ವಿಜಯವಾಡ: ಕೊವಿಡ್-19 ಸೋಂಕಿಗೆ ಸಂಭಾವ್ಯ ಚಿಕಿತ್ಸೆಯ ಪ್ರಕ್ರಿಯೆಯನ್ನು ಅಭಿವೃದ್ಧಿಪಡಿಸುವ ಮೂಲಕ ಭಾರತೀಯ ಮೂಲದ ಅಮೆರಿಕಾದ 14 ವರ್ಷದ ವಿದ್ಯಾರ್ಥಿನಿ ಅನಿಕಾ ಚೆಬ್ರೊಲು ‘2020ರ 3 ಎಂ ಯಂಗ್ ಚಾಲೆಂಜ್’ ನ್ನು ಗೆದ್ದಿದ್ದಾರೆ. ಮೂಲತಃ ಆಂಧ್ರಪ್ರದೇಶದ ಗುಂಟೂರಿನವರಾದ ಅನಿಕಾ, ಟೆಕ್ಸಾಸ್ನ ಫ್ರಿಸ್ಕೋದಲ್ಲಿ ನೆಲೆಸಿದ್ದಾರೆ.
ಜಗತ್ತಿನಾದ್ಯಂತ ಅನೇಕ ವಿಜ್ಞಾನಿಗಳು ಕರೊನಾಕ್ಕೆ ಲಸಿಕೆ, ಔಷಧ ಕಂಡು ಹಿಡಿಯಲು ಇನ್ನಿಲ್ಲದ ಪ್ರಯತ್ನ ಮಾಡುತ್ತಿದ್ದರೂ ಇದುವರೆಗೂ ಯಾವೊಂದು ಫಲಿತಾಂಶವೂ ಬರಲಿಲ್ಲ. ಹೀಗಿರುವಾಗ 14ವರ್ಷದ ಬಾಲಕಿ ಸಂಭಾವ್ಯ ಚಿಕಿತ್ಸೆಯನ್ನು ಅಭಿವೃದ್ಧಿಪಡಿಸುವ ಮೂಲಕ 25,000 ಡಾಲರ್ ಗೆದ್ದಿದ್ದು ಅಮೋಘ ಸಾಧನೆಯಾಗಿದೆ. ಇದನ್ನೂ ಓದಿ: ವೈಯಕ್ತಿಕ ನೋವಿನ ನಡುವೆ ಐಪಿಎಲ್ನಲ್ಲಿ ಮಿಂಚುತ್ತಿದ್ದಾರೆ ಕ್ರಿಕೆಟಿಗರು!
‘3ಎಂ’ ತನ್ನ ವೆಬ್ಸೈಟ್ನಲ್ಲಿ ಅನಿಕಾಳ ಸಾಧನೆಗಳನ್ನು ವಿವರಿಸಿದೆ. ಅನಿಕಾಳೊಂದಿಗೆ ಈ ಸ್ಪರ್ಧೆಯಲ್ಲಿ ಸಂಹಿತಾ ಪೊಕ್ಕುನುರಿ, ಹರ್ಷಾ ಪಿಲ್ಲಾರಿಸೆಟ್ಟಿ ಮತ್ತು ಸಮ್ವ್ರಿತ್ ರಾವ್ ಎಂಬುವರೂ ಪಾಲ್ಗೊಂಡು, ಅವರೂ ಕೂಡ ಗಮನಾರ್ಹ ಸಾಧನೆ ಮಾಡಿದ್ದಾರೆ ಎಂದು ಉಲ್ಲೇಖವಾಗಿದೆ. ಕೊವಿಡ್-19 ನಿವಾರಣಾ ಔಷಧಿ ಕಂಡುಹಿಡಿಯಲು ಅನಿಕಾ ಇನ್-ಸಿಲಿಕಾ ವಿಧಾನವನ್ನು ಬಳಸಿಕೊಂಡಿದ್ದಾರೆ ಎಂದು ವೆಬ್ಸೈಟ್ನಲ್ಲಿ ಹೇಳಲಾಗಿದೆ. (ಏಜೆನ್ಸೀಸ್)
ಬಾಡಿಗೆ ಪಾವತಿ ವಿಚಾರ: ಕೇಂದ್ರ ಸಚಿವ ಪೋಖ್ರಿಯಾಲ್ ವಿರುದ್ಧದ ನ್ಯಾಯಾಂಗ ನಿಂದನೆಗೆ ಸುಪ್ರೀಂ ತಡೆ