರಸು: ಸಿಎಂ ಬೊಮ್ಮಾಯಿ

    ಅಪ್ಪು ಅವರ ಸ್ಮರಣಾರ್ಥ ಅರಮನೆ ಮೈದಾನದ ಗಾಯತ್ರಿ ವಿಹಾರದಲ್ಲಿ ನ.16ರಂದು ನಡೆದ ‘ಪುನೀತ ನಮನ’ ಕಾರ್ಯಕ್ರಮದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಪುನೀತ್​ ಅವರಿಗೆ ‘ಕರ್ನಾಟಕ ರತ್ನ’ ಪ್ರಶಸ್ತಿ ಘೋಷಣೆ ಮಾಡಿದ್ದರು. ಡಾ.ರಾಜ್​ಕುಮಾರ್​ ಅವರ ಸ್ಮಾರಕದಂತೆ ಪುನೀತ್​ ಅವರ ಸ್ಮಾರಕ ನಿರ್ಮಾಣ ಮಾಡುವುದಾಗಿ ಇದೇ ವೇಳೆ ಸಿಎಂ ಹೇಳಿದ್ದರು. ಇದೀಗ ಪದ್ಮಶ್ರೀ ಪ್ರಶಸ್ತಿಗೆ ಪುನೀತ್​ ಹೆಸರನ್ನು ಶಿಫಾರಸು ಮಾಡುವುದಾಗಿ ಅಧಿವೇಶನಲ್ಲಿ ತಿಳಿಸಿದ್ದಾರೆ. ಅತ್ತ ಅಪ್ಪು ಅಭಿಮಾನಿಗಳು ಆದಷ್ಟು ಬೇಗ ಹೆಸರನ್ನು ಶಿಫಾರಸು ಮಾಡಿ. ‘ಪದ್ಮಶ್ರೀ’ ಗೌರವ ಪುನೀತ್​ ಸರ್​ ಮುಡಿಗೇರುವ ದಿನಕ್ಕಾಗಿ ಕಾಯುತ್ತಿದ್ದೇವೆ ಎನ್ನುತ್ತಿದ್ದಾರೆ.

    ಪುನೀತ್​ ರಾಜ್​​ಕುಮಾರ್​ಗೆ ಮರಣೋತ್ತರ ‘ಕರ್ನಾಟಕ ರತ್ನ’ ಪ್ರಶಸ್ತಿ: ಸಿಎಂ ಬೊಮ್ಮಾಯಿ ಘೋಷಣೆ

    ಸ್ನಾನಕ್ಕೆ ನೀರು ಕಾಯಿಸುತ್ತಿದ್ದಾಗ ಹೀಟರ್ ರೂಪದಲ್ಲಿ ಬಂದ ಜವರಾಯ ಯುವತಿಯ ಪ್ರಾಣ ಹೊತ್ತೊಯ್ದ

    ಪಂಜಾಬ್​ನಲ್ಲಿ ರೈತರು ಭತ್ತಕ್ಕೆ ‘ದೇವೇಗೌಡ’ ಎಂದು ಹೆಸರಿಟ್ಟಿದ್ದೇಕೆ? ಮಾಜಿ ಪ್ರಧಾನಿ ಕುರಿತ ಆಸಕ್ತಿಕರ​ ಮಾಹಿತಿ ಇಲ್ಲಿದೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts