More

    81ರ ವೃದ್ಧೆಗೆ 46 ವರ್ಷದ ವ್ಯಕ್ತಿಯ ಜತೆ ಮದುವೆ! ಮದುವೆಯಾದರೂ ಒಂದಾಗಲಿಲ್ಲ ಈ ಜೋಡಿ

    ಲಂಡನ್​: 81 ವರ್ಷದ ವೃದ್ಧೆಯೊಬ್ಬರು 46 ವರ್ಷದ ವ್ಯಕ್ತಿಯನ್ನು ಮದುವೆಯಾಗಿರುವ ಘಟನೆ ಬ್ರಿಟನ್​ನಲ್ಲಿ ನಡೆದಿದೆ. ಮದುವೆಯಾದರೂ ಈ ದಂಪತಿ ಒಟ್ಟಿಗೆ ಬದುಕಲಾಗುತ್ತಿಲ್ಲವೆಂದು ಇದೀಗ ವೃದ್ಧೆ ಕಣ್ಣೀರು ಸುರಿಸುತ್ತಿದ್ದಾರೆ.

    ಇದನ್ನೂ ಓದಿ: ನೀವ್ಯಾಕೆ ನನ್ನ ಪಿಆರ್​ಓ ಆಗಬಾರದು? ಕಂಗನಾಗೆ ಆಹ್ವಾನ ಕೊಟ್ಟ ದಿಲ್ಜಿತ್​

    ಐರಿಸ್​ ಜೋನ್ಸ್​ ಹೆಸರಿನ ವೃದ್ಧೆ ಬ್ರಿಟನ್​ನಲ್ಲಿ ವಾಸವಿದ್ದಾರೆ. ಈಕೆ ಫೇಸ್​ಬುಕ್​ನಲ್ಲಿ ಈಜಿಪ್ಟ್​ನ ಮೊಹಮ್ಮದ್​ ಅಹ್ಮದ್​ ಹೆಸರಿನ ವ್ಯಕ್ತಿಯೊಂದಿಗೆ ಸ್ನೇಹ ಬೆಳೆಸಿದ್ದಾರೆ. ಕೆಲವೇ ದಿನಗಳಲ್ಲಿ ಸ್ನೇಹ ಪ್ರೀತಿಗೆ ತಿರುಗಿದ್ದು, ಈಜಿಪ್ಟ್​ಗೆ ಹೋದ ಐರಿಸ್​ ಮೊಹಮ್ಮದ್​ರನ್ನು ಮದುವೆಯಾಗಿದ್ದಾರೆ. ನಂತರ ಅಲ್ಲಿನ ಹವಾಮಾನಕ್ಕೆ ಇಳಿ ವಯಸ್ಸಿನ ದೇಹ ಹೊಂದಿಕೊಳ್ಳದ ಕಾರಣ ಬ್ರಿಟನ್​ಗೆ ವಾಪಾಸಾಗಿದ್ದಾರೆ. ಆದರೆ ಮೊಹಮ್ಮದ್​ಗೆ ಬ್ರಿಟನ್​ಗೆ ಬರಲು ಸಾಧ್ಯವಾಗಿಲ್ಲ. ಅವರ ಬ್ರಿಟನ್​ ವೀಸಾ ಪಡೆಯುವಲ್ಲಿ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ಅವರು ತಮ್ಮ ಹೆಂಡತಿಯೊಂದಿಗೆ ಬದುಕಲು ಸಾಧ್ಯವಾಗುತ್ತಿಲ್ಲ.

    ಇದನ್ನೂ ಓದಿ: VIDEO| ನಡುರಸ್ತೆಯಲ್ಲಿ ಕರುವಿನ ಮೇಲೆ ಮನಸೋಇಚ್ಛೆ ಹಲ್ಲೆ ನಡೆಸಿದ ವ್ಯಕ್ತಿ

    ಮದುವೆಯಾದರೂ ಬ್ರಿಟನ್​ನಲ್ಲಿ ಒಬ್ಬಂಟಿ ಜೀವನ ನಡೆಸುತ್ತಿರುವ ಐರಿಸ್​ ಸಾಕಷ್ಟು ಬಾರಿ ಕಣ್ಣೀರು ಹಾಕಿದ್ದಾರಂತೆ. ನನಗೆ ವಯಸ್ಸಾಗಿದೆ. ಇಂದು ಅಥವಾ ನಾಳೆ ಸಾಯಬಹುದು. ನನ್ನ ಗಂಡ ನನ್ನ ಬಳಿ ಬರುವುದರೊಳಗೆ ನಾನು ಸತ್ತೇ ಹೋದರೆ ಎನ್ನುವ ಭಯವಿದೆ. ಬ್ರಿಟನ್​ ಪ್ರಧಾನಿ ಬೋರಿಸ್​ ಜಾನ್ಸನ್​ ಅವರು ದಯಮಾಡಿ ನನ್ನ ಗಂಡನಿಗೆ ವೀಸಾ ಸಿಗಲು ಸಹಾಯ ಮಾಡಬೇಕು ಎಂದು ಕೇಳಿಕೊಂಡಿದ್ದಾರೆ ಐರಿಸ್​. (ಏಜೆನ್ಸೀಸ್​)

    ಕಬ್ಬಿನ ಗದ್ದೆಯಲ್ಲಿ ಅತ್ತಿಗೆ ಮೈದುನನ ಚಕ್ಕಂದ! ಸರಸದಲ್ಲಿದ್ದ ಜೋಡಿಯನ್ನು ಕೊಚ್ಚಿ ಕೊಂದ ಗಂಡ!

    ಪಕ್ಕದ ಮನೆಯವನೊಂದಿಗೇ ಮಹಿಳೆಯ ಲವ್ವಿ ಡವ್ವಿ! ಪ್ರಿಯಕರನ ಕಾಟ ಹೆಚ್ಚಾದ ತಕ್ಷಣ ದರೋಡೆಯ ನಾಟಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts