More

    ಪಂಜಾಬ್​ನಲ್ಲಿ ರೈತರು ಭತ್ತಕ್ಕೆ ‘ದೇವೇಗೌಡ’ ಎಂದು ಹೆಸರಿಟ್ಟಿದ್ದೇಕೆ? ಮಾಜಿ ಪ್ರಧಾನಿ ಕುರಿತ ಆಸಕ್ತಿಕರ​ ಮಾಹಿತಿ ಇಲ್ಲಿದೆ

    ನವದೆಹಲಿ: ಹಲವು ವರ್ಷಗಳ ಹಿಂದೆಯೇ ಪಂಜಾಬ್​ನಲ್ಲಿ ಭತ್ತದ ತಳಿಯೊಂದಕ್ಕೆ ಮಾಜಿ ಪ್ರಧಾನಿ ಎಚ್​.ಡಿ.ದೇವೇಗೌಡರ ಹೆಸರನ್ನು ಇಡಲಾಗಿದೆ, ಏಕೆ ಗೊತ್ತಾ?

    ಮಣ್ಣಿನ ಮಗ ಎಂದೇ ಪ್ರಖ್ಯಾತಿ ಹೊಂದಿರುವ ಜೆಡಿಎಸ್‌ ವರಿಷ್ಠ ದೇವೇಗೌಡರಿಗೆ ಪಂಜಾಬ್​ನ ರೈತರು ಅತ್ಯುತ್ತಮ ಭತ್ತದ ತಳಿವೊಂದಕ್ಕೆ ‘ದೇವೇಗೌಡ’ ಎಂದು ಹೆಸರಿಟ್ಟು ಅಭಿಮಾನ ಮೆರೆಯಲು ಕಾರಣ ಏನು ಎಂಬುದು  ಇಂದು(ಡಿ.13) ಸಂಜೆ 6.30ಕ್ಕೆ ನವದೆಹಲಿಯ ಮಲ್ಟಿ ಪರಪಸ್​ ಹಾಲ್​, ಇಂಟರ್​ ನ್ಯಾಷನಲ್​ ಸೆಂಟರ್​ನಲ್ಲಿ ಬಿಡುಗಡೆ ಆಗುತ್ತಿರುವ ಎಚ್​.ಡಿ.ದೇವೇಗೌಡರ ‘ಜೀವನ ಚರಿತ್ರೆ’ ಕುರಿತ ಪುಸ್ತಕದಲ್ಲಿದೆ. ದೇವೇಗೌಡ ಕುರಿತು ಮಹತ್ವದ ವಿಚಾರಗಳು ಈ ಪುಸ್ತಕದಲ್ಲಿದ್ದು, ಪಂಜಾಬ್​ನ ರೈತರು ಭತ್ತಕ್ಕೆ ‘ದೇವೇಗೌಡ’ ಎಂದು ಹೆಸರಿಟ್ಟಿದ್ದರ ಬಗ್ಗೆಯೂ ಉಲ್ಲೇಖಿಸಲಾಗಿದೆ. ಹಿರಿಯ ಪತ್ರಕರ್ತ ಸುಗತ ಶ್ರೀನಿವಾಸರಾಜು ಅವರು ಬರೆದಿರುವ ಈ ಪುಸ್ತಕದ ಹೆಸರು, ‘ಫುರೋಸ್‌ ಇನ್‌ ಎ ಫೀಲ್ಡ್‌: ದಿ ಅನ್‌ಎಕ್ಸ್‌ಪ್ಲೋರ್ಡ್‌ ಲೈಫ್ ಆಫ್’ (Furrows in a Field: The Unexplored Life of).

    1991ರ ಜುಲೈ 31 ಮತ್ತು ಆಗಸ್ಟ್‌ 1ರ ಘಟನೆಯನ್ನು ಈ ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ. ಅಂದು ಮನಮೋಹನ್ ಸಿಂಗ್ ನೇತೃತ್ವದ ಮೊದಲ ಬಜೆಟ್ ಕುರಿತು ಲೋಕಸಭೆಯಲ್ಲಿ ಚರ್ಚೆ ನಡೆಯುತ್ತಿತ್ತು. ಅಂದು ಸದನದ ಬಾವಿಗಿಳಿದ ದೇವೇಗೌಡರು, ನಾನೊಬ್ಬ ರೈತ. ಭೂಮಿ ಉಳುವವನ ಮಗ. ರೈತರಿಗೆ ಸಬ್ಸಿಡಿಗಳನ್ನು ಕೊನೆಗೊಳಿಸುವ ನಿರ್ಧಾರವನ್ನು ಸರ್ಕಾರ ಈ ಕೂಡಲೇ ಹಿಂತೆಗೆದುಕೊಳ್ಳಬೇಕು. ಯಾವುದೇ ಕಾರಣಕ್ಕೂ ಸರ್ಕಾರದ ನಿರ್ಧಾರವನ್ನ ಒಪ್ಪುವುದಿಲ್ಲ. ಹಿಂಪಡೆಯುವವರೆಗೂ ಸದನದಿಂದ ಹೊರಗೆ ಹೋಗಲ್ಲ ಎಂದಯ ಪಟ್ಟು ಹಿಡಿದು ಕೂತಿದ್ದರ ಬಗ್ಗೆ ಪ್ರಸ್ತಾಪಿಸಲಾಗಿದೆ.

    ಪಂಜಾಬ್​ನಲ್ಲಿ ರೈತರು ಭತ್ತಕ್ಕೆ 'ದೇವೇಗೌಡ' ಎಂದು ಹೆಸರಿಟ್ಟಿದ್ದೇಕೆ? ಮಾಜಿ ಪ್ರಧಾನಿ ಕುರಿತ ಆಸಕ್ತಿಕರ​ ಮಾಹಿತಿ ಇಲ್ಲಿದೆ

    ಅಷ್ಟೇ ಅಲ್ಲ, 2002ರಲ್ಲಿ ಭಾರತದಾದ್ಯಂತ ರೈತರ ಆತ್ಮಹತ್ಯೆ ಪ್ರಕರಣ ಭಾರೀ ಸದ್ದು ಮಾಡಿತ್ತು. ಆ ವೇಳೆ ದೇವೇಗೌಡರು ಕರ್ನಾಟಕದಿಂದ 2,000ಕ್ಕೂ ಹೆಚ್ಚು ರೈತರನ್ನೊಳಗೊಂಡ ನಿಯೋಗವನ್ನು ರೈಲಿನಲ್ಲಿ ದೆಹಲಿಗೆ ಕರೆದೊಯ್ದು ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರನ್ನು ಭೇಟಿ ಮಾಡಿಸಿದ್ದರು.

    ಪಂಜಾಬ್​ನಲ್ಲಿ ರೈತರು ಭತ್ತಕ್ಕೆ 'ದೇವೇಗೌಡ' ಎಂದು ಹೆಸರಿಟ್ಟಿದ್ದೇಕೆ? ಮಾಜಿ ಪ್ರಧಾನಿ ಕುರಿತ ಆಸಕ್ತಿಕರ​ ಮಾಹಿತಿ ಇಲ್ಲಿದೆ

    ಸದನದ ಒಳಗೆ ಮತ್ತು ಹೊರಗೆ ರೈತ ಸಮುದಾಯದ ಪರ ದೇವೇಗೌಡರು ರೈತರ ಮೇಲೆ ತೋರಿದ ಕಾಳಜಿಯ ಗೌರವಾರ್ಥ ಅವರ ಹೆಸರನ್ನೇ ಪಂಜಾಬ್‌ನ ರೈತರು ಅತ್ಯುತ್ತಮ ಭತ್ತದ ತಳಿಯೊಂದಕ್ಕೆ ಇಟ್ಟಿದ್ದಾರೆ ಎಂದು ಈ ಪುಸ್ತಕದಲ್ಲಿ ವಿವರಿಸಲಾಗಿದೆ.

    ಹೊಳೆನರಸೀಪುರ ತಾಲೂಕು ಅಭಿವೃದ್ಧಿ ಮಂಡಳಿಯ ಸದಸ್ಯರಾಗಿ ಸಾರ್ವಜನಿಕ ಜೀವನಕ್ಕೆ ಕಾಲಿಟ್ಟ ದೇವೇಗೌಡರು, 1996ರಲ್ಲಿ ಭಾರತದ 11ನೇ ಪ್ರಧಾನ ಮಂತ್ರಿಯಾಗಿದ್ದರು. ಶಾಸಕ, ವಿಧಾನಸಭೆಯ ವಿರೋಧ ಪಕ್ಷದ ನಾಯಕ, ನೀರಾವರಿ ಮತ್ತು ಲೋಕೋಪಯೋಗಿ ಸಚಿವ, ಮುಖ್ಯಮಂತ್ರಿ, ಪ್ರಧಾನ ಮಂತ್ರಿ, ಸಂಸದ… ಹೀಗೆ ಹಲವು ಸ್ಥಾನಗಳನ್ನು ಅಲಂಕರಿಸಿದ ದೇವೇಗೌಡರಿಗೆ ಸಾರ್ವಜನಿಕ ವಲಯದಲ್ಲಿ 7 ದಶಕಗಳ ಒಡನಾಟ ಇದೆ. ಪ್ರಧಾನಿ ಹುದ್ದೆಯಿಂದ ಕೆಳಗಿಳಿದು 25 ವರ್ಷ ಕಳೆದರೂ ಅವರು ಭಾರತೀಯ ರಾಜಕೀಯದಲ್ಲಿ ಪ್ರಸ್ತುತವಾಗಿದ್ದಾರೆ. ಈ ಎಲ್ಲ ಏಳುಬೀಳು ಕುರಿತ ಮಹತ್ವದ ವಿಚಾರ ಈ ಪುಸ್ತಕದಲ್ಲಿದೆ.

    ಸ್ನಾನಕ್ಕೆ ನೀರು ಕಾಯಿಸುತ್ತಿದ್ದಾಗ ಹೀಟರ್ ರೂಪದಲ್ಲಿ ಬಂದ ಜವರಾಯ ಯುವತಿಯ ಪ್ರಾಣ ಹೊತ್ತೊಯ್ದ

    ಬೆಂಗಳೂರು ಪೊಲೀಸರಿಗೇ ಮುಜುಗರ ಉಂಟು ಮಾಡುವ ವಿಡಿಯೋ ಇದು!

    ಬೇರೆ ಬೇರೆ ಮದ್ವೆ ಆಗಿದ್ರೂ ಮಾಗಡಿಯಲ್ಲಿ ದುರಂತ ಅಂತ್ಯ ಕಂಡ ಜೋಡಿ! ಗರ್ಭಿಣಿ ಪತ್ನಿಯ ಗೋಳಾಟ ನೋಡಲಾಗ್ತಿಲ್ಲ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts