ಹೈದರಾಬಾದ್: ಮಲ ತಂದೆಯ ಲ್ಯಾಪ್ಟಾಪ್ನಲ್ಲಿ ತನ್ನ ನಗ್ನ ಚಿತ್ರಗಳನ್ನು ನೋಡಿದ ಯುವತಿಯೊಬ್ಬಳು ಅಘಾತಕ್ಕೊಳಗಾದ ಘಟನೆ ತೆಲಂಗಾಣದ ಮುನ್ಸಿಪಾಲಿಟಿ ನಾಚಾರಾಮ್ನಿಂದ ವರದಿಯಾಗಿದೆ.
ಆರೋಪಿಯನ್ನು 40 ವರ್ಷದ ರೆಸ್ಟೋರೆಂಟ್ ಮಾಲೀಕ ರಾಜೇಶ್ ಎಂದು ಗುರುತಿಸಲಾಗಿದೆ. ತನ್ನ ಮಗಳು ಅಪ್ರಾಪ್ತೆಯಾಗಿದ್ದ ಸಮಯದಲ್ಲಿ ಆರೋಪಿ ನಗ್ನ ಚಿತ್ರಗಳನ್ನು ತೆಗೆದು ಲ್ಯಾಪ್ಟಾಪ್ನಲ್ಲಿ ಸೇವ್ ಮಾಡಿಟ್ಟುಕೊಂಡಿದ್ದ.
ಇದನ್ನೂ ಓದಿ: ಬಾಲಿವುಡ್ ಇಂಡಸ್ಟ್ರಿಯನ್ನೇ ನಡುಗಿಸಿದ ಟಾಪ್ 6 ಸೆಕ್ಸ್ ಸ್ಕ್ಯಾಂಡಲ್ಗಳು ಯಾವವು ಗೊತ್ತಾ?
ಇದೀಗ ಸಂತ್ರಸ್ತೆಗೆ 20 ವರ್ಷ ವಯಸ್ಸಾಗಿದ್ದು, ಕಾನೂನು ವಿದ್ಯಾರ್ಥಿನಿಯಾಗಿರುವ ಆಕೆ ಜುಲೈನಲ್ಲಿ ಮಲ ತಂದೆಯ ಲ್ಯಾಪ್ಟಾಪ್ ಬಳಸುವಾಗ ತನ್ನದೇ ನಗ್ನ ಚಿತ್ರಗಳನ್ನು ನೋಡಿ ಬೆಚ್ಚಿಬಿದ್ದಿದ್ದಾಳೆ. ಫೋಟೋಗಳನ್ನು ತೆಗೆದಾಗ ಸಂತ್ರಸ್ತೆಗೆ 14 ಅಥವಾ 15 ವರ್ಷ ವಯಸ್ಸಾಗಿತ್ತು ಎಂದು ನಾಚಾರಾಮ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಕಿರಣ್ ಕುಮಾರ್ ತಿಳಿಸಿದ್ದಾರೆ.
ಅಂದಹಾಗೆ ಆರೋಪಿ ರಾಜೇಶ್ಗೆ ಸಂತ್ರಸ್ತೆ ಯುವತಿಯ ತಾಯಿ ಎರಡನೇ ಪತ್ನಿಯಾಗಿದ್ದಾಳೆ. ಲ್ಯಾಪ್ಟಾಪ್ ಫೋಟೋಗಳಿರುವ ಬಗ್ಗೆ ಯುವತಿ ತನ್ನ ತಾಯಿಗೆ ತಿಳಿಸಿದ್ದಾಳೆ. ಬಳಿಕ ಇಬ್ಬರು ತೆರಳಿ ಠಾಣೆಗೆ ದೂರು ನೀಡಿದ್ದು, ಜುಲೈ 29ರಂದು ದೂರು ದಾಖಲಾಗಿದೆ.
ಆರೋಪಿಯನ್ನು ಈ ಮೊದಲೇ ಬಂಧಿಸಿದ್ದೆವು. ಆದರೆ, ಆತನಿಗೆ ಕರೊನಾ ವೈರಸ್ ಪಾಸಿಟಿವ್ ಇದೆ. ಗುಣಮುಖವಾದ ಬಳಿಕ ಆತನನ್ನು ಸೋಮವಾರ ವಶಕ್ಕೆ ಪಡೆದುಕೊಂಡಿದ್ದೇವೆಂದು ಮಲ್ಕಜ್ಗಿರಿ ಎಸಿಪಿ ನರಸಿಂಹ ರೆಡ್ಡಿ ತಿಳಿಸಿದ್ದಾರೆ.
ಆರೋಪಿ ವಿರುದ್ಧ ಪೊಕ್ಸೊ ಸೇರಿದಂತೆ ಇತರೆ ಐಪಿಸಿ ಸೆಕ್ಸನ್ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದು, ನ್ಯಾಯಾಂಗ ಬಂಧನಕ್ಕೆ ಕಳಹಿಸಲಾಗಿದೆ. (ಏಜೆನ್ಸೀಸ್)
ಇದನ್ನೂ ಓದಿ: ಮಗಳು ಬೇರೊಬ್ಬನ ಜತೆ ಹೋದಾಗ, ರಾಮ್ ಚರಣ್ ಚಿತ್ರ ಸೋತಾಗ ಆತ್ಮಹತ್ಯೆಗೆ ನಿರ್ಧರಿಸಿದ್ದೆ
ಆಗ್ರಾದಲ್ಲಿ 34 ಪ್ರಯಾಣಿಕರಿದ್ದ ಬಸ್ ಹೈಜಾಕ್: ಮಾಲೀಕನ ಸಾವೇ ಇದಕ್ಕೆ ಕಾರಣ!