More

    ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯದಲ್ಲಿ ಬೋಧಕೇತರ 71 ಹುದ್ದೆ ಭರ್ತಿಗೆ ಅರ್ಜಿ ಆಹ್ವಾನ

    ಬೆಂಗಳೂರು: ದೆಹಲಿಯಲ್ಲಿರುವ ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯದಲ್ಲಿ ಬೋಧಕೇತರ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಭಾರತೀಯ ಅಭ್ಯರ್ಥಿಗಳಿಗೆ ಮಾತ್ರ ಅವಕಾಶ.

    ಹುದ್ದೆಗಳ ವಿವರ: ಕ್ಯೂರೇಟರ್​-1, ಅಸಿಸ್ಟೆಂಟ್​-1, ಕಾಪಿಸ್ಟ್​-1, ಪ್ರೊಫೆಷನಲ್​ ಅಸಿಸ್ಟೆಂಟ್​-5, ಟೆಕ್ನಿಕಲ್​ ಅಸಿಸ್ಟೆಂಟ್​ (ಲ್ಯಾಬ್​) (ಎಜುಕೇಷನ್​)-2, (ಕಂಪ್ಯೂಟರ್​)-5, ಸ್ಟೆನೋಗ್ರಾಫರ್​-8, ಲೋಯರ್​ ಡಿವಿಷನ್​ ಕ್ಲರ್ಕ್-23, ಲೈಬ್ರರಿ ಅಟೆಂಡೆಂಟ್​-1, ಮಲ್ಟಿ ಟಾಸ್ಕಿಂಗ್​ ಸ್ಟ್ಯಾಫ್​-24 ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ಎಲ್ಲ ಹುದ್ದೆಗಳಿಗೂ ಮೀಸಲಾತಿ ಅನ್ವಯವಾಗಲಿದೆ.

    ವಿದ್ಯಾರ್ಹತೆ: ಹುದ್ದೆಗಳಿಗೆ ಅನುಗುಣವಾಗಿ ಸಂಸ್ಕೃತದಲ್ಲಿ ಎಂಎ, ಲೈಬ್ರರಿ/ಇನ್​ಫರ್ಮೇಷನ್​ ಸೈನ್ಸ್​/ಮ್ಯೂಸಾಲಜಿ/ ಆರ್ಕಿಯಾಲಜಿ ಡಿಪ್ಲೊಮಾ ಪದವಿ, ಇಂಗ್ಲಿಷ್​, ಹಿಂದಿ ಮತ್ತು ಸಂಸತ ಭಾಷಾ ಜ್ಞಾನ, ಕಂಪ್ಯೂಟರ್​ ಜ್ಞಾನ, ಟೈಪಿಂಗ್​, ದೇವನಾಗರಿ ಬರಹ ಜ್ಞಾನ, ಕಂಪ್ಯೂಟರ್​ ಸೈನ್ಸ್​/ಎಲೆಕ್ಟ್ರಾನಿಕ್ಸ್​ ಆ್ಯಂಡ್​ ಕಮ್ಯುನಿಕೇಷನ್ಸ್​ನಲ್ಲಿ ಬಿಎಸ್ಸಿ/ಬಿಟೆಕ್​/ಬಿಸಿಎ ಅಥವಾ ಎಂಎಸ್ಸಿ ಪದವಿ, ಎಂಸಿಎ, ದ್ವೀತಿಯ ಪಿಯುಸಿ ಅಥವಾ ಬಿಎ ಪದವಿ, ಮೆಟ್ರಿಕ್ಯುಲೇಷನ್​ ತೇರ್ಗಡೆಯಾದವರು ಅರ್ಜಿ ಸಲ್ಲಿಸಲು ಅರ್ಹರು.

    ವೇತನ: ಸಿ ಗ್ರೇಡ್​ ಹುದ್ದೆಗಳಿಗೆ 1ರಿಂದ 5ನೇ ಹಂತದ ವೇತನ ಶ್ರೇಣಿಯನ್ವಯ ಸಂಬಳ ನಿಗದಿಯಾಗಲಿದೆ. ಉಳಿದ ಹುದ್ದೆಗಳಿಗೆ 5ರಿಂದ 7ನೇ ವೇತನ ಶ್ರೇಣಿ ಅನ್ವಯ ವೇತನ ಇರಲಿದೆ.

    ವಯೋಮಿತಿ: ಹುದ್ದೆಗಳಿಗೆ ಅನುಗುಣವಾಗಿ 30ರಿಂದ 40 ವರ್ಷ ವಯೋಮಿತಿ ನಿಗದಿಪಡಿಸಿದ್ದು, ಮೀಸಲಾತಿ ಅಭ್ಯರ್ಥಿಗಳಿಗೆ ವಯೋಸಡಿಲಿಕೆ ಇರಲಿದೆ.

    ಆಯ್ಕೆ ವಿಧಾನ: ಒಬ್ಬ ಅಭ್ಯರ್ಥಿ ಹಲವು ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಆದರೆ ಪ್ರತ್ಯೇಕ ಅರ್ಜಿ ಸಲ್ಲಿಸತಕ್ಕದ್ದು. ಹುದ್ದೆಗಳ ಆಯ್ಕೆ ಪ್ರಕ್ರಿಯೆಗೆ ಸಂಬಂದಿಸಿದ ಮಾಹಿತಿಯನ್ನು ವಿವಿ ವೆಬ್​ಸೈಟ್​ನಲ್ಲಿ ತಿಳಿಸಲಾಗುವುದು. ಹಾಗೂ ಸಂಬಂಧಪಟ್ಟ ಅಭ್ಯರ್ಥಿಗಳಿಗೆ ಇ-ಮೇಲ್​ ಮೂಲಕ ತಿಳಿಸಲಾಗುವುದು. ಅರ್ಜಿಯನ್ನು ಆಧರಿಸಿ ಅರ್ಹರಿಗೆ ಲಿಖಿತ ಪರೀಕ್ಷೆ ನಡೆಸಲಾಗುವುದು. ಈ ಕುರಿತು ಸೂಚನೆಗಳನ್ನು ವೆಬ್​ಸೈಟ್​ನಲ್ಲಿ ಪ್ರಕಟಿಸಲಾಗುವುದು. ಲಿಖಿತ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳಿಗೆ ಕೌಶಲ ಪರೀಕ್ಷೆ ಇರಲಿದೆ.

    ಅರ್ಜಿ ಸಲ್ಲಿಕೆ ಪ್ರಕ್ರಿಯೆ: ನಿಗದಿತ ಅರ್ಜಿ ನಮೂನೆಯಲ್ಲಿ ಮಾಹಿತಿ ಭರ್ತಿ ಮಾಡಿ ಅರ್ಜಿಯನ್ನು ಆನ್​ಲೈನ್​ ಮೂಲಕವೇ ಸಲ್ಲಿಸತಕ್ಕದ್ದು. 1000 ರೂ. ಅರ್ಜಿ ಶುಲ್ಕವಿರಲಿದ್ದು, ಮೀಸಲಾತಿ ಅಭ್ಯರ್ಥಿಗಳು 500 ರೂ. ಶುಲ್ಕ ಪಾವತಿಸಬೇಕು. ಶುಲ್ಕ ಪಾವತಿಸದ, ಅಪೂರ್ಣವಾದ ಅರ್ಜಿ ತರಸ್ಕರಿಸಲಾಗುವುದು.

    ಅರ್ಜಿ ಸಲ್ಲಿಸಲು ಕೊನೇ ದಿನ: 7.11.2022
    ಅಧಿಸೂಚನೆಗೆ: https://bit.ly/3rNQfbq
    ಮಾಹಿತಿಗೆ: www.sanskrit.nic.in

    ಮಂಡ್ಯ ಯುವಕನ ಮತಾಂತರ: ಬಿಬಿಎಂಪಿ ಮಾಜಿ ಕಾರ್ಪೋರೇಟರ್ ಬಂಧನ

    ರಾಜ್ಯಾದ್ಯಂತ ‘ಪುನೀತ್ ಫುಡ್ ಫೆಸ್ಟಿವಲ್’! ಅಪ್ಪು ಇಷ್ಟಪಡುತ್ತಿದ್ದ ಎಲ್ಲ ರೀತಿಯ ಆಹಾರ ಸವಿಯಲು ಫ್ಯಾನ್ಸ್​ಗೆ ಅವಕಾಶ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts