ಲಂಡನ್: ಪಾನಮತ್ತ ಬ್ರಿಟಿಷ್ ಯುವತಿಯೊಬ್ಬಳು ಟಂಬಲ್ ಡ್ರೈಯರ್ನಲ್ಲಿ ಸಿಲುಕಿ ಪರದಾಡಿದ ಘಟನೆ ಇಂಗ್ಲೆಂಡ್ ಹಂಬರ್ಸೈಡ್ ನಗರದಲ್ಲಿ ನಡೆದಿದ್ದು, ಕೊನೆಗೆ ಯುವತಿಯನ್ನು ಅಗ್ನಿಶಾಮಕ ಸಿಬ್ಬಂದಿ ರಕ್ಷಣೆ ಮಾಡಿದೆ. ಇದೀಗ ಇದಕ್ಕೆ ಸಂಬಂಧಿಸಿದ ವಿಡಿಯೋ ಟಿಕ್ಟಾಕ್ನಲ್ಲಿ ವೈರಲ್ ಆಗಿದೆ.
ಯುವತಿಯನ್ನು ರೋಸಿ ಕೋಲ್ (21) ಎಂದು ಗುರುತಿಸಲಾಗಿದೆ. ಈಕೆ ಯೂನಿವರ್ಸಿಟಿಯ ವಿದ್ಯಾರ್ಥಿನಿಯಾಗಿದ್ದಾಳೆ. ತನ್ನ ಸಹವಾಸಿಗಳ ಜತೆ ಸೇರಿ ಮದ್ಯ ಸೇವಿಸಿದ್ದ ರೋಸಿ, ಮದ್ಯದ ನಶೆಯಲ್ಲಿ ಟಂಬಲ್ ಡ್ರೈಯರ್ ಒಳಗೆ ಹೋಗಲು ಧೈರ್ಯ ಮಾಡಿ ಹೊರಬರಲಾಗದೆ ರೋಸಿ ಸಿಲುಕಿದ್ದಾಳೆ. ಹೊರಬರಲು ಸಾಕಷ್ಟು ಪ್ರಯತ್ನಿಸಿದ್ದಾಳೆ. ಫ್ರೆಂಡ್ಸ್ ಸಹ ಯತ್ನಿಸಿ, ಸಾಧ್ಯವಾಗದಿದ್ದಾಗ. ನಿನ್ನೆ ರಾತ್ರಿ 11 ಗಂಟೆಗೆ ತುರ್ತು ಸೇವೆಗೆ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಕಲ್ಯಾಣ್ ಪತ್ನಿ ಐಶ್ವರ್ಯಾ ಕುಟುಂಬದ ಆಪ್ತ ಶಿವಾನಂದ ವಾಲಿ ಮನೆಯಲ್ಲಿ ಮಾಟ-ಮಂತ್ರದ ವಸ್ತುಗಳು !
ಸ್ಥಳಕ್ಕೆ ಆಗಮಿಸಿದ ಹಂಬರ್ಸೈಡ್ ಅಗ್ನಿಶಾಮಕ ಮತ್ತು ರಕ್ಷಣಾ ಸೇವಾ ಸಿಬ್ಬಂದಿ ಗಾಯಗೊಳ್ಳದಂತೆ ಸುರಕ್ಷಿತವಾಗಿ ರೋಸಿಯನ್ನು ಯಂತ್ರದಿಂದ ಬಿಡಿಸಿದ್ದಾರೆ. ಯುವತಿ ಸುಮಾರು 20 ನಿಮಿಷ ಡ್ರೈಯರ್ನಲ್ಲಿ ಸಿಲುಕಿದ್ದಳು. ಯಂತ್ರದಿಂದ ಹೊರಬಂದ ಬೆನ್ನಲ್ಲೇ ರೋಸಿ ತುಂಬಾ ಸಂತಸಗೊಂಡು ಕುಣಿದಾಡಿದ್ದಾಳೆ.
ಇದಕ್ಕೆ ಸಂಬಂಧಿಸಿದ ವಿಡಿಯೋಗಳನ್ನು ರೋಸಿ ಮತ್ತು ಆಕೆಯ ಸ್ನೇಹಿತೆ ಲೈಡಿಯಾ ದನ್ವೆಲ್ ಟಿಕ್ಟಾಕ್ನಲ್ಲಿ ಶೇರ್ ಮಾಡಿಕೊಂಡಿದ್ದು, ರೋಸಿ ಪರದಾಟ ನೋಡಿ ಅನೇಕರು ನಕ್ಕಿದ್ದರೆ, ಇನ್ನು ಕೆಲವರು ಎಚ್ಚರಿಕೆ ಇರಲೆಂದು ಸಲಹೆ ನೀಡಿದ್ದಾರೆ. ಸದ್ಯ ವಿಡಿಯೋ ಮಾತ್ರ ವೈರಲ್ ಆಗಿದೆ. (ಏಜೆನ್ಸೀಸ್)
— TheTabTikToks (@TikTab) October 2, 2020
— TheTabTikToks (@TikTab) October 2, 2020