More

    ತೋಟದ ಮನೆಯಲ್ಲಿ ನಾಯಿಯನ್ನು ನುಂಗಲು ಕಾಫಿ ತೋಟಕ್ಕೆ ಬಂದ 13 ಅಡಿ ಉದ್ದದ ಹೆಬ್ಬಾವು

    ಚಿಕ್ಕಮಗಳೂರು: ಕಾಫಿ ತೋಟಕ್ಕೆ ಬಂದಿದ್ದ 13 ಅಡಿ ಉದ್ದದ ಹೆಬ್ಬಾವನ್ನು ಸ್ನೇಕ್ ನರೇಶ್ ಎಂಬುವವರು ರಕ್ಷಿಸಿ ಚುರ್ಚೆಗುಡ್ಡದ ಅರಣ್ಯಕ್ಕೆ ಸುರಕ್ಷಿತವಾಗಿ ಬಿಟ್ಟು ಬಂದಿದ್ದಾರೆ.

    ಚಿಕ್ಕಮಗಳೂರು ತಾಲೂಕಿನ ಮಲ್ಲೇನಹಳ್ಳಿ ಸಮೀಪದ ಚಿನ್ಮಕ್ಕಿ ಗ್ರಾಮದ ತಾರೇಶ್ ಎಂದಿನಂತೆ ಬುಧವಾರ ಕಾಫಿ ತೋಟದಲ್ಲಿ ಓಡಾಡುವಾಗ ಹೆಬ್ಬಾವು ಹರಿದಾಡುತ್ತಿರುವುದನ್ನು ಕಂಡಿದ್ದಾರೆ. ನಂತರ ಬೇಲಿ ಮೇಲೆ ಬಂದು ಹಾವು ಮಲಗಿದೆ. ಕಾರ್ಮಿಕರು ಹಾಗೂ ಸ್ಥಳೀಯರು ಭಾರಿ ಗಾತ್ರದ ಹಾವನ್ನು ನೋಡಿ ಭಯಗೊಂಡಿದ್ದಾರೆ. ಕೂಡಲೇ ಸ್ನೇಕ್ ನರೇಶ್‌ಗೆ ಕರೆ ಮಾಡಿದಾಗ ಅವರು ಬಂದು ಹಾವನ್ನು ಸೆರೆ ಹಿಡಿದರು. ಗ್ರಾಮಸ್ಥರು, ಮಕ್ಕಳು ಹಾವನ್ನು ಮುಟ್ಟಿ, ಹೆಗಲ ಮೇಲೆ ಹೊತ್ತು ಸಂಭ್ರಮಿಸಿ ಸೆಲ್ಫಿ ಕ್ಲಿಕ್ಕಿಸಿಕೊಂಡರು.

    ತೋಟದ ಮನೆಯಲ್ಲಿ ನಾಯಿಯನ್ನು ನುಂಗಲು ಕಾಫಿ ತೋಟಕ್ಕೆ ಬಂದ 13 ಅಡಿ ಉದ್ದದ ಹೆಬ್ಬಾವು

    ಹೆಬ್ಬಾವು ಮಂಗಳವಾರ ರಾತ್ರಿ ತೋಟದ ಮನೆಯಲ್ಲಿದ್ದ ನಾಯಿ ಹಿಡಿಯಲು ಹೋಗಿ ವಿಫಲವಾಗಿ ತೋಟದಲ್ಲೇ ಓಡಾಡುತ್ತಿತ್ತು. ರಾತ್ರಿ ರಸ್ತೆ ದಾಟುವಾಗ ನೋಡಿದ್ದ ಗ್ರಾಮಸ್ಥರು ಬೆಳಗ್ಗೆ ನೋಡಿದಾಗ ಮನೆ ಎದುರು ಹರಿದಾಡುತ್ತಿದ್ದುದು ಮಾಲೀಕರ ಕಣ್ಣಿಗೆ ಬಿದ್ದಿತ್ತು. ಆಹಾರಕ್ಕಾಗಿ ಕಾಡಿನಿಂದ ಹೊರಬಂದು ಆಹಾರ ಹುಡುಕುತ್ತಾ ಓಡಾಡುವುದು ಸಾಮಾನ್ಯ ಎಂದು ಸ್ನೇಕ್ ನರೇಶ್ ತಿಳಿಸಿದರು.

    ಹರ್ಷನ ಅಕ್ಕನಿಗೆ ಬಿಜೆಪಿಯಿಂದ ಟಿಕೆಟ್ ಕೊಡಿ ಎಂದವರಿಗೆ ಗೃಹ ಸಚಿವ ಕೊಟ್ಟ ಟಾಂಗ್​ ಹೀಗಿದೆ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts