More

    ರೇಖಾ ಕದಿರೇಶ್ ಕೊಲೆ‌: ಮರದ ಕೆಳಗೆ ಎಣ್ಣೆ ಕುಡಿಯುತ್ತಾ ಕುಳಿತಿದ್ದ ಆರೋಪಿಗಳ ಕಾಲಿಗೆ ಗುಂಡೇಟು

    ಬೆಂಗಳೂರು: ಬಿಬಿಎಂಪಿ ಮಾಜಿ ಕಾರ್ಪೋರೇಟರ್ ರೇಖಾ ಕದಿರೇಶ್​ ಕೊಲೆ ಪ್ರಕರಣದ ಆರೋಪಿಗಳಿಬ್ಬರನ್ನು ಕಾಲಿಗೆ ಗುಂಡು ಹಾರಿಸಿ ಬಂಧಿಸಲಾಗಿದೆ. ಪೀಟರ್​ ಮತ್ತು ಸೂರ್ಯ ಬಂಧಿತರು. ಇವರಿಬ್ಬರೂ ರೇಖಾಗೆ ಬಾಡಿಗಾರ್ಡ್​ನಂತೆ ಸಹಚರರಾಗಿದ್ದವರು.

    ಕರೊನಾ ಹಿನ್ನೆಲೆ ಬಡ ಜನರಿಗೆ ತನ್ನ ಕಚೇರಿ ಬಳಿ ರೇಖಾ ಊಟ ವಿತರಿಸುತ್ತಿರುವಾಗಲೇ ಅಲ್ಲಿಗೆ ಬಂದ ದುಷ್ಕರ್ಮಿಗಳು ಗುರುವಾರ ಬೆಳಗ್ಗೆ ಬರ್ಬರವಾಗಿ ಹತ್ಯೆ ಮಾಡಿ ಪರಾರಿಯಾಗಿದ್ದರು. ಇದು ರೇಖಾರ ಸಹಚರರಿಂದಲೇ ನಡೆದ ಕೊಲೆ ಎಂಬ ಅನುಮಾನ ದಟ್ಟವಾಗಿತ್ತು. ಪೊಲೀಸರು ಕೊಲೆ ನಡೆದ ರಾತ್ರಿಯೇ 50ಕ್ಕೂ ಹೆಚ್ಚು ಜನರನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಿದ್ದರು. ಮೊದಲ ಹಂತದ ವಿಚಾರಣೆ ಬಳಿಕ 39 ಜನರನ್ನು ವಶದಲ್ಲಿಟ್ಟುಕೊಂಡು ವಿಚಾರಣೆ ನಡೆಸುವಾಗ ಪೀಟರ್​ ಜತೆ ಸಂಪರ್ಕ ಹೊಂದಿದ್ದ ವ್ಯಕ್ತಿ ಪತ್ತೆಯಾಗುತ್ತಿದ್ದಂತೆ ಪೀಟರ್​ ಮತ್ತು ಸೂರ್ಯನಿಗಾಗಿ ಪೊಲೀಸರು ಚುರುಕಿನ ಕಾರ್ಯಾಚರಣೆ ನಡೆಸಿದ್ದರು. ಕೊಲೆ ಆದಾಗಿಂದ ಆರೋಪಿಗಳು ಒಂದು ಕಡೆ ನಿಲ್ಲದೆ ಆಟೋವೊಂದರಲ್ಲಿ ಕೂತು ತಿರುಗುತ್ತಲೇ ಇದ್ದರು. ಇದನ್ನು ಓದಿರಿ ವಿಷ ಕುಡಿದು ಪ್ರಿಯಕರನ ಮಡಿಲಲ್ಲೇ ರಕ್ತಕಾರಿ ಪ್ರಾಣಬಿಟ್ಟ ಪ್ರೇಯಸಿ! ಇವರಿಬ್ಬರ ಕಥೆ ಭಯಾನಕ

    ರೇಖಾ ಕದಿರೇಶ್ ಕೊಲೆ‌: ಮರದ ಕೆಳಗೆ ಎಣ್ಣೆ ಕುಡಿಯುತ್ತಾ ಕುಳಿತಿದ್ದ ಆರೋಪಿಗಳ ಕಾಲಿಗೆ ಗುಂಡೇಟುಈ ಆಟೋ ಆಸ್ಟಿಂಗ್ ಟೌನ್​ನಲ್ಲಿದೆ ಎಂದು ಇಂದು(ಶುಕ್ರವಾರ) ಬೆಳಗಿನ ಜಾವ ಮೂರೂವರೆ ಸುಮಾರಿಗೆ ಮಾಹಿತಿ ಸಿಗುತ್ತಿದ್ದಂತೆ ಪೊಲೀಸರು ಆಟೋ ಹುಡುಕಿ ಹೊರಟರು. ಆಸ್ಟಿಂಗ್ ಟೌನ್ ಬಳಿಕ ಕೋರಮಂಗಲ, ಎಚ್​ಎಸ್ಆರ್ ಲೇಔಟ್, ಎಲೆಕ್ಟ್ರಾನಿಕ್ ಸಿಟಿ, ಸಿಂಗೇನ ಅಗ್ರಹಾರ ಬಳಿಕ ಕೊಡತಿ, ಚಿಕ್ಕನಾಯಕನಹಳ್ಳಿ ಸುತ್ತಾಡಿ ಮತ್ತೆ ನಗರಕ್ಕೆ ಬಂದಿದ್ದರು. ಬೆಳಗ್ಗೆ ರಾಜಾಜಿನಗರದಿಂದ ಮೈಸೂರು ರಸ್ತೆ ಮೂಲಕ ಅರೋಪಿಗಳು ಪಾಸ್ ಆಗಿದ್ದರು. ಬೆಳಗ್ಗೆ 9.45ಕ್ಕೆ ಪಕ್ಕಾ ಮಾಹಿತಿ ಸಿಗುತ್ತಿದ್ದಂತೆ ಉಪ್ಪಾರಪೇಟೆ ಇನ್​ಸ್ಪೆಕ್ಟರ್​ ಶಿವಸ್ವಾಮಿ ಮತ್ತು ಕಾಟನ್​ಪೇಟೆ ಇನ್​ಸ್ಪೆಕ್ಟರ್​ ಚಿದಾನಂದ ಮೂರ್ತಿ ತಂಡ ಆಟೋವನ್ನ ಬೆನ್ನಟ್ಟಿತ್ತು. ಮಧ್ಯಾಹ್ನ 12 ಗಂಟೆಗೆ ಸುಂಕದಕಟ್ಟೆ ಬಳಿಯ ಬಜಾಜ್ ಗ್ರೌಂಡ್ ಬಳಿ ಅರೋಪಿಗಳು ಮರದ ಕೆಳಗೆ ಕುಳಿತು ಎಣ್ಣೆ ಹೊಡೆಯುತ್ತಿದ್ದರು. ಆರೋಪಿಗಳನ್ನು ಸುತ್ತುವರಿಯುತ್ತಿದ್ದಂತೆ ಮಾರಕಾಸ್ತ್ರಗಳಿಂದ ಪಿಎಸ್​ಐ ಕರಿಯಣ್ಣ ಮತ್ತು ಮುಖ್ಯಪೇದೆ ಚಂದ್ರಶೇಖರ್ ಮೇಲೆ ಹಲ್ಲೆಗೆ ಯತ್ನಿಸಿದ್ದು, ಈ ವೇಳೆ ಸುತ್ತು ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸಿ, ನಂತರ ಆರೋಪಿಗಳ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ. ಗುಂಡೇಟು ತಿಂದವರನ್ನ ಲಕ್ಷ್ಮೀ ಅಸ್ಪತ್ರೆಗೆ ದಾಖಲಿಸಲಾಗಿದೆ.

    ಆರೋಪಿ ಪೀಟರ್ ಮೇಲೆ 3 ಕೊಲೆ, 1 ಹಲ್ಲೆ, 1 ಡಕಾಯಿತಿಗೆ ಯತ್ನ ಪ್ರಕರಣಗಳು ಇವೆ. ಮತ್ತೊಬ್ಬ ಆರೋಪಿ ಸೂರ್ಯನ ಮೇಲಿದೆ 2 ಕೊಲೆ, 2 ಕೊಲೆಯತ್ನ ಪ್ರಕರಣ.

    ರೇಖಾ ಕದಿರೇಶ್ ಕೊಲೆ‌ ಪ್ರಕರಣದ ಆರೋಪಿಗಳನ್ನು ಶೀಘ್ರವೇ ಬಂಧಿಸುವಂತೆ ಮುಖ್ಯಮಂತ್ರಿ ಹಾಗೂ ಗೃಹ ಸಚಿವರು ಆದೇಶಿಸಿದ್ದರು. ಆರೋಪಿಗಳ ಪತ್ತೆಗಾಗಿ ಆರು ವಿಶೇಷ ತಂಡ ರಚನೆ ಮಾಡಲಾಗಿತ್ತು. ಡಿಸಿಪಿ ಸಂಜೀವ್ ಪಾಟೀಲ್ ನೇತೃತ್ವದಲ್ಲಿ ಪಶ್ಚಿಮ ವಿಭಾಗದ ಎಲ್ಲ ಪೊಲೀಸರು ಅರ್ಲಟ್ ಆಗಿದ್ದರು. ಇಂದು ಬೆಳಗ್ಗೆ ಕಾಮಾಕ್ಷಿಪಾಳ್ಯ ಬಜಾಜ್ ಮೈದಾನ ಬಳಿ ತಲೆಮರೆಸಿಕೊಂಡಿರುವ ಮಾಹಿತಿ ಸಿಕ್ಕಿದ್ದು, ಸ್ಥಳಕ್ಕೆ ತೆರಳಿ ಪೀಟರ್ ಹಾಗೂ ಸೂರ್ಯ ನನ್ನು ಬಂಧಿಸಲಾಗಿದೆ, ಈ ವೇಳೆ ನಮ್ಮ ಸಿಬ್ಬಂದಿ ಮೇಲೆ ಆರೋಪಿಗಳು ಹಲ್ಲೆ ನಡೆಸಿದ್ದರು. ಪ್ರಾಣ ರಕ್ಷಣೆಗಾಗಿ ಆರೋಪಿಗಳ ಕಾಲಿಗೆ ಗುಂಡು ಹೊಡೆಯಲಾಗಿದೆ‌. ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಿಖರವಾಗಿ ಯಾವ ವಿಚಾರಕ್ಕಾಗಿ ಕೊಲೆ ಮಾಡಿದ್ದಾರೆ ಎಂಬುದರ ಬಗ್ಗೆ ತಿಳಿದುಬಂದಿಲ್ಲ. ಕೊಲೆ ಪ್ರಕರಣದಲ್ಲಿ ಹಲವರು ಭಾಗಿಯಾಗಿದ್ದಾರೆ. ಆರೋಪಿಗಳಿಗೆ ಸಹಾಯ ಮಾಡಿದವರ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ನಗರ ಪೊಲೀಸ್ ಆಯುಕ್ತ ಕಮಲ್‌ ಪಂತ್ ಹೇಳಿದರು.

    ಬಡವರಿಗೆ ಊಟ ಕೊಡುತ್ತಿರುವಾಗಲೇ ರೇಖಾ ಕದಿರೇಶ್​ನನ್ನು ಅಟ್ಟಾಡಿಸಿ ಕೊಂದ್ರು! ಇಲ್ಲಿದೆ ಭಯಾನಕ ರಹಸ್ಯ

    ದೇವರಿಗೆ ಹುಣ್ಣಿಮೆ ಪೂಜೆ ಸಲ್ಲಿಸಲು ಹೋದ ತಾಯಿ ಜತೆ ಮಕ್ಕಳನ್ನೂ ಹೊತ್ತೊಯ್ದ ಜವರಾಯ!

    ಮನಸ್ಸು ನೊಂದು ರಾಜೀನಾಮೆಗೆ ನಿರ್ಧರಿಸಿದ್ದೆ.. ಸರ್ಕಾರ ಬೀಳಿಸಿ ಮತ್ತೆ ರಚಿಸುವ ಶಕ್ತಿ ನನಗಿದೆ…

    ಅಮ್ಮ ಸತ್ತ ದಿನ ವಿಷ ಕುಡಿದ, ಅಪ್ಪ ಸತ್ತಾಗ ರೈಲಿಂದ ಜಿಗಿದ… ಆದರೂ ಬದುಕಿದ್ದವ ನಿನ್ನೆ ದುರಂತ ಅಂತ್ಯಕಂಡ

    ತಡರಾತ್ರಿ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಆತ್ಮಹತ್ಯೆ! ಮುದ್ದಾದ ಯುವತಿ ಬಾಳಿಗೆ ಕೊಳ್ಳಿ ಇಟ್ಟಿದ್ಯಾರು?

    ಗಂಡನಿದ್ದರೂ ಪರಪುರುಷನ ಜತೆ ಮಹಿಳೆಯ ಕಾಮದಾಟ! ಬೇಡ ಬೇಡ ಎಂದವನ ಉಸಿರನ್ನೇ ನಿಲ್ಲಿಸಿದ್ಳು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts