More

    102ನೇ ವಯಸ್ಸಿನಲ್ಲೂ ಸಕ್ರಿಯ, ಈಕೆಗಿದೆ ಇನ್ನೂ ಹತ್ತು ವರ್ಷ ಬದುಕುವ ಯೋಚನೆ!

    ನವದೆಹಲಿ: ಊರು ಹೋಗು ಎನ್ನುತ್ತಿದೆ, ಕಾಡು ಬಾ ಅಂತಿದೆ ಅಂತ ವಯೋವೃದ್ಧರಲ್ಲಿ ಕೆಲವರು ಮಾತನಾಡುವುದನ್ನು ಕೇಳಿರುತ್ತೇವೆ. ವಯಸ್ಸಾಗುತ್ತಿದ್ದಂತೆ ಹೀಗೆ ನಿರಾಸಕ್ತಿಯಿಂದ ಜೀವನೋತ್ಸಾಹ ಕಳೆದುಕೊಂಡವರಂತೆ ಮಾತನಾಡುವವರು ಕೆಲವರಿರುತ್ತಾರೆ. ಆದರೆ ಇಲ್ಲೊಬ್ಬಾಕೆ 102ನೇ ವಯಸ್ಸಿನಲ್ಲೂ ಸಕ್ರಿಯವಾಗಿರುವುದು ಮಾತ್ರವಲ್ಲ, ಇನ್ನೂ ಕನಿಷ್ಠ ಹತ್ತು ವರ್ಷ ಬದುಕುವ ಯೋಚನೆಯೂ ಇದ್ಯಂತೆ!

    ಇದನ್ನೂ ಓದಿ: ಚುನಾವಣೋತ್ತರ ಸಮೀಕ್ಷೆ- ದಿಗ್ವಿಜಯ ನ್ಯೂಸ್​: ಇಲ್ಲಿದೆ ಲೈವ್ ಅಪ್​ಡೇಟ್ಸ್​

    ಗ್ಲ್ಯಾಡಿಸ್ ಮೆಕ್​ಗ್ರೇ ಎಂಬ ಈ ಮಹಿಳೆಯ ವಯಸ್ಸು 102. ವೈದ್ಯೆ ಆಗಿರುವ ಈಕೆ ಇನ್ನೂ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಅಮೆರಿಕದ ಅರಿಜೋನಾದಲ್ಲಿ ನೆಲೆಸಿರುವ ಈಕೆ ಇನ್ನೂ ಹತ್ತು ವರ್ಷಗಳ ಕಾಲ ಬದುಕುವ ಯೋಜನೆ ಹಾಕಿಕೊಂಡಿದ್ದಾರೆ. ಈಕೆಯ ಐವರು ಮಕ್ಕಳು ಹಾಗೂ ಮಾಜಿ ಪತಿ ಈಗಾಗಲೇ ಮೃತಪಟ್ಟಿದ್ದಾರೆ.

    ಇದನ್ನೂ ಓದಿ: EXIT POLL ಪ್ರಕಟ: ಈ ಬಾರಿ ಯಾರಿಗೆ ಬಹುಮತ? ಇಲ್ಲಿದೆ ವಿವರ…

    ಅಮೆರಿಕದ ಅರಿಜೋನಾದಲ್ಲಿ ನೆಲೆಸಿರುವ ಈಕೆ ‘ದ ವೆಲ್ ಲಿವ್ಡ್ ಲೈಫ್: ಎ 102 ಈಯರ್ ಓಲ್ಡ್​ ಡಾಕ್ಟರ್ಸ್​ ಸಿಕ್ಸ್ ಸೀಕ್ರೆಟ್ಸ್​ ಟು ಹೆಲ್ತ್ ಆ್ಯಂಡ್ ಹ್ಯಾಪಿನೆಸ್ ಎಟ್ ಎವೆರಿ ಏಜ್’ ಎಂಬ ಪುಸ್ತಕವನ್ನೂ ಬರೆದಿದ್ದಾರೆ. ದಿನಾ ಬೆಳಗ್ಗೆ ಪ್ರಾರ್ಥನೆ, ಕೆಲವು ಜ್ಯೂಸ್ ಹಾಗೂ ನಿಯಮಿತ ಅಭ್ಯಾಸಗಳನ್ನು ಹೊಂದಿರುವ ಅವುಗಳ ಕುರಿತು ಈ ಪುಸ್ತಕದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

    ಈ ಮಗುವಿಗೆ ಮೂವರು ಪೇರೆಂಟ್ಸ್; ಇಲ್ಲಿ ಜನಿಸುತ್ತಿವೆ ‘ಡಿಸೈನರ್ ಬೇಬಿಸ್’!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts